
ಸಿರಿಗೇರಿಯಿಂದ ಸಿರುಗುಪ್ಪ ಮತ್ತು ಬಳ್ಳಾರಿ ನಗರ ಮತ್ತು ವಿವಿಧ ಗ್ರಾಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಮನವಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,25- ತಾಲೂಕು ಸಿರಿಗೇರಿ ಗ್ರಾಮದಿಂದ ಸಿರುಗುಪ್ಪ ಮತ್ತು ಬಳ್ಳಾರಿ ನಗರ ಮತ್ತು ವಿವಿಧ ಗ್ರಾಮಗಳಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಸಿರಿಗೇರಿ ಗ್ರಾಮಸ್ಥರಾದ ಎಸ್ಎಂ ನಾಗರಾಜ ಸ್ವಾಮಿ, ಕೆ ದ್ಯಾವಣ್ಣ, ಡ್ರೈವರ್ ಹುಲುಗಪ್ಪ, ಬಿ ಸೋಮಶೇಖರಪ್ಪ, ಬಿ ನಾಗೇಂದ್ರ ಭಜಂತ್ರಿ, ಸಿಎಂ ನಾಗರಾಜ, ರಮೇಶ್ ಎನ್ ಕುಮಾರ್, ಲಕ್ಷ್ಮಣ್ ಭಂಡಾರಿ, ಎನ್ ವಿರೂಪಾಕ್ಷಿ, ಎಸ್ಎಂ ಭೀಮಲಿಂಗಯ್ಯ ಕೊಂಚಿಗೇರಿ, ವೀರೇಶ್ ಮತ್ತಿತರರು ಬಳ್ಳಾರಿ ವಿಭಾಗಿಯ ನಿಯಂತ್ರಣ ಅಧಿಕಾರಿ ಇನಾಯತ್ ಬಾಗ್ ಬಾನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅವರು ಮಾತನಾಡಿ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಬಸ್ ಓಡಿಸುವ ಭರವಸೆಯನ್ನು ನೀಡಿದರು.