
ಸಿರುಗುಪ್ಪ: ರಾಷ್ಟ್ರಕವಿ ಕುವೆಂಪು ಅವರ
120ನೇ ಜನ್ಮದಿನ ವಿಶ್ವ ಮಾನವ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ೨೯- ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು ವಿಶ್ವಪಥವಾಗಬೇಕು ಮನುಷ್ಯ ವಿಶ್ವ ಮಾನವನಾಗಬೇಕು ಎಂದು ಉಪ ತಹಸಿಲ್ದಾರ್ ರಾಘವೇಂದ್ರ ಅವರು ಅಭಿಪ್ರಾಯ ಪಟ್ಟರು ಸಿರುಗುಪ್ಪ ನಗರದ ತಾಲೂಕ ಕಚೇರಿಯಲ್ಲಿ 120ನೇ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮನುಜ ಪಥ ವಿಶ್ವಪಥ ಎನ್ನುವುದು ಕುವೆಂಪು ಅವರ ವಿಶ್ವದೃಷ್ಟಿ ದಾರ್ಶನಿಕ ನೋಟ ವಿಶ್ವಮಾನವ ಸಂದೇಶವನ್ನು ಅವರ ಆಶಯವಾಗಿತ್ತು ಎಂದರು ಸಮಾಜ ಸುಧಾರಕ ಸಾಹಿತಿ ಕವಿ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಅವರು ಮಾತನಾಡಿ ಕನ್ನಡದ ಯುಗ ಕವಿ ಮಹಾಕವಿ ಕುವೆಂಪು ಅವರ ಹುಟ್ಟಿದ ದಿನವಾದ ಡಿಸೆಂಬರ್ 29ನೆಯ ದಿನವನ್ನು ರಾಜ್ಯದಲ್ಲಿ ವಿಶ್ವಮಾನವ ದಿನಾಚರಣೆ ಯನ್ನಾಗಿ ಆಚರಿಸಲಾಗುತ್ತದೆ ಜಗದ ಕವಿ ಕುವೆಂಪು ಅವರು ಈ ಶತಮಾನದ ಮಹಾಕವಿ ಗಳಷ್ಟೇ ಅಲ್ಲ ವಿಶ್ವಕವಿಗಳು ಯನ್ನಾಗಿ ಆಚರಿಸುತ್ತಿರುವದು ಮಹತ್ವದ ಸಂಗತಿ ಎಂದರು.
ತಾಲೂಕ ಕಚೇರಿಯ ಕಂದಾಯ ಪರಿವೀಕ್ಷಕ ಶಕ್ಷಾವಲಿ ಅಧಿಕಾರಿಗಳಾದ ಮಹಾಂತೇಶ ನವೀನ್ ಗುಡದಾಶ್ ಹುಲಿಗೆಮ್ಮ ವಸುಂದರ ತುಶಾ ಸಾಕ್ಷರತಾ ಸಂಯೋಜಕ ಶಿಕ್ಷಕ ಕರೂರು ಬಸಪ್ಪ ಸಿಬ್ಬಂದಿ ವರ್ಗದವರು ಇದ್ದರು.