
ಮತದಾನ ಜಾಗೃತಿ ಸೈಕಲ್ ಜಾಥಾ, ಸುಭದ್ರ ಪ್ರಜಾಪ್ರಭುತ್ವದ ಆಯ್ಕೆ ಕಡ್ಡಾಯ : ಶೋಭಾ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 19- ಸುಭದ್ರ ಪ್ರಜಾ ಪ್ರಭುತ್ವದ ಆಯ್ಕೆ ಕಡ್ಡಾಯ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶೋಭಾ ಅವರು ಹೇಳಿದರು.
ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಪಟ್ಟಣ ಪಂಚಾಯತ್ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಮತದಾನಕ್ಕೆ ಇದೆ ಸಮಾಜ ಬದಲಿಸುವ ಶಕ್ತಿ ಇದನ್ನು ಎಲ್ಲರೂ ಮತದಾನದ ಮಹತ್ವ ಅರಿತು ಸ್ವಯಂ ಪ್ರೇರಣೆಯಿಂದ ಹಕ್ಕು ಚಲಾಯಿಸಬೇಕು ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮುಖ್ಯವಾಗಿದೆ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಪಡೆದ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ಕರೆ ಕೊಟ್ಟರು.
ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಪಟ್ಟಣ ಪಂಚಾಯತ್ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ಸಾರ್ವಜನಿಕರು ಇದ್ದರು