
ಸ್ತ್ರೀ ಶಿಕ್ಷಣಕ್ಕಾಗಿ ಮೊದಲ ಶಾಲೆ ತೆಗೆದ ಕೀರ್ತಿ
ಸಾವಿತ್ರಿ ಬಾಯಿ ಫುಲೆ ಅವರದ್ದು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೩- ಸ್ತ್ರೀ ಶಿಕ್ಷಣಕ್ಕಾಗಿ ಮೊದಲ ಶಾಲೆ ತೆಗೆದ ಕೀರ್ತಿ ಸಾವಿತ್ರಿ ಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಫುಲೆ ಅವರ 193ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಲಿಂಗ ತಾರತಮ್ಯ, ಬಾಲ್ಯ ವಿವಾಹ, ಸಾಮಾಜಿಕ ಅಸಮಾನತೆ ವಿರುದ್ಧ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಹಗಲಿರುಳು ಹೋರಾಡಿ, ಅಕ್ಷರ ಜ್ಯೋತಿ ಹಚ್ಛಿದವರು ಸಾವಿತ್ರಿ ಬಾಯಿ ಫುಲೆ.ಆದ್ದರಿಂದ ಬಾಲಕೀಯರು ಅರ್ಧದಲ್ಲಿ ಓದು ನಿಲ್ಲಿಸದೇ ಉನ್ನತ ವ್ಯಾಸಾಂಗದವರೆಗೆ ಓದಿ, ತಮ್ಮ ಕಾಲಮೇಲೆ ತಾವು ನಿಲ್ಲುವಂತರಾಗಬೇಕೆಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ದಿನೇಶ್, ಕುರುಬರ ಹರೀಶ್ ಹಾಗೂ ಕೆ.ಹೆಚ್.ಯುವರಾಜ ಅವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ದಿಲ್ಷಾದ್ ಬೇಗಂ,ಮೋದಿನ್ ಸಾಬ್, ಚನ್ನಮ್ಮ,ಸುಮತಿ, ವೈಶಾಲಿ, ಶ್ವೇತಾ, ಉಮ್ಮೆಹಾನಿ,ಶಶಮ್ಮ ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ, ಅಶ್ವಿನಿ, ಪ್ರೀತಿ ಜಿಂಟಾ ಮುಂತಾದವರು ಉಪಸ್ಥಿತರಿದ್ದರು.