
ಸಿರುಗುಪ್ಪ: ಸಮಾಜ ವಿಜ್ಞಾನ ಕಾರ್ಯಗಾರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ , ೨೧- ಸಮಾಜ ವಿಜ್ಞಾನ ವಿಷಯವು ಸಾಮಾಜಿಕ ನೈತಿಕ ಮೌಲ್ಯಗಳನ್ನು ಒಳಗೊಂಡ ಒಂದು ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ಅವರು ಹೇಳಿದರು.
ಅವರು ಸಿರುಗುಪ್ಪ ನಗರದ ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಸಮಾಜ ವಿಜ್ಞಾನ ವಿಷಯಧಾರಿತ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಮಾಜ ವಿಜ್ಞಾನವನ್ನು ಜೀವನಂತ್ಯವರೆಗೆ ಬರುವ ಭಾಗವಾಗಿದೆ ಎಂದು ಅವರು ನುಡಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್ ತಾಲೂಕು ಸಮಾಜ ವಿಜ್ಞಾನ ವಿಷಯ ಅಧ್ಯಕ್ಷ ಧರ್ಮಣ್ಣ ವೀರೇಶ್ ಬಸವನಗೌಡ ನಾಗೇಶ್ ಶೆಟ್ಟಿ ಸಿ ಆರ್ ಪಿ ಬಿ ಆರ್ ಪಿ ತಾಲೂಕಿನ ಸಮಾಜ ವಿಜ್ಞಾನ ಶಿಕ್ಷಕರು ರಾಷ್ಟ್ರೀಯ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಇತರರು ಇದ್ದರು.