
ಸ್ವರ ಸಂಗೀತ ಉತ್ಸವ
ಸಂಗೀತಕ್ಕೆ ಅಪಾರ ಶಕ್ತಿ ಇದೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೧- ಸಂಗೀತಕ್ಕೆ ಅಪಾರವಾದ ಶಕ್ತಿ ಇದೆ, ಸಂಗೀತಕ್ಕೆ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಮನಸ್ಸು ನೊಂದಾಗ ಸಂಗೀತ ಮತ್ತು ಪುಸ್ತಕವನ್ನು ಓದುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ, ಸಂಗೀತದಿಂದ ಋಣಾತ್ಮಕ ಚಿಂತನೆಗಳನ್ನು ಧನಾತ್ಮಕ ಚಿಂತನೆಗಳನಾಗಿಸುವ ಶಕ್ತಿ ಇದೆ ಎಂದು ಶ್ರೀ ಶಿವಪ್ರಕಾಶನಂದ ಸ್ವಾಮಿಗಳು ಹೇಳಿದರು,
ಅವರು ಗಾನಾಮೃತ ಸಂಗೀತ ಪ್ರತಿಷ್ಠಾನ (ರಿ) ಭಾಗ್ಯನಗರ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕೊಪ್ಪಳ / ಬೆಂಗಳೂರು ಇವರ ಸಹಯೋಗದಲ್ಲಿ , ಶ್ರೀ ಶಂಕರಾಚಾರ್ಯರ ಮಠ ಭಾಗ್ಯನಗರ ದಲ್ಲಿ, ಸಂಸ್ಥೆ ವತಿಯಿಂದ “ಸ್ವರ ಸಂಗೀತ ಉತ್ಸವ” ವಿಶೇಷ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ವಿಜಯಲಕ್ಷ್ಮೀ ಮ್ಯಾಗಡೆ ಯವರುವಹಿಸಿದ್ದು , ಮುಖ್ಯ ಅತಿಥಿಗಳಾಗಿ ಗುರುರಾಜರಾವ್ ಕುಲಕರ್ಣಿ, ರಾಘವೇಂದ್ರ ಕೋಣಿ, ಮುತ್ತಣ್ಣ ಬಡಿಗೇರ, ಹಾಗೂ ಗುರುನಾಥ್ ಮಗಜಿ ಉಪಸ್ಥಿತರಿದ್ದರು,ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ, ಭಾಗವಹಿಸಿದ ಕಲಾವಿದರು, ತಬಲಾ ಸೋಲೋ ಮಾರುತಿ ಬಿನ್ನಾಳ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸಮೀರ್ ಕುಲಕರ್ಣಿ ರಾಯಚೂರು .
ಜಾನಪದ ಗೀತೆ ವಿಜಯಲಕ್ಷ್ಮೀ ಶ್ಯಾವಿ, ಸುಗಮ ಸಂಗೀತ ಅಧಿತಿ ಕೊಪ್ಪಳ , ದಾಸವಾಣಿ ಪ್ರಾರ್ಥನಾ ಕೊಣಿ ಹಾಗೂ ಪ್ರಾಚಿ ದಿವಾಕರ್, , ಭಾವಗೀತೆ ಸ್ನೇಹ ಕೆ ಎಮ್ ಗಂಗಾವತಿ, ವಚನ ಗಾಯನ ಬಾಲಾಜಿ ಗೀಣಗೇರಿ ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು.ವಾದ್ಯವೃಂದದ ಕೀಬೋರ್ಡನಲ್ಲಿ ಶ್ರೀ ರಾಮಚಂದ್ರಪ್ಪ ಉಪ್ಪಾರ ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲದ್ , ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.