
ಸ್ವಾತಂತ್ರ್ಯ ಬಂದು 76ವರ್ಷ ಕಳೆದರೂ, ಎಲ್ಲಾ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದರೂ ವಿದ್ಯಾರ್ಥಿಗಳ ಸಮಸ್ಯೆಗಳು ಕೊನೆಗಾಣುತ್ತಿಲ್ಲ
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ದುಡಿಯುವ ಜನರ ಹೋರಾಟದ ಧ್ವನಿಯಾಗಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಬಳ್ಳಾರಿ -ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್ ಅವರಿಗೆ ಎಐಡಿಎಸ್ಓ ವತಿಯಿಂದ ವಿದ್ಯಾರ್ಥಿಗಳ ಬೇಡಿಕೆಯ ಪ್ರಣಾಳಿಕೆಯನ್ನು ಸಲ್ಲಿಸಲಾಯಿತು.
ಸ್ವಾತಂತ್ರ್ಯ ಬಂದು 76ವರ್ಷಗಳು ಕಳೆದರೂ, ಎಲ್ಲಾ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿದರೂ ಕೂಡ ವಿದ್ಯಾರ್ಥಿಗಳ ಸಮಸ್ಯೆಗಳು ಕೊನೆಗಾಣುತ್ತಿಲ್ಲ. ಎಲ್ಲಾ ಪಕ್ಷಗಳು ಕೂಡ ಶಿಕ್ಷಣವನ್ನು ಖಾಸಗೀಕರಣ ಮಾಡಿ ಬಡವರಿಗೆ ಶಿಕ್ಷಣ ಇಲ್ಲ ಅನ್ನುವಂತೆ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ ನಲ್ಲಿ 10% ಮತ್ತು ರಾಜ್ಯ ಬಜೆಟ್ 30%ರಷ್ಟು ಮೀಸಲಿಡಬೇಕು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ದೊರೆಯಬೇಕು. ವಿದ್ಯಾರ್ಥಿ ವೇತನ ಸರಿಯಾದ ಸಮಯಕ್ಕೆ ನೀಡಬೇಕು ಮತ್ತು ಮುಖ್ಯವಾಗಿ ಬಡವರಿಂದ ಶಿಕ್ಷಣ ಕಸಿದುಕೊಳ್ಳುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ-2020) ಅನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಓ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರು ಕೆ.ಈರಣ್ಣ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಸದಸ್ಯರು ಮಂಜುನಾಥ, ಶಾಂತಿ, ರೇಖಾ, ಅಭಿಲಾಷ, ಪಾಲಕ್ಷ, ಅಜಯ್ ಮತ್ತು ಇತರರು ಭಾಗವಹಿಸಿದ್ದರು.