karmikara images (5)

ಸೇವಾ ಕಾರ್ಮಿಕರಿಗೆ ಉಡಿತುಂಬಿ, ವಸ್ತ್ರ ನೀಡುವ ಮೂಲಕ ಸತ್ಕಾರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,3-  ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಾತ್ರೆಯ ಆರಂಭದಿAದ ಸ್ವಚ್ಛತಾ ಸೇವೆಯಲ್ಲಿ ತೊಡಗಿಕೊಂಡಿರುವ ಸೇವಕರಿಗೆ ಇಂದು ಜಾತ್ರಾ ಆವರಣದಲ್ಲಿ ಸತ್ಕರಿಸಲಾಯಿತು.

ಪ್ರತಿ ವರ್ಷವೂ ಜಾತ್ರಾ ಮಳಿಗೆಗಳ ಆವರಣದಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿ, ಜಾತ್ರಾ ಯಶಸ್ಸಿಗೆ ಸ್ವಚ್ಚತಾ ಸೇವೆಗೈದ ಸೇವಾ ಕಾರ್ಮಿಕರನ್ನು ಗೌರವಿಸಿವುದು ವಾಡಿಕೆ. ಆದರೆ ಅಪ್ಪಾಜಿ ಕ್ಯಾಂಟೀನ್ ನವರು ಈ ಬಾರಿಯ ಜಾತ್ರಾ ಆವರಣದ ಮಳಿಗೆಗಳಲ್ಲಿ ತಮ್ಮ ವ್ಯಾಪಾರ ಮಳಿಗೆ ಹಾಕದಿದ್ದರೂ ಪ್ರತಿ ವರ್ಷದ ವಾಡಿಕೆಯಂತೆ ಬಂದು ಸೇವಾ ಕಾರ್ಮಿಕರಿಗೆ ಸಂತೋಷದಿಂದ ಉಡಿ ತುಂಬಿ, ನಂತರ ಸೀರೆ ಹಾಗೂ ವಸ್ತ್ರಗಳನ್ನು ಉಡುಗೊರೆ ಯಾಗಿ ನೀಡುವ ಮೂಲಕ ತಮ್ಮ ಸಾಂಪ್ರದಾಯಿಕ ಭಕ್ತಿಯ ಸೇವೆಯನ್ನು ಮುಂದುವರೆಸಿದರು. ಇವರ ಸೇವೆಯನ್ನು ಶ್ರೀಮಠದ ಪರಮಪೂಜ್ಯರು ಶ್ಲಾಘಿಸಿ ಆಶೀರ್ವದಿಸಿದರು.

Leave a Reply

Your email address will not be published. Required fields are marked *

error: Content is protected !!