
ಕ್ರಿಸ್ಮಸ್ ಹಾಗೂ ಹೊಸ ವರ್ಷಾ ಭೋಜನಕೂಟ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ೦೩- ನಗರದ ವಿಜಯ ಮೇರಿ ವಿದ್ಯಾ ಸಂಸ್ಥೆ ಹಾಗೂ ಜೆಎಂ ಜೆ ಚರ್ಚ್ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಭೋಜನಕೂಟ ಏರ್ಪಡಿಸಿಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಬಿ ಎಂ ನಾಗರಾಜ ಅವರು ಪಾಲ್ಗೊಂಡು ಎಲ್ಲಾ ಮುಖ್ಯಸ್ಥರಿಗೆ ಶಾಲಾ ಶಿಕ್ಷಕ ಶಿಕ್ಷಕಿಯರ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಶುಭಾಶಯ ಅಭಿನಂದನೆ ಕೋರಿದರು ನಗರಸಭಾ ಸದಸ್ಯರಾದ ಬಿ ವೆಂಕಟೇಶ್ ಹೆಚ್ ಗಣೇಶ್ ಕಾಂಗ್ರೆಸ್ ಮುಖಂಡರಾದ ಬೆಳಗಲ್ಲು ಸುರೇಶ್ ಮೆಕಾನಿಕ್ ರಾಜಣ್ಣ ಟಿ ಸಿ ಮೋಹನ್ ಹಾಗೂ ವಿಜಯ ಮೇರಿ ಶಾಲೆಯ ಮುಖ್ಯಸ್ಥರು ಸಹ ಶಿಕ್ಷಕರು ಉಪಸ್ಥಿತರಿದ್ದರು