WhatsApp Image 2024-05-26 at 3.46.00 PM

ಸಿರುಗುಪ್ಪ ಕುಡಿಯುವ ನೀರು ಪೂರೈಕೆ ಕೆರೆಯಲ್ಲಿ ತಳಮಟ್ಟಕ್ಕೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 26- ನಗರಕ್ಕೆ ನೀರು ಪೂರೈಕೆ ಮಾಡುವ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಮಟ್ಟ ತಳ ಮಟ್ಟಕ್ಕೆ ಮುಟ್ಟಿದ್ದು ನಗರಕ್ಕೆ 15 ದಿನಗಳಿಗೊಮ್ಮೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಸದ್ಯ ಕೆರೆಯಲ್ಲಿ ಸಂಗ್ರಹ ಇರುವ ನೀರು, ಜೂನ್ 15ರ ವರೆಗೆ ಮಾತ್ರ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಹೊರ ವಲಯದಲ್ಲಿ 84 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಕೆರೆಯಲ್ಲಿ 2,500 ಗ್ಯಾಲನ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು ಬೇಸಿಗೆಯ ನಾಲ್ಕು ತಿಂಗಳ ಕಾಲ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈ ಕೆರೆಯನ್ನು ನಿರ್ಮಾಣ ಮಾಡಲಾಗಿತ್ತು ಆದರೆ 2023 ಮಾರ್ಚ್ 22 ರಂದು ಈ ಕೆರೆಯನ್ನು ಲೋಕಾರ್ಪಣೆ ಮಾಡಲಾಗಿತ್ತು ವಿವಿಧ ಕಾರಣಗಳಿಂದ ಕೆರೆಯಿಂದ ನೀರು ಪೂರೈಕೆ ಮಾಡಲು ನಗರ ಸಭೆ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಂಡಿರಲಿಲ್ಲ.

ತುಂಗಭದ್ರಾ ನದಿಯಲ್ಲಿ ಬೇಸಿಗೆಗೆ ಮುನ್ನವೇ ನೀರು ಬತ್ತಿ ಹೋಗಿದ್ದರಿಂದ ತುಂಗಭದ್ರಾ ನದಿ ಪಾತ್ರದಲ್ಲಿರುವ ಹರಿ ಗೋಲ್ ಘಾಟ್ ನಿಂದ ನಗರದ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು ಹರಿ ಗೋಲ್ ಘಾಟ್ ನಲ್ಲಿ ಸಂಗ್ರಹವಾಗಿದ್ದ ನೀರನ್ನು ನಾಲ್ಕು ತಿಂಗಳವರೆಗೆ ನಗರಕ್ಕೆ ಪೂರೈಕೆ ಮಾಡಬಹುದೆಂದು ನಗರ ಸಭೆ ಅಧಿಕಾರಿಗಳು ಅಂದಾಜಿಸಿ ಇದ್ದರು ಆದರೆ ಹರಿ ಗೋಲ್ ಘಾಟ್ ಸುತ್ತಮುತ್ತಲಿನ ರೈತರು ಭತ್ತ ಸೇರಿ ದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರಿಂದ ಹರಿ ಗೋಲ್ ಘಾಟ್ ನಲ್ಲಿ ಎರಡು ತಿಂಗಳಲ್ಲಿಯೇ ನೀರು ಖಾಲಿ ಯಾಗಿದ್ದು ಅನಿವಾರ್ಯವಾಗಿ ಕೆರೆಯಿಂದ ನೀರು ಪೂರೈಕೆ ಮಾಡಲು ನಗರ ಸಭೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು.

ನೀರನ್ನು ಮೂರು ತಿಂಗಳವರೆಗೆ ಪೂರೈಕೆ ಮಾಡಬಹುದು ಎಂದು ನಗರಸಭೆ ಅಧಿಕಾರಿಗಳು ಲೆಕ್ಕಾಚಾರ ಹಾಕಿ ಕಳೆದ ಎರಡು ತಿಂಗಳಿಂದ ಎಂಟು ದಿನಕ್ಕೊಮ್ಮೆ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದರು ಆದರೆ ತೆರೆಯಲ್ಲಿ ನೀರಿನ ಮಟ್ಟ ತಳಮಟ್ಟ ಮುಟ್ಟಿ ಕೊಡುವುದರಿಂದ ಮೇ ತಿಂಗಳ ಕೊನೆಯ ವಾರದಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ನೀರು ಬಿಡಲು ನಗರ ಸಭೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ ಕುಡಿಯುವ ನೀರಿನ ತುಂಬಿಸಲು ನಗರ ಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ಸಿದ್ದರಿಂದ ಅವರಿಗೆ ಮುನ್ನವೇ ಕೆರೆಯಲ್ಲಿ ನೀರು ಖಾಲಿ ಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಕೆರೆಯನ್ನು ತುಂಬಿದರೆ ನಾಲ್ಕು ತಿಂಗಳ ಕಾಲ ನಗರಕ್ಕೆ ನೀರು ಪೂರೈಕೆ ಮಾಡಲು ಸಾಧ್ಯವಿತ್ತು ಎಂದು ನಗರ ನಿವಾಸಿಗಳಾದ ರವಿಕುಮಾರ್ ರಫೀಕ್ ರಾಜ ರಂಗಪ್ಪ ಮುದುಕಪ್ಪ ಮಲ್ಲಿಕಾರ್ಜುನ ಹಾಜಿ ಅಬ್ದುಲ್ ಹಮೀದ್ ಫಾರೂಕಿ ಮತ್ತಿತರರು ತಿಳಿಸಿದ್ದಾರೆ.

ನಗರ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರಸಭೆಗೆ ಸಂಬಂಧಿಸಿದ 228 ಬೋರ್ವೆಲ್ ಮತ್ತು ನಾಲ್ಕು ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಬ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಅಲ್ಲದೆ ಕೆರೆಯಲ್ಲಿರುವ ನೀರು ಜೂನ್ 15ರವರೆಗೆ ಮಾತ್ರ ಪೂರೈಕೆ ಮಾಡುವುದಷ್ಟೇ ಸಂಗ್ರಹವಿದೆ ಎಂದು ನಗರಸಭಾ ಪೌರಾಯುಕ್ತ ಗುರುಪ್ರಸಾದ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!