
ಸೇವಾ ನಿವೃತ್ತಿ ನಂತರವೂ ಸಿಗದ ಪಿಂಚಣಿ
ಥಿಯೋಸೋಪಿಕಲ್ ಆಡಳಿದಲ್ಲಿ ನ್ಯೂನ್ಯತೆಯ ಆರೋಪ
ತಳ್ಳಿಹಾಕಿದ ಆಡಳಿತ ಮಂಡಳಿಯ ವೆಂಕಟರಾವ್ ಹಿರಿಯ ನ್ಯಾಯವಾದಿ
ಕರುನಾಡ ಬೆಳಗು ಸುದ್ದಿ
ಹೊಸೇಪೇಟೆ (ವಿಜಯನಗರ ) , ೦೪- ನಗರದ ಥಿಯೋಸೋಪಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ವೃತ್ತಿಜೀವನವನ್ನು 1985 ರಿಂದ 2018 ರವರೆಗೆ ಸೇವೆ ಸಲ್ಲಿಸಿದ ನನಗೆ ಆಡಳಿತ ಮಂಡಳಿಯ ಸ್ವಾರ್ಥದಿಂದಾಗಿ ತಮಗೆ ಬರಬೇಕಾದ ಪಿಂಚಣಿ ಸೌಲಭ್ಯಗಳು ಸೇರಿದಂತೆ ನೂತನ ಸಂಭಳ ಬಾಕಿ (ರೂ. 15,000.00/-)ಹದಿನೈದು ಲಕ್ಷ, ಹೊಸಾ ಪಿಂಚಣಿ ಹಣ (ರೂ.20,00,000/-) ಇಪ್ಪತ್ತು ಲಕ್ಷ, ಹೊಸಾ ಗ್ರಾಚ್ಯುಟಿ ಹಣ(ರೂ.20,00,000/-) ಇಪ್ಪತ್ತು ಲಕ್ಷ, ಕಮ್ಯಟೇಶನ್ ಹಣ (ರೂ. 45,000,00./-) ನಲವತ್ತೈದು ಲಕ್ಷ. ಮತ್ತು ಗಳಿಕೆ ರಜ (ರೂ 45,00,000.) ಲಕ್ಷ, ಅಲ್ಲದೆ 1985 ರಿಂದ ಇಲ್ಲಿಯವರೆಗೆ ಆರ್.ಟಿ,ಐ, ಸಕಾಲ , ಹೆಚ್.ಆರ್.ಸಿ.ಲೋಕಾಯುಕ್ತ ಕೋರ್ಟ, ಲೀಗಲ್ ನೋಟೀಸ್,ಕೆ.ಏ.ಟಿ.ಮುಂದವುಗಳಿಗೆ ದಾವೆ ದಾಖಲಿಸಲು ಮೂರು (3) ಲಕ್ಷ ರೂಗಳು ಖರ್ಚಾಗಿವೆ ,ಇದೆಲ್ಲಾ ನಷ್ಟವು ಆಡಳಿತ ಮಂಡಳಿ ನನಗೆ ನೀಡಡದ ತೊಂದರೆ ಆಗಿದೆ ತಮಗೆ ದೊರಕ ಬೇಕಾದ ಸೌಲಭ್ಯಗಳ ಒಟ್ಟು ಮೊತ್ತ ಒಂದು ಕೋಟಿಗೂ ಅಧಿಕ ಹಣ ಪಡೆಯಬೇಕಾದುದನ್ನು , ಆಡಳಿತ ಮಂಡಳಿ ವಂಚಿಸಿದೆ ಎಂದು ನಿವೃತ್ತ ಪ್ರಾಧ್ಯಾಪಕ ಟಿ .ಭೀಮಲಿಂಗಯ್ಯ ಮಂಡಳಿ ವಿರುದ್ದ ಗಂಭೀರ ಆರೋಪ ಮಾಡಿದರು.
ಅವರು ಐ.ಎಸ್.ಆರ್ ರಸ್ತೆಯಲ್ಲಿರುವ ಚರ್ಚ್ ಕಾಂಪ್ಲೆಕ್ಸನಲ್ಲಿನ “ ಪತ್ರಿಕಾ ಕಚೇರಿ” ಯಲ್ಲಿ ಸುದ್ದಿ ಗೋಷ್ಠಿಯಲ್ಲಿ ವಿಷಯ ತಿಳಿಸಿದರು. ನಗರದಲ್ಲಿನ ಥಿಯೋಸೊಪಿಕಲ್ ಕಾಲೇಜ್ ಸಂಪೂರ್ಣ ಅನಧಿಕೃತವಾಗಿದ್ದು ಸರ್ಕಾರದಿಂದ ಮಾನ್ಯತೆ( ರಿಜಿಸ್ಟ್ರೆ ಟ್ರೇಶನ್) ಇಲ್ಲದೆ ನಡೆಯುತ್ತಿದೆ. ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿರುವ ಕಾಲೇಜಿನ ಪೀಸ್‌ನ ರಸೀತಿಯಲ್ಲಿ ಟ್ರಸ್ಟ್ ವತಿಯಿಂದ ಎಂದು ನೀಡಲಾಗುತ್ತಿರುವುದು ಅಪರಾದ ಎಂದು ಹೇಳಿದರು.
ನಾನು ಕಾಲೇಜಿನ ಆಡಳಿತ ಮಂಡಳಿಗೆ ನ್ಯಾಯಬದ್ದವಾಗಿ ಪ್ರಶ್ನಿಸಿದಕ್ಕೆ ನನ್ನನ್ನು ಹೀಗೆ ಸೌಲಭ್ಯಗಳಿಗಾಗಿ ಪರದಾಡುವಂತೆ ಮಾಡಿದೆ . ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ರವರ ಗಮನಕ್ಕೂ ತಂದಿದ್ದೇನೆ, ಆದರೆ ಇಲ್ಲಿಯ ವರೆಗೂ ಅವರು ನನ್ನ ಮನವಿಗೆ ಯಾವುದೇ ತರಹ ಸ್ಪಂದಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿಫಲತೆಯನ್ನು ಕೂಡಾ ಟೀಕಿಸಿದರು. ಸದ್ರಿ ಥಿಯೋಸೋಪಿಕಲ್ ಸಂಸ್ಥೆ 1918ರಿಂದ 2016.ಮತ್ತು 2016ರಿಂಧ 2023 ವರೆಗೂ ನಿಯಮಾವಳಿ ಗಳ ಪ್ರಕಾರ ನೊಂದಣಿ ಆಗಿರುವುದಿಲ್ಲ ಎಂದು ನಿವೃತ್ತ ಪ್ರಾದ್ಯಾಪಕ ಸಂಸ್ಥೆಯ ವಿರುದ್ದ ಆರೋಪಿಸುತ್ತಿದ್ದಾರೆ. ಆದರೂ ಬೀಮಲಿಂಗಯ್ಯ ನಿಯಮಾವಳಿಗಳ ಪ್ರಕಾರ ಸೇವೆ ಸಲ್ಲಿಸಿ ಪಿಂಚಣಿಗಳಿಂದ ವಂಚಿತರಾಗಿರುವುದು ಮಾತ್ರ ಸತ್ಯ , ಜಿಲ್ಲಾಡಳಿತ ಹಾಗು ರಾಜ್ಯ ಸರ್ಕಾರ ಪ್ರಕರಣವನ್ನು ಪರಿಶೀಲಿಸಿ ನೊಂದವರಿಗೆ ನ್ಯಾಯ ದೋರಕಿಸಕೊಡಬೇಕಾದುದು ನ್ಯಾಯಸಮ್ಮತವಾದುದು.
ಭಿಮಲಿಂಗಯ್ಯ ಮಾಡುತ್ತಿರುವ ಆರೋಪಗಳು ಸಂಪೂರ್ಣ ಹುಸಿ ಯಾದುವು, ತಮ್ಮ ಸಂಸ್ಥೇ ಇಲ್ಲಿಯವರೆಗೂ ಭೀಮಲಿಂಗಯ್ಯ ನವರ ಜೊತೆ ಮಾನವೀಯತೆಯಿಂದ ನಡೆದು ಕೊಂಡಿದೆ, ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಯಾವುದೇ ವ್ಯಕ್ತಿಗೆ ಅನ್ಯಾಯ ಆಗಭಾರದು ಎನ್ನುವ ದೃಷ್ಟಿಯಲ್ಲಿ ಇಲ್ಲಿಯ ವರೆಗೂ ಸಂಸ್ಥೆ ಬಹಳಾ ನಯವಾಗಿ ನಡೆದು ಕೊಂಡಿದೆ . ಎಂದು ಥಿಯೋಸೊಫಿಇಕಲ್ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಜೀರೆ ಭಿಮಲಿಂಗಯ್ಯ ರವರ ಆರೋಪಗಳ ಬಗ್ಗೆ ಕಾಲೇಜಿಗೆ ಭೇಟಿ ನೀಡಿದ ಪತ್ರಕರ್ತರಿಗೆ ಈ ರೀತಿ ಹೇಳೀದರು.
ಈ ವ್ಯಕ್ತಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠಮಾಡದೆ, ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ವಿರುದ್ದ ಪ್ರತಿಭಟಿಸಲು ಪ್ರೇರೇಪಣೆ ನೀಡುತ್ತಿದ್ದರು,ಸರಿಯಾಗಿ ಕಾಲೇಜಿನಲ್ಲಿ ತರಗತಿಗಳನ್ನು ತೆಗದು ಕೊಳ್ಳದೆ , ಹಾಜರಾತಿನಲ್ಲಿ ಸಹಿ ಮಾಡಿ ಹೊರ ನಡೆದು ಹೋಗುತ್ತಿದ್ದರು, ಇದನ್ನು ವಿಚಾರಿಸಿದ ಆಡಳಿತ ಮಂಡಳಿಗೆ ಉದ್ದಟತನದಿಂದ ಉತ್ತರಿಸುತ್ತಿದ್ದರು ,ಇವರ ಗೈರು ಹಾಜರಿಯಿಂದಾಗಿ ಮಕ್ಕಳಿಗೆ ಪಠ್ಯಕ್ರಮದಲ್ಲಿ ಉಂಟಾಗುವ ತೊಂದರೆಗಳನ್ನು ಕಂಡು , ಬೇರೆ ಶಿಕ್ಷಕರನ್ನು ಕರೆಯಿಸಿ ಸಂಸ್ಥೆ ತರಗತಿಗಳನ್ನು ನಡೆಸಿತ್ತು, ಇದರಿಂದ ಉಂಟಾಗುವ ನಷ್ಠಕ್ಕೆ ಹೊಣೆ ಯಾರು ? ಎಂದು ಪ್ರಶ್ನಿಸಿದ ಆಡಳಿತ ಮಂಡಳಿ, ಇವರ ನಡೆ ಬಗ್ಗೆ ಕಾಲೇಜು ಶಿಕ್ಷಣ ಆಯುಕ್ತರಿಗೆ ತಿಳಿಸಿದ್ದರಿಂದ , ಏಕ ಸದಸ್ಯ ವಿಚಾರಣಾ ಸಮಿತಿ ರಚಿಸಿ ತೀರ್ಮಾನ ತೆಗೆದು ಕೊಳ್ಳಲು ಶಿಪಾರಸು ಮಾಡಲಾಗಿತ್ತು .
ಅದರ ಪ್ರಕಾರ ಸಂಸ್ಥೆಗೆ ಉಂಟಾದ ನಷ್ಟಪರಿಹಾರ ವಾಗಿ ಭೀಮಲಿಂಗಯ್ಯ ನವರು ಐದು (5) ಲಕ್ಷ ರೂಪಾಯಿಗಳನ್ನ ನೀಡಲು ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯಿಂದ ಬಂದ ಪತ್ರ ದಿನಾಂಕ 9-9-2020 ಸಂಖ್ಯೆ :ಕಾಶಿಇ/283/ತ್ರಿಸೌಯೋ/ಸಿಆರ್ 4/2018-19ನಲ್ಲಿ ಇಲಾಖೆ ಆದೇಶಿಸಿದೆ, ಎಂದು ಕಾಲೇಜಿನ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಹನುಮಂತರಾವ್ ಸರ್ಕಾರದ ಆದೇಶವನ್ನು ತೋರಿಸಿದರು.
ಆದಾಗ್ಯೂ ಸಂಸ್ಥೆ ಪಿಂಚಣಿ ಪಡೆಯಲು ಸಹಕರಿಸಿದ್ದು. ಈಗ ಅವರಿಗೆ ಕರ್ನಾಟಕ ಸೇವಾ ನಿಯಮಗಳ ನಿಯಮ 2014(1) (ಎ) ಪ್ರಕಾರ ಶೇ 60 ರಷ್ಟು ಪ್ರಾವಿಜನಲ್ ಪಿಂಚಣಿ ಮಂಜೂರು ಮಾಡುವಂತೆ ಮಹಾಲೇಕಪಾಲಕರನ್ನು ಇಲಾಖೆ ಕೋರಿದಂತೆ ಪಿಂಚಣಿ ಪಡೆಯುತ್ತಿದ್ದಾರೆ. ತಮಗೆ ಬರಬೇಕಾದ ಒಂದು ಕೋಟಿಗೂ ಅಧಿಕ ಮೊತ್ತದ ಹಣ ಪಡೆಯ ಬೇಕಾದಲ್ಲಿ ಭೀಮಲಿಂಗಯ್ಯ ನವರು ಇಲಾಖೆ ಆದೇಶಿಸಿದಂತೆ ರೂ. ಐದು (5) ಲಕ್ಷ ಸಂದಾಯ ಮಾಡಿದಲ್ಲಿ ಎಲ್ಲಾ ತೊಂದರೆಗಳು ನಿವಾರಣೆ ಯಾಗಬಹುದಲ್ಲವೇ ಎಂದು ಹಿರಿಯ ನ್ಯಾಯವಾದಿ ವೆಂಕಟರಾವ್ ತಿಳಿಸುತ್ತಾ ಭಿಮಲಿಂಗಯ್ಯ ರವರ ಆರೋಪವನ್ನು ತಳ್ಳಿ ಹಾಕಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಸಂಗೀತ ಗಾಂವಕರ್, ಆಡಲಿತ ಮಂಡಳಿಯ ಕಾರ್ಯದರ್ಶಿ ಅಶೊಕ್ ಜೀರೆ, ಜಂಟಿ ಕಾರ್ಯದರ್ಶಿ ಹನುಮಂತರಾವ್ ಮತ್ತು ನ್ಯಾಯವಾದಿ ವೆಂಕಟರಾವ್ ಇದ್ದರು