
ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ
ಶಾಸಕ ಬಿ ಎಂ ನಾಗರಾಜ್ ಚಾಲನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ೨೫- ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಆನೆಯ ಅಂಬಾರಿ ಮೇಲೆ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಚಾಲನೆ ಶಾಸಕ ಬಿ ಎಂ ನಾಗರಾಜ್
ಸಿರುಗುಪ್ಪ ನಗರದ ಪ್ಯಾಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೊಸ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಮಿಟಿಯ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಆನೆಯ ಅಂಬಾರಿ ಮೇಲೆ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯನ್ನು ಶಾಸಕ ಬಿ ಎಂ ನಾಗರಾಜ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸಿ ಸುರೇಂದ್ರನಾಥ್ ಅವರು ನಗರಸಭಾ ಸದಸ್ಯರಾದ ಬಿ. ವೆಂಕಟೇಶ್ ಹೆಚ್. ಗಣೇಶ್ ಈರಣ್ಣ ಗುರುಸ್ವಾಮಿ ಬಿ ಉಮೇಶ್ ಗೌಡ ಸಮಾಜ ಸೇವಕ ನೌಷಾದ್ ಅಲಿ ಹೊಸ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು