2072c197-7c6e-482a-a3f5-9ffd1bc27ba6

ಸುಕೋ ಬ್ಯಾಂಕ್‌ನ ಮುಂಡರಗಿ ಶಾಖೆಯ ಆರನೇ ವಾರ್ಷಿಕೋತ್ಸವ

ಸುಕೋ ಬ್ಯಾಂಕ್ ಆರ್ಥಿಕ ಶಿಸ್ತಿನ ಸಹಕಾರಿ ಬ್ಯಾಂಕ್ : ಎಂಡಿ

ಕರುನಾಡ ಬೆಳಗು ಸುದ್ದಿ

ಮುಂಡರಗಿ, ೧೩- ಸುಕೋ ಬ್ಯಾಂಕ್ ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡು ಗ್ರಾಹಕಸ್ನೇಹಿ ಸಹಕಾರಿ ಬ್ಯಾಂಕ್ ಆಗಿ ಪ್ರಗತಿ ಸಾಧಿಸುತ್ತಿದೆ ಎಂದು ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರವಿ ಸುಧಾಕರ ಅವರು ತಿಳಿಸಿದ್ದಾರೆ.

ಸುಕೋ ಬ್ಯಾಂಕ್‌ನ ಮುಂಡರಗಿ ಶಾಖೆಯ ಆರನೇ ವಾರ್ಷಿಕೋತ್ಸವಕ್ಕೆ ಬುಧವಾರ ಚಾಲನೆ ನೀಡಿ ೨೦೨೪ನೇ ವರ್ಷದ ಇಂಗ್ಲೀಷ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸುಕೋ ಬ್ಯಾಂಕ್ ಕರ್ನಾಟಕದ ೧೪ ಜಿಲ್ಲೆಗಳಲ್ಲಿ ೨೯ ಶಾಖೆಗಳನ್ನು ಹೊಂದಿದ್ದು, ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ಮತ್ತು ಸದೃಢತೆಯಿಂದ ಬಲವಾಗಿ ಬೇರೂರಿದೆ. ಸುಕೋ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದರು.

ಸುಕೋ ಬ್ಯಾಂಕಿನ ನಿರ್ದೇಶಕ ಪದಮ ಚಂದ್ ಮೆಹತಾ ಅವರು, ಸುಕೋ ಬ್ಯಾಂಕ್ ಗುಣಮಟ್ಟದ ಗ್ರಾಹಕಸೇವೆಯ ಮೂಲಕ ಗಮನಾರ್ಹವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ಪ್ರತೀ ವರ್ಷ ವಿಭಿನ್ನವಾದ – ವಿಶಿಷ್ಟವಾದ ಕ್ಯಾಲೆಂಡರ್ ಬಿಡುಗಡೆ ಮಾಡುವ ಸಂಪ್ರದಾಯವನ್ನು ಹಾಕಿಕೊಂಡಿರುವ ಬ್ಯಾಂಕ್‌ನ ಆಡಳಿತ ಮಂಡಲಿಯು ಈ ವರ್ಷವೂ ವಿಭಿನ್ನವಾದ ಕ್ಯಾಲೆಂಡರ್ ರೂಪಿಸಿದೆ ಎಂದರು.

`ಕರ್ನಾಟಕ ವಾಣಿಜ್ಯೋದ್ಯಮ ಕೈಗಾರಿಕೆ ಸಂಸ್ಥೆ’ಯಿಂದ ಅತ್ಯುತ್ತಮ ಸಾಧಕ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕರಿಬಸಪ್ಪ ಹಂಚಿನಾಳ ಅವರು, ಸುಕೋ ಬ್ಯಾಂಕ್ ತನ್ನೆಲ್ಲಾ ಚಟುವಟಿಕೆಗಳಲ್ಲಿ ವೈವಿಧ್ಯತೆಯನ್ನು ತೋರುತ್ತಿದೆ. ಪ್ರತೀ ವರ್ಷದ ಕ್ಯಾಲೆಂಡರ್
ನಲ್ಲಿ ಗ್ರಾಹಕರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ನೀಡುತ್ತಿರುವುದು ವಿಶೇಷ ಎಂದರು.

ಗ್ರಾಹಕರಿಗೆ ಮತ್ತು ಆಸಕ್ತರಿಗೆ ಸಸಿಗಳನ್ನು ವಿತರಣೆ ಮಾಡಿ `ಹಸಿರು ಬೆಳೆಸಿ, ನಾಡು ಉಳಿಸಿ ಎಂದು ಮನವಿ ಮಾಡಲಾಯಿತು. ಸುಕೋ ಬ್ಯಾಂಕ್‌ನ ಮುಂಡರಗಿ ಶಾಖೆಯ ಕ್ರೆಡಿಟ್ ಅಧಿಕಾರಿ ಮಲ್ಲಿಕಾರ್ಜುನ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೇನೇಜರ್ ಸಿದ್ದಯ್ಯ ಅವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!