
ಸೇವಾದಳದಿಂದ ವಿಧ್ಯಾರ್ಥಿಗಳಿಗೆ ಶಿಬಿರ
ಸೋಮಶೇಖರ್ ಹರ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಬೆಳೆಸಲು ಹಾಗೂ ದೇಶಾಭಿಮಾನ ಬೆಳೆಸಿ ನಾಡಿನ ಸೇವೆ ಮಾಡುವಂತೆ ಜಾಗೃತಿ ಮೂಡಿಸಲು ಸೇವಾದಳದಿಂದ ವಿಧ್ಯಾರ್ಥಿಗಳಿಗೆ ಶಿಭಿರಗಳನ್ನು ಆಯೋಜಿಸೋಣವೇಂದು ಎಂದು ಭಾರತ ಸೇವಾ ದಳದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್ ಹರ್ತಿ ಹೇಳಿದರು.
ಅವರು ಭಾರತ ಸೇವಾ ದಳ ಕಛೇರಿಯಲ್ಲಿ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಸೇವಾದಳದ ಜಿಲ್ಲಾಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ ಶಾಖಾ ನಾಯಕರಿಗೆ ತರಬೇತಿ ಹಾಗೂ ಸೇವಾದಳ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ತಿಳಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಹನಮೇಶ ಕಡೆಮನಿ, ಜಿಲ್ಲಾ ಉಪಾಧ್ಯಕ್ಷ ತೋಟಪ್ಪ ಕಾಮನೂರ . ಶ್ಯಾಮಿದಸಾಬ ತಹಶೀಲ್ದಾರ್. ನಿರ್ದೆಶಕ ರಮೇಶ್ ತುಪ್ಪದ ಇತರರು ಇದ್ದರು.