
ಸಿರುಗುಪ್ಪ : ತಾಲೂಕ ಕಚೇರಿಯಲ್ಲಿ ಜನತಾದರ್ಶನ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ನಗರ ಸಭೆ ಸಿರುಗುಪ್ಪ ಸಹಭಾಗಿತ್ವದಲ್ಲಿ ತಾಲೂಕ ಕಚೇರಿ ಸಭಾ ಭವನದಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯಿತು ಸಾರ್ವಜನಿಕರಿಂದ ಅಹವಾಲುಗಳನ್ನು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸ್ವೀಕರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ತಹಸಿಲ್ದಾರ್ ಎಚ್ ವಿಶ್ವನಾಥ್ ಶಾಸಕ ಬಿ ಎಂ ನಾಗರಾಜ್ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಸಲ್ಲಿಕೆಯಾದ ಅರ್ಜಿಗಳನ್ನು ತೊರಿತವಾಗಿ ವಿಲೇವಾರಿ ಮಾಡಿ ಸಾರ್ವಜನಿಕರ ಸಮಸ್ಯೆ ಕುಂದು ಕೊರತೆ ಅರ್ಜಿಗೆ ಸಂಬಂಧಿಸಿದ ಪರಿಶೀಲಿನೆ ಮಾಡಿ ಪರಿಹಾರವನ್ನು ತಕ್ಷಣವೇ ಜವಾಬ್ದಾರಿಯಿಂದ ಕಲ್ಪಿಸಬೇಕು ಜಿಲ್ಲಾಧಿಕಾರಿಗಳು ಸೂಚಿಸಿದರು ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ, ಗ್ರಂಥಾಲಯ ಅಧಿಕಾರಿ ಜಗದೀಶ್, ನಗರ ಸಭೆಯ ಇಂಜಿನಿಯರ್ ಗಂಗಾಧರ ಗೌಡ,ನಗರ ಸಭೆಯ ರಾಜಭಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಜಿ ಪ್ರದೀಪ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎ ಗಾದಿಲಿಂಗಪ್ಪ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸೇರಿ ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ತಾಲೂಕ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ಸಾರ್ವಜನಿಕರಿಂದ ಒಟ್ಟು 66 ಮನವಿ ಪತ್ರಗಳು ನೀರಾವರಿ ತಾಲೂಕ ಪಂಚಾಯತ್ ಪಟ್ಟಣ ಪಂಚಾಯತ್ ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆ ಅಬಕಾರಿ ಇಲಾಖೆ ಲೋಕಾಯುಪಯೋಗಿ ಇಲಾಖೆ ಡಿವಿಡಿಸಿ ಡಿ ಎಂ ಎಫ್ ಪಶು ಸಂಗೋಪನ ಇಲಾಖೆ ನೋಂದಣಿ ಇಲಾಖೆ ಜೆಸ್ಕಾಂ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅರ್ಜಿಗಳು ಸ್ವೀಕರಿಸಲಾಗಿದೆ.