
ನಮ್ಮದೇಶಕ್ಕೆ ಗೌರವಿಸುವದರ ಜೊತೆಗೆ ಸ್ವಾತಂತ್ರ್ಯಗೋಸ್ಕರ ಹೋರಾಡಿದ ಮಹಾತ್ಮರನ್ನು ಸ್ಮರಿಸಬೇಕು : ಶಾಸಕ ಬಸವರಾಜ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ ,26- ನಾವು ನಮ್ಮ ದೇಶವನ್ನು ಗೌರವಿಸುವದರ ಜೊತೆಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹಲವಾರು ಮಹನೀಯರು & ಮಹಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು ಅವರ ತ್ಯಾಗ.ಬಲಿದಾನಗಳ ಮತ್ತು ಹೋರಾಟದ ಫಲವಾಗಿ ನಮ್ಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಶಾಸಕ. ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿಅವರು ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75 ನೇಯ ಗಣ ರಾಜ್ಯೋತ್ಸವದ ಕಾಯ೯ಕ್ರಮದಲ್ಲಿ ಸಮಾರಂಭದಲ್ಲಿ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು 12 ಶತಮಾನದಲ್ಲಿ ಶರಣರು ಸಂತರು ಮೌಡ್ಯತೆಗಳನ್ನು ಹೋಗಲಾಡಿಸಲು ಸಾಕಷ್ಟು ತಮ್ಮ ಅನುಭವದ ಮೂಲಕ ಶ್ರಮೀಸಿದ್ದಾರೆ ಈ ಹಿಂದೆ ನಮ್ಮ ದೇಶದಲ್ಲಿ ಪರಕೀಯರು. ಪ್ರೆಂಚರು.ಪೊರಚಗಿಜರು. ಮೊಲಗರು. ಇವರು ಆಡಳಿತ ಮಾಡುತ್ತಿದ್ದರು ಆಗಿನ ಕಾಲದಲ್ಲಿ ಸಾಕ್ಷರತೆ ಪ್ರಮಾಣ ಕೇವಲ 12,/, ಶಿಕ್ಷಣ ಕಡಿಮೆ ಇತ್ತು ಈ ಹಿಂದೆ 50 ದಶಕದಲ್ಲಿ ಆಹಾರದ ಕೊರತೆ ಬಹಳ ಇತ್ತು ನಮ್ಮ ದೇಶಕ್ಕೆ ಪ್ರ ಪ್ರಥಮವಾಗಿ ಕಾನೂನಿನ ಮಂತ್ರಿ ಯಾಗಿ ಸಂವಿಧಾನದ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಆದರು ನಂತರ ಅವರ ಅಧ್ಯಕ್ಷತೆಯಲ್ಲಿ ಕರಡು ಸಮಿತಿ ರಚನೆಯಾಗಿತ್ತು.
ವಿಶೇಷವಾಗಿ ನಮ್ಮ ದೇಶದಲ್ಲಿ ಜಾತಿ. ಧರ್ಮ.ರಾಜಕಾರಣ. ಮೌಡ್ಯತೆಗಳು ಹೋಗಬೇಕು ನನ್ನ ಕ್ಷೇತ್ರದಲ್ಲಿ ಶಿಕ್ಷಣಕೋಸ್ಕರ ಸಾಕಷ್ಟು ಕೆಲಸ ಮಾಡಿದೇನೆ ಮುಂದಿನ ದಿನಮಾನಗಳಲ್ಲಿ 6 ಹಸ್ಕೋಲ್ 2 ರಿಂದ 3 ಜೂನಿಯರ್ ಕಾಲೇಜು. 2 ಮುರಾಜಿ೯ ವಸತಿ ಶಾಲೆಯ ಮಾಡುವ ಉದ್ದೇಶವಿದೆ ಅದಕ್ಕೆ ಜಮೀನು ಬೇಕಾಗಿದೆ ಆದಷ್ಟು ಬೇಗನೆ ಜಮೀನು ಸಿಕ್ಕರೆ ಅನುಕೂಲವಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಗ್ರ ಅಭಿವೃದ್ಧಿಗೆ ಶ್ರಮೀಸುತ್ತೇನೆ ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳಾಯಿತ್ತು ಸಿ. ಎಂ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನರಿಗೆ ಕೊಟ್ಟ ಮಾತಿನಂತೆ, 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಇದುವರೆಗೂ ಯಾವ ಮುಖ್ಯಮಂತ್ರಿ ಮಾಡದ ಮಹಿಳೆಯರಿಗೆ ಉಚಿತ ಬಸ್ ಗ್ರಹ ಲಕ್ಷ್ಮಿ.ಅಕ್ಕಿಭಾಗ್ಯ.ಉಚಿತ ವಿದ್ಯುತ್.ಯುವನಿಧಿ ಇನ್ನೂ ಹಲವಾರು ಯೋಜನೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಬಡವರ ಹೆಮ್ಮೆಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ.ಹಾಗು.ಪರೇಡ್ ವೀಕ್ಷಣೆ ಮಾಡಿ ಧ್ವಜಾವಂದನೆ ಸ್ವೀಕರಿಸಿ ನಂತರ ಮಾತನಾಡಿದ ಅವರು ಭಾರತ ದೇಶವು ಸಾರ್ವಭೌಮತೆಯ ಜ್ಯಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ. ಸಾಮಾಜಿಕ ನ್ಯಾಯದ ಸಂವಿಧಾನವನ್ನು 1950ರ ಜನವರಿ 26ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ, ಎಲ್ಲಾ ಪೌರರಿಗೆ ಮೂಲಭೂತ ಹಕ್ಕುಗಳನ್ನು ದಯಪಾಲಿಸಿ, ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಮೂಲಭೂತ ಕರ್ತವ್ಯಗಳನ್ನು ಸಹ ಸಂವಿಧಾನವು ನೀಡಿದೆ.
ಇಂತಹ ಮಹತ್ವ ಪ್ರೇರಣಾ ದಾಯಕವಾದ ದಿನವಾದ ಇಂದು ನಾವುಗಳು ಸಂವಿಧಾನದ ವಿಧಿವಿಧಾನಗಳ ಅನುಷ್ಠಾನದ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ದಿಗ್ಗಜರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಾಗಿದೆ ವಿದ್ಯಾರ್ಥಿಗಳು ತಂದೆ ತಾಯಿಗಳನ್ನು ಗೌರವಿಸಬೇಕು ,
ನಾವು ಸಂಪತ್ತು ಕಳೆದು ಕೊಂಡರೆ ಏನು ಕಳೆದು ಕೊಂಡಾಗಲ್ಲ ಆರೋಗ್ಯ ಕಳೆದು ಕೊಂಡರೆ ಎಲ್ಲಾ ಕಳೆದು ಕೊಂಡಂತೆ. ನಾವು ಚಾರಿತ್ರೆಯನ್ನು ಕಳೆದುಕೊಂಡರೆ ಸರ್ವಸ್ವವನ್ನೆ ಕಳೆದು ಕೊಂಡಂತೆ ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಚಾರಿತ್ರ್ಯ ಬೆಳೆಸಿಕೋಳ್ಳಬೇಕು ಹಿರಿಯರನ್ನು ಗೌರವಿಸಿ ಒಳ್ಳೆಯ ಬೆಳವಣಿಗೆಯನ್ನು ರೂಡಿಸಿಕೊಳ್ಳಬೇಕು ಎಂದರು ನಂತರ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ. ಹಾಡು ನೃತ್ಯ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣ ಈ ಕಾರ್ಯಕ್ರಮದಲ್ಲಿ ತಾಲೂಕು ಅಧಿಕಾರಿಗಳಾದ ತಹಶೀಲ್ದಾರ್ ಬಸವರಾಜ ತನ್ನಳ್ಳಿ. ಸಿಪಿಐ ಮೌನೇಶ್ವರ ಮಾಲಿ ಪಾಟೀಲ.ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಸಜ್ಜನ ತಾ.ಪಂ.ಇ.ಒ.ಸಂತೋಷ ಬಿರಾದಾರ,ಕೃಷಿ ಅಧಿಕಾರಿ ಪ್ರಾಣೇಶ್ ಹಾದಿಮನಿ. ,ಪ.ಪಂ ಮುಖ್ಯಾಧಿಕಾರಿ.ನಾಗೇಶ ಅಕ್ಷರ ದಾಸೋಹ ಅಧಿಕಾರಿ ಎಫ್. ಎಂ. ಕಳ್ಳಿ. ಸಮಾಜ ಕಲ್ಯಾಣ ಅಧಿಕಾರಿ ವಿ. ಕೆ. ಬಡಗೇರ ಪಿಎಸ್ಐ ವಿಜಯ ಪ್ರತಾಪ್ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹನುಮಂತ ಗೌಡ ಪಾಟೀಲ ಬಿ. ಎಂ. ಶಿರೂರ. ವೀರನಗೌಡ ಪೋಲಿಸ್ ಪಾಟೀಲ.ಸಂಗಣ್ಣ ಟೆಂಗಿನಕಾಯಿ ಕೆರಿಬಸಪ್ಪನಿಡಗುಂದಿ ಡಾಕ್ಟರ್ ಶಿವನಗೌಡ ದಾನರಡ್ಡಿ ಶರಣಪ್ಪ ಗಾಂಜಿ ಮಲ್ಲು ಜಕ್ಕಲಿ.ಪಟ್ಟಣ ಪಂಚಾಯಿತಿ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ ಡಾಕ್ಟರ್ ನಂದಿತಾ ದಾನರಡ್ಡಿ ಹನುಮಂತ ಬಜಂತ್ರಿ ರಿಯಾಜ್ ಖಾಜಿ ಅಶೋಕ ಅರಕೇರಿ ವಸಂತ ಭಾವಿಮನಿ ಅಂದಯ್ಯ ಕಳ್ಳಿಮಠ ರೇವಣಪ್ಪ ಹಿರೇಕುರಬರ. ಸೇರಿದಂತೆ ಮತ್ತು ಇತರರು ಭಾಗವಹಿಸಿದರು.