
ಶ್ರೀ ಸೇವಾಲಾಲರ 285ನೇಜಯಂತಿ ಆಚರಣೆ
ಕರುನಾಡ ಬೆಳಗು ಸುದ್ದಿ
ಕುಕನೂರ 27- ಕುಕನೂರಿನಲ್ಲಿ ಬಂಜಾರ ಸಮಾಜದ ದಾರ್ಶನಿಕ, ಆರಾಧ್ಯ ದೈವ ಸದ್ಗುರು ಶ್ರೀ ಸೇವಾಲಾಲರ 285 ನೇ ಜಯಂತಿ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9 ಘಂಟೆಗೆ ಮಹಾಭೋಗ ಪೂಜಾ ಕಾರ್ಯಕ್ರಮ,10 ಘಂಟೆಗೆ ಅಂಬೇಡ್ಕರ ವೃತ್ತದಿಂದ ಸಕಲ ವಾದ್ಯ ಭಜನೆ ತೀಜ್ ಕುಂಭ ಕಳಸದೊಂದಿಗೆ ಸೇವಾಲಾಲರ ಭಾವಚಿತ್ರ ಮೆರವಣಿಗೆ ನಡೆಯಲಿದೆ.
ನಂತರ ಕುಕನೂರಿನ ಶಾದಿಮಹಲಿನಲ್ಲಿ ವೇದಿಕೆ ಕಾರ್ಯಕ್ರಮವಿದ್ದು, ದಿವ್ಯ ಸಾನಿಧ್ಯವನ್ನು ಶ್ರೀ ಮಹಾದೇವ ದೇವರು ಹಾಗೂ ಶ್ರೀಗುರು ಗೋಸಾವಿ ಬಾವಾನವರು ಬಂಜಾರ ಧರ್ಮಗುರುಗಳು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮತ್ತು ಶಾಸಕರು, ಹಾಗೂ ಉದ್ಘಾಟಕರಾಗಿ ಮಾನ್ಯ ಶ್ರೀ ಹಾಲಪ್ಪ ಆಚಾರ ಮಾಜಿ ಸಚಿವರು ಆಗಮಿಸಲಿದ್ದಾರೆ. ಮತ್ತು ಎಲ್ಲ ಸಮಾಜದ ಮುಖಂಡರು, ರಾಜಕೀಯ ಧುರೀಣರು, ನೌಕರ ವರ್ಗದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹೀಗಾಗಿ ಸರ್ವರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಬೇಕೆಂದು ಸಮಸ್ತ ಕುಕನೂರು ತಾಲೂಕಿನ ಬಂಜಾರ ಸಮಾಜದವರು ವಿನಂತಿಸಿಕೊಂಡಿದ್ದಾರೆ.