
ಸಿರಿಗೇರಿ: ವಿವಿಧ ಗ್ರಾಮ ದೇವತೆಯರ
ವೈಭವದಿಂದ ಅದ್ದೂರಿ ಕುಂಭೋತ್ಸವ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ , ೨೧- ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ 9 ವರ್ಷಕ್ಕೆ ಒಂದು ಸಾರಿ ನಡೆಯುವ ಗ್ರಾಮದ ಎಲ್ಲಾ ದೇವತೆಗಳಿಗೆ ಗ್ರಾಮಸ್ಥರು ನೈವೇದ್ಯ ಅರ್ಪಿಸಿ ಸಂಭ್ರಮ ವೈಭವದಿಂದ ಜರುಗಿತು.
ವಿವಿಧ ಗ್ರಾಮ ದೇವತೆಯರಿಗೆ ದೇವಿಯರಾದ ಮಾರೆಮ್ಮ ದೇವಿ ದೊಗಲಮ್ಮ ದೇವಿ ಕೆಂಚಮ್ಮ ದೇವಿ ಕುಂಬಾರ ದ್ಯಾವಮ್ಮ ದೇವಿ ಕುರುಬರ ದ್ಯಾವಮ್ಮ ದೇವಿ ಶ್ರೀ ಗರ್ಜಿನ ಗಡ್ಡೆ ತಾಯಮ್ಮ ದೇವಿ ಸಿರಿಗೇರಮ್ಮ ದೇವಿ ಕಾಳಿಕಾದೇವಿಯರಿಗೆ ಹರಕೆ ಹೊತ್ತ ಗ್ರಾಮಸ್ಥರು ಮಡಿಯಿಂದ ಮಾಡಿದ ಪ್ರಸಾದವನ್ನು ಇರಿಸಿ ಕುಂಭವನ್ನು ಮಂಗಳವಾದ್ಯಗಳೊಂದಿಗೆ ಸುಮಂಗಳಿಯರ ಕಳಸದೊಂದಿಗೆ ಮೆರವಣಿಗೆ ಮೂಲಕ ತೆರಳಿ ಕುಂಬಾವನ್ನು ಸಮರ್ಪಿಸಿದರು ಸಾವಿರಾರು ಜನರು ಪಾಲ್ಗೊಂಡಿದ್ದರು.