
ಪುಸ್ತಕ ಲೋಕಾರ್ಪಣೆ
ಸಿರುಗುಪ್ಪ, ೦೪- ಹೊಸಪೇಟೆ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚೊಕ್ಕ ಬಸವನ ಗೌಡ 85ನೇ ವರ್ಷದ ಹುಟ್ಟು ಹಬ್ಬದ ಅಮೃತ ಮಹೋತ್ಸವ ಅಂಗವಾಗಿ, ಅವರ ಜೀವನ ಆಧಾರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪಟ್ಟಣದಲ್ಲಿ ನಡೆಸಲಾಯಿತು.
ನಗರದ ಪಿ ಎಲ್ ಡಿ ಬ್ಯಾಂಕ್ ನ ಸಭಾಂಗಣದಲ್ಲಿ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಚೊಕ್ಕ ಬಸವನಗೌಡ ಅವರು ಸಲ್ಲಿಸಿದ ಸಮಾಜ ಸೇವದ ಬಗ್ಗೆ ಈ ಸಮಾವೇಶದಲ್ಲಿ ಹಲವರು ಮುಖಂಡರು ಸಭೆಗೆ ತಿಳಿಸಿದರು.
ಕಂಬಳಿ ಮಠದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷ ಮಲ್ಲಯ್ಯ, ವ್ಯವಸ್ಥಾಪಕ ತಿಪ್ಪಣ್ಣ, ಮುಖಂಡರಾದ ಹೆ ರೆಕಲ್ಲು ಜಡಿ ಸ್ವಾಮಿ, ಪಾಲಾಕ್ಷ ರೆಡ್ಡಿ, ತಿಮ್ಮಪ್ಪ ನಾಯಕ, ಶಿವರುದ್ರ ಗೌಡ, ಶಾಂತನಗೌಡ, ಮಲ್ಲಿಕಾರ್ಜುನಗೌಡ, ಕರೂರು ಚಂದ್ರರೆಡ್ಡಿ, ಹನುಮಂತಗೌಡ, ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು, ಬಸನಗೌಡ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.