
ರಾಷ್ಟ್ರ ಮಟ್ಟದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆ : ಬಳ್ಳಾರಿ ಜಿಲ್ಲೆಗೆ 5 ಚಿನ್ನ, 2 ಬೆಳ್ಳಿ, 3 ಕಂಚು ಪದಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ಮಧ್ಯಪ್ರದೇಶದ ಗ್ವಾಲಿಯರ್‍ನ ಅಟಲ್ ಬಿಹಾರಿ ವಾಜಪೇಯಿ ತರಬೇತಿ ಕೇಂದ್ರದಲ್ಲಿ ಮಾ.29 ರಿಂದ 31 ರ ವರೆಗೆ ನಡೆದ 2023-24 ನೇ ಸಾಲಿನ ರಾಷ್ಟ್ರಮಟ್ಟದ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ ಬಳ್ಳಾರಿ ಜಿಲ್ಲೆಗೆ ಒಟ್ಟು 5 ಚಿನ್ನ, 2 ಬೆಳ್ಳಿ, 3 ಕಂಚು ಪದಕ ಲಭಿಸಿವೆ.
ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಗೋಪಿಚಂದ್, ಯೋಜಿತ್, ಸಾಯಿ ಬೇಬಿ, ಸಾಯಿ ನಿಖಿಲ್, ಕೆ.ಕವಿತಾ ಅವರು ಭಾಗವಹಿಸಿದ್ದರು.
ಈಜುಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಗೋಪಿಚಂದ್ ಅವರಿಗೆ 3 ಚಿನ್ನದ ಪದಕ, ಯೋಜಿತ್‍ಗೆ 1 ಚಿನ್ನ ಹಾಗೂ 1 ಬೆಳ್ಳಿ ಪದಕ, ಸಾಯಿ ಬೇಬಿ ಅವರಿಗೆ 1 ಕಂಚು, ಸಾಯಿ ನಿಖಿಲ್‍ಗೆ 1 ಚಿನ್ನ ಹಾಗೂ 2 ಕಂಚಿನ ಪದಕ ಮತ್ತು ಕೆ.ಕವಿತಾ ಅವರು 1 ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಸ್ಪರ್ಧಿಗಳು ರಜನಿ ಲಕ್ಕ, ಸ್ವಾಮಿ, ಶರತ್ ಗಾಯಕ್‍ವಾಡ್(ಅರ್ಜುನ ಪ್ರಶಸ್ತಿ ಪುರಸ್ಕøತ) ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು.
ಈಜು ಪಟುಗಳ ಈ ಉತ್ತಮ ಸಾಧನೆಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ ಗ್ರೇಸಿ ಅವರು ಅಭಿನಂದಿಸಿದ್ದಾರೆ.