WhatsApp Image 2024-04-01 at 10.05.19 AM

ಸುಳ್ಳು ಮತ್ತು ಸತ್ಯದ ಲೋಕಸಭಾ ಚುನಾವಣೆ ಗೆಲ್ಲಲಿದೆ ಕಾಂಗ್ರೆಸ್ : ಸಚಿವ ತಂಗಡಗಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 1- ದೇಶದಲ್ಲಿ ಸತ್ಯ ಮತ್ತು ಸುಳ್ಳಿನ ನಡುವೆ 2024ರ ಲೋಕಸಭಾ ಚುನಾವಣೆಯಲ್ಲಿ ಸತ್ಯ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಸುಳ್ಳಿನ ಸರಮಾಲೆ ನೀಡಿರುವ ಬಿಜೆಪಿ ಸೋಲಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಕಮ್ಮವಾರಿ ಕಲ್ಯಾಣ ಮಂಟಪ ಸಭಾ ಭವನದಲ್ಲಿ ಜರುಗಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯ ಸಿರುಗುಪ್ಪ ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಅಭಿಮಾನಿಗಳ ಸಭೆಯಲ್ಲಿ ಕಾಂಗ್ರೆಸ್ ಗಣ್ಯರೊಂದಿಗೆ ದೀಪ ಬೆಳಗಿಸಿ ಅವರು ಮಾತನಾಡುತ್ತಾ ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆಯುವ ಚುನಾವಣೆಯಾಗಿದೆ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಗೆ ಚುನಾವಣೆ ಪ್ರಚಾರ ಮಾಡಲು ನಾಚಿಕೆ ಯಾಗಬೇಕು ಬಿಜೆಪಿಯವರು 10 ವರ್ಷಗಳ ಕಾಲ ಸುಳ್ಳು ಹೇಳಿದ್ದಾರೆ ಇನ್ನು ಐದು ವರ್ಷ ಸುಳ್ಳು ಹೇಳಿದರೆ ನಡೆಯುತ್ತೇ ಎಂದು ಕೊಂಡಿದ್ದಾರೆ ಬಿಜೆಪಿ ಸುಳ್ಳನ್ನು ಭರವಸೆ ನೀಡಿದ ಈಗ ವಿಶ್ವಾಸ ಕಳೆದುಕೊಂಡಿದೆ ಬಿಜೆಪಿಯ ಸುಳ್ಳನ್ನೇ ಕೇಳಿ ದಾರಿ ತಪ್ಪಿರುವ ಮತ್ತು ನಿರುದ್ಯೋಗ ಯುವಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರು ಮಾಡಿದ್ದಾರೆ ಯೇ ? ಇದರಿಂದ ನಿಜವಾಗಿಯೂ ನಿಮಗೆ ಸಿಟ್ಟು ಬಂದರೆ ಮತ್ತೆ ಮೋದಿ ಮೋದಿ ಹೆಸರು ಹೇಳುವರಿಗೆ ಪ್ರಶ್ನೆ ಕೇಳಿ ? ಮತ್ತು ಅವರ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ ಮಾತನ್ನು ಮತ್ತೆ ಅವರು ಸಮರ್ಥಿಸಿಕೊಂಡರು.

ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರಿಗೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಕಾರ್ಯಕರ್ತರಲ್ಲಿ ವಿನಂತಿಸಿ ಮನವಿ ಮಾಡಿದರು.

ಸಿಂಧನೂರು ಶಾಸಕ ಬಾದರಲಿ ಹಂಪನಗೌಡ ಅವರು ಮಾತನಾಡಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಬೀದರ್ ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇತುವೆ ಬೈಪಾಸ್ ಗಳಿಗೆ ಅನುಮೋದನೆ ಸಿಕ್ಕಿತು ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಕಾಣದಾಗಿದೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ ಹಣ ಹಾಕುವುದಾಗಿ ಸುಳ್ಳು ಹೇಳಿದರು.

ಪಾಕಿಸ್ತಾನ ವಿರುದ್ಧ ಯುದ್ಧ ಸಾರುವ ಬಗ್ಗೆ ಸುಳ್ಳು ಹೇಳಿದರು ಮತ್ತು ಈಗ ರಾಮ ಮಂದಿರ ನೆಪ ಒಡ್ಡಿ ಗೆಲುವಿಗೆ ಸುಳ್ಳುಗಳ ಭರವಸೆ ನೀಡುವ ಇಂತಹ ಸರ್ಕಾರ ಬೇಕೆ ? ಮೋದಿ ಸುಳ್ಳುಗಾರ ಮತದಾರರು ಮೋದಿ ಮಾತು ನಂಬಬಾರದು, ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನಿಂದ ಅಪಾರ ಕೊಡುಗೆ ನೀಡಿದೆ ದೇಶದ ಶಾಂತಿ ಸುವ್ಯವಸ್ಥೆಗೆ ಕಾಂಗ್ರೆಸ್ಸಿಗೆ ಬೆಂಬಲಿಸಿ ರಾಜಶೇಖರ ಹಿಟ್ನಾಳ್ ಅವರ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಕಾರ್ಯಾಧ್ಯಕ್ಷ ವಸಂತಕುಮಾರ್ ಅವರು ಮಾತನಾಡಿ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಪ್ರಿಯಾಂಕಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರು ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ತಂದರು ಮತದಾರರು ಕಾಂಗ್ರೆಸ್ ಗೆಲ್ಲಿಸಿದರು ಆದರೆ ಬಿಜೆಪಿಯವರು 10 ವರ್ಷಗಳ ಕಾಲ ಸುಳ್ಳು ಹೇಳಿದ್ದಾರೆ ಆದರೆ ಇನ್ನೂ ಐದು ವರ್ಷ ಸುಳ್ಳು ಹೇಳಿದರೆ ನಡೆಯುತ್ತೆ ಎಂದು ಕೊಂಡಿದ್ದಾರೆ ಕಾಂಗ್ರೆಸ್ ಎಲ್ಲಾ ಜಾತಿ ವರ್ಗಗಳ ಜನಾಂಗಗಳನ್ನು ಒಗ್ಗೂಡಿಸುವ ಪಕ್ಷವಾಗಿದೆ ಎಂದರು.

ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ ಅವರು ಮಾತನಾಡಿ ಕಾಂಗ್ರೆಸ್ ಜನಪರ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರ ವಾಗಲಿವೆ ಲೋಕಸಭಾ ಚುನಾವಣೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರ ಗೆಲುವಿನಿಂದ ಸಂಸದ ರಾದರೆ ಕ್ಷೇತ್ರದ ಅನೇಕ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದರು.

ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ ಅವರು ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಅಧಿಕಾರ ಬಂದ ನಂತರ ಅವುಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಕಾಂಗ್ರೆಸ್ ಸರ್ಕಾರ ದುಡಿಯವರ ಬಡಪರ ಸರ್ಕಾರ ಆಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಸಹಕಾರಿ ರತ್ನ ಚೊಕ್ಕ ಬಸವನಗೌಡ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿದರು.

ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗ ರುದ್ರಗೌಡ ಜಮೀನ್ದಾರ್, ಸೈಯದ್ ಮೋಹಿದ್ದೀನ್ ಖಾದ್ರಿ, ತಿಮ್ಮಯ್ಯ ನಾಯಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ವರಪ್ರಸಾದ ರೆಡ್ಡಿ, ಎಂ ಗೋಪಾಲ ರೆಡ್ಡಿ, ಉಮೇಶಗೌಡ, ಹಾಜಿ ಚೌದರಿ ಖಾಜಾಸಾಬ್ ದೇಶನೂರ ಹಾಜಿ ಗಪೂರ್, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ರಾಮಸ್ವಾಮಿ ಸಾಹುಕಾರ, ಮುಲ್ಲಾ ಕಲಿಮ್, ಬಿ ಎಂ ಸತೀಶ್, ಬಿ ಮುತ್ತಾಲಯ ಶೆಟ್ಟಿ, ಕೋಟಿ ರೆಡ್ಡಿ, ಕರಣಂ ಬಸವರಾಜ, ಪವನ್ ದೇಸಾಯಿ, ಬಿ ವೆಂಕಟೇಶ ಗೊರವ,ರ ಶ್ರೀನಿವಾಸ, ಬಿ ಎಂ ಅಪ್ಪಾಜಿ ನಾಯಕ, ಬಿ ಎಂ ಮಣಿಕಂಠ ಕಾಯಿಪಲ್ಲೆ, ನಾಗರಾಜ ವಕೀಲ, ಗಂಗಾರಾಮ್ ಸಿಂಗ್, ಬಿ.ಕೆ. ಅಲ್ಲಾಭಕ್ಷಿ, ಟಿ . ಮೊಹಮ್ಮದ್ ಶಫಿ ಮುಲ್ಲಾ ರೌಫ್, ಬಿ ಅಫ್ಜಲ್ ಹುಸೇನ್, ಪೂಜಾರಿ ಪ್ಯಾಟೆಪ್ಪ, ವೆಂಕಟರೆಡ್ಡಿ, ಶಾರದಾ, ಶೈಲಜಾ ಕೊಡ್ಲೆ, ಮಲ್ಲಿಕಾರ್ಜುನ ಸೇರಿ ಅನೇಕ ಮುಖಂಡರು ಅಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!