
ಸುಂಕಲಮ್ಮ ದೇವಿ ಕುಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ. ಎಂ.ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,7- ತಾಲೂಕು ಶಾನವಾಸಪುರ ಗ್ರಾಮದಲ್ಲಿ ಶ್ರೀ ಸುಂಕಲಮ್ಮ ದೇವಿಯ ಕುಂಭೋತ್ಸವ ಗ್ರಾಮದೇವರು ಮಾಡಿದ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ದೇವಿಯ ದರ್ಶನ ಪಡೆದರು.
ನಂತರ ಶಾಸಕ ಬಿ ಎಂ ನಾಗರಾಜ ಅವರು ಗ್ರಾಮದ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಜಿ . ಮಂಜುನಾಥ ರೆಡ್ಡಿ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ ಮುಖಂಡರಾದ ದೊಡ್ಡ ಏರಿಯಪ್ಪ ಎತ್ತನ ಹಟ್ಟಿ ನಾಗರಾಜ ಅಯ್ಯಪ್ಪ ಶರಣಪ್ಪ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಿರುಗುಪ್ಪ ನಗರಸಭಾ ಸದಸ್ಯರಾದ ಕಾಯಿಪಲ್ಲೆ ಆರ್ ನಾಗರಾಜ ಬಿ. ವೆಂಕಟೇಶ್ ಗೊರವರ ಶ್ರೀನಿವಾಸ್ ಕೋಟಿ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು