
ಹಂಪಿ ಉತ್ಸವ -2025 ಕೊನೇ ಘಟ್ಟದ ಸಮಾರೋಪ ಸಮಾರಂಭ
ಹಂಪಿ ಉತ್ಸವ ಜನೋತ್ಸವವಾಗಿದೆ : ಶಾಸಕ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ಹಂಪಿ (ವಿಜಯನಗರ )ಮಾ, 02: ಹಂಪಿ ಉತ್ಸವ -2025ರ 3 ದಿನಗಳ ಕಾಲ ನಡೆದ ಉತ್ಸವಕ್ಕೆ ಭಾನುವಾರ ಎಂಪಿ ಪ್ರಕಾಶ್ ವೇಧಿಕೆಯಲ್ಲಿ ಅಂತಿಮವಾಗಿ ತೆರೆ ಎಳೆಯಲಾಯಿತು. ಉತ್ಸವ ಮೊದಲನೇ ದಿನ ನಿರೀಕ್ಷೆಗಿಂತಲೂ ಜನಗಳಿಲ್ಲದೆ ಕಳೆಗುಂದಿತ್ತು, ಮಾರನೇ ದಿನ ಶನಿವಾರ ಮತ್ತು ಭಾನುವಾರ ಕಿಕ್ಕಿರಿದು ಜನ ಸೇರಿದ್ದು ಯಶಸ್ವಿಗೆ ಕಾರಣವಾಯಿತು.
ಶಾಸಕ ಹೆಚ್ ಆರ್ ಗವಿಯಪ್ಪ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಂಪಿಯ ಪಂಪಾ ಭುವನೇಶ್ವರಿ, ಮಾತಂಗಿ, ಮಹರ್ಷಿ ಮಾತಂಗಿ ದೇವಿಯರ ಕೃಪಾ ಕಟಾಕ್ಷದಿಂದ ಇಂತಹ ವೈಭವ ನಡೆದಿದೆ, ಮುಖ್ಯಮಂತ್ರಿ ಬಂದಿದ್ದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ವಿ ಕಾಣಬಹುದಿತ್ತು, ಉಸ್ತುವಾರಿ ಸಚಿವರಿಂದ ಹಂಪಿ ಉತ್ಸವ ಜನೋತ್ಸವವಾಗಿದೆ. ಎಂ.ಪಿ.ಪ್ರಕಾಶ್ ರವರು 1992ರಲ್ಲಿ ಅಂದು 2 ಲಕ್ಷಗಳಲ್ಲಿ ಪ್ರಾರಂಭಿಸಿದ್ದರು, ಈ ಉತ್ಸವ ಇನ್ನು ಹೆಚ್ಚಿನ ಮಟ್ಟದಲ್ಲಿ ನಡೆಯುವಂತಾಗಲಿ ಮೂರು ದಿನಗಳು ನಡೆದ ಉತ್ಸವಕ್ಕೆ ಆಗಮಿಸಿ ಗತ ವೈಭವ ಮರುಕಳಿಸುವಂತೆ ಮಾಡಿ ಯಶಸ್ವಿ ಗೊಳಿಸಿದ್ದಕ್ಕಾಗಿ ಎಲ್ಲರಿಗೂ ಶುಭವಾಗಲಿ ಎಂದರು.
ಎಂ ಎಸ್ ದಿವಾಕರ ಜಿಲ್ಲಾಧಿಕಾರಿ ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟಿರಲಿಲ್ಲ ಬದಲಾಗಿ ವಿಶ್ವಾಸವಿಟ್ಟಿದ್ದೆ ಎಂದು ನಂಬಿಕೆ ಮತ್ತು ವಿಶ್ವಾಸ ಕುರಿತು ಸಣ್ಣ ವ್ಯತ್ಯಾಸದ ಕತೆ ಹೇಳಿದರು. ಅದೇ ರೀತಿ ನಮ್ಮ ಎಲ್ಲಾ ಅಧಿಕಾರಿಗಳು ವಿಶ್ವಾಸದಿಂದ ಸ್ವಚ್ಛತೆ, ನೀರು ಊಟ-ವಸತಿ, ವೇಧಿಕೆ, ಇತರೆ ಎಲ್ಲಾ ಕೆಲಸ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಈ ಉತ್ಸವದಲ್ಲಿ ಏನಾದರೂ ತಪ್ಪುಗಳಾಗಿದ್ದಲ್ಲಿ ಕ್ಷಮಿಸಿ, 10ಸಾವಿರ ಕಲಾವಿದರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ, ಮುಂದಿನ ವರ್ಷದಲ್ಲಿ ಸರಿಪಡಿಸಿಕೊಳ್ಳುತ್ತೇವೆ. ನೀವು ಲಕ್ಷ ಜನ ಇದ್ದರೆ ನಿಮ್ಮವು 10ಲಕ್ಷ ಕಣ್ಣು, ನನವು ಎರಡೇ ಕಣ್ಣು ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸಿ ಎಂದು.
ಉತ್ಸವಕ್ಕೆ ಕಾರಣರಾದ ಎಸಿ ವಿವೇಕಾನಂದ, ಮನೋಹರ ಯೋಜನಾ ನಿರ್ದೇಶಕ, ಸಿದ್ದಲಿಂಗಯ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಭುಲಿಂಗ ಎಸ್ ತಳಕೇರಿ ಪ್ರವಾಸೋದ್ಯಮ ಇಲಾಖೆ, ಧನಂಜಯಪ್ಪ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹನುಮಂತಪ್ಪ ಇಒ, ಮಹಾಂತೇಶ್ ಬೀಡಗಿ ಮುಖ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ, ಮತ್ತು ವೇಧಿಕೆ ನಿರ್ಮಿಸಲು ಕಾರಣರಾದ ಅರ್ಜುನ್ ಉಡುಪ ಮತ್ತಿತರರಿಗೆ ಅಭಿನಂದನೆಗಳನ್ನು ತಿಳಿಸಿದರು.
ರಂಜಾನ್ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ರ ಅನುಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ವೇಧಿಕೆ ಮೇಲೆ ಎಐಸಿಸಿ ಸದ್ಯಸ್ಯ ರಮ್ಯಾ, ರಜಿನಿ ಷಣ್ಮುಖ ಗೌಡ ಅಧ್ಯಕ್ಷರು ಗ್ರಾಮ ಪಂಚಾಯಿತಿ, ಇಮಾಮ್ ನಿಯಾಜಿ ಹೆಸಪೇಟೆ ನಗರದ ಹುಡಾ ಅಧ್ಯಕ್ಷರು, ಎಡಿಸಿ ಇ ಬಾಲಕೃಷ್ಣ , ನಾಂಗ್ ಜೈ ಮೊಹಮ್ಮದ್ ಅಲಿ ಅಕ್ರಮ್ ಷಾ, ವಿಜಯನಗರ ಜಿಲ್ಲಾ ಮುಖ್ಯ ಕಾರ್ಯ ನಿರ್ವಕ ಅಧಿಕಾರಿ, ಶ್ರೀ ಹರಿ ಬಾಬು ಬಿ ಎಲ್ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಿಕೆಮೇಲೆ ಉಪಸ್ಥಿತರಿದ್ದರು.