20231206_142149 (1)

ಮಾದಿಗ ಮುನ್ನಡೆ ಸಮಾವೇಶ ಪೂರ್ವಬಾವಿ ಸಭೆ

ಹಕ್ಕುಗಳಿಗೆ ನಾವೆಲ್ಲರೂ ಒಂದಾಗೋಣ ಬನ್ನಿ 

ಬಸವರಾಜ ದಡೆಸೂಗುರ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೬- ನಗರದಲ್ಲಿ ಬುಧವಾರದಂದು ನಡೆದ ಮಾದಿಗ ಮುನ್ನಡೆ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮಾಜಿ ಶಾಸಕ ಬಸವರಾಜ ದಡೆಸೂಗೂರ್ ಮಾತನಾಡಿ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಬಹುಪಾಲು ಜನಸಂಖ್ಯೆ ಹೊಂದಿದ್ದು ಜನಸಂಖ್ಯಾ ಅನುಗುಣವಾಗಿ ಮೂರು ದಶಕಗಳ ಮೀಸಲಾತಿ ವರ್ಗೀಕರಣ ಹೋರಾಟ ಯಾವ ಕಾರಣಕ್ಕೆ ನಿರ್ಲಕ್ಷ ಮಾಡುತ್ತಿದ್ದಾರೆ ಎನ್ನುವ ಗಂಭೀರ ವಿಚಾರವಾಗಿ ಮಾದಿಗ ಮುನ್ನಡೆ ಸಮಾವೇಶ ನಿರ್ವಹಿಸಲು ಪೂರ್ವಬಾವಿ ಸಭೆ ಆಯೋಜಿಸಲಾಗಿದೆ.
ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಸರಕಾರ ಆಡಳಿತ ಮಾಡಿದರೂ ಒಳ ಮೀಸಲಾತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ನಂತರ ಯಾವ ಕಾರಣಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದರ ಫಲವಾಗಿ ಬಸವರಾಜ ಬೊಮ್ಮಾಯಿ ಯವರ ಸರ್ಕಾರ ಸಾಮಾಜಿಕ ನ್ಯಾಯ ಸಂವಿಧಾನ ಅಶಯವಾದ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಲ್ಲಿ ಯಶಸ್ವಿಯಾಯಿತು ಆದರೆವಿರೋಧ ಪಕ್ಷಗಳು ಗೊಂದಲ ಸೃಷ್ಟಿ ಮಾಡಿ ಸಮುದಾಯವನ್ನು ದಿಕ್ಕು ತಪ್ಪಿಸುವ ಎಲ್ಲಾ ಪ್ರಯತ್ನ ಗಳನ್ನು ಮಾಡಿದರು.

ಆದರೆ ಮಾದಿಗ ಸಮುದಾಯ ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯವಾಗಿ ಬಲಿಪಶು ಆದರು ಇನ್ನೂ ಮುಂದೆ ನಾವು ಎಲ್ಲರೂ ಸಂಘಟಿತರಾಗಬೇಕು ಸಮುದಾಯದ ಯುವಕರು ಶೈಕ್ಷಣಿಕವಾಗಿ ಶಿಕ್ಷಣ ಪಡೆಯಬೇಕು, ಆರ್ಥಿಕವಾಗಿ ಸಬಲರಗಬೇಕು ಮತ್ತು ರಾಜಕೀಯವಾಗಿ ಸಂಘಟಿತರಾದಾಗ ಮಾತ್ರ ಸಮುದಾಯ ಅಭಿವೃದ್ಧಿ ಆಗಲು ಸಾಧ್ಯವಿದೆ ಎಂದು ಮಾತನಾಡಿದರು ಇದೆ ಡಿಸೆಂಬರ್ 17 ನೆ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಾದಿಗ ಮುನ್ನಡೆ ಸಮಾವೇಶಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಿ ಯಶಸ್ವಿ ಗೊಳಿಸಬೇಕು ಎಂದು ಮಾತನಾಡಿದರು.

ನಂತರ ಸಂಘಟನಾ ಸಹ ಪ್ರಭರಿಗಳಾದ ಪೂಜಪ್ಪ ರವರೂ ಮಾತನಾಡಿ ಸಮಾವೇಶದ ರೂಪರೇಷ ಮತ್ತು ಒಳಮೀಸಲಾತಿ ನ್ಯಾಯಾಂಗ ಹೋರಾಟದ ಬಗ್ಗೆ ಸವಿಸ್ತಾರವಾಗಿ ತಿಸಿದರು ಸಮಾವೇಶಕ್ಕೆ ಹೆಚ್ಚಿನ ಯುವಕರು ಮತ್ತು ಮಹಿಳೆಯರನ್ನು ಕರೆ ತರಬೇಕು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದರು.
ನಂತರ ನಾಗಲಿಂಗ ಮಾಳೆಕೊಪ್ಪ ಮಾತನಾಡಿ ಒಳಮೀಸಲಾತಿ ಇಂತದ್ದೇ ಸರಕಾರ ಮಾಡಬೇಕು ಎಂದು ನಿಯಮವಿಲ್ಲ ಒಳಮೀಸಲಾತಿ ಯಾವದೇ ಸರಕಾರ ಮಾಡಿದರು ನಾವು ಸ್ವಾಗತ ಮಾಡುತ್ತೇವೆ ಎಂದರು. ನಂತರ ಗಣೇಶ್ ಹೊರತಟ್ನಾಳ ಮಾತನಾಡಿ ಮಾದಿಗ ಸಮಾಜ ಬಹುದೊಡ್ಡ ಜನಸಂಖ್ಯೆ ಹೊಂದಿದೆ ಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಬಾಜಪ ಪಕ್ಷ ಅತಿ ಹೆಚ್ಚು ಒತ್ತು ನೀಡಿ ಸಾಮಾಜಿಕ ನ್ಯಾಯ ನೀಡುವಲ್ಲಿ ಸಂಘ ಪರಿವಾರ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದರೆ ನಾವೆಲ್ಲರೂ ಬೆಂಬಲವಾಗಿ ಕೈ ಜೋಡಿಸಿ ಒಗ್ಗಟ್ಟಾಗಿ ಒಂದಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಂದಾಗೋಣ ಎಂದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಹಿರಿಯ ಮುಖಂಡರು ಮತ್ತು ಮಾಜಿ ನಗರಸಭಾ ಅಧ್ಯಕ್ಷರಾದ ಗವಿದ್ದಪ್ಪ ಕಂದಾರಿ, ಮೂಸಲಾಪೂರ, ಸುಭಾಷ್ ಕನಕಗಿರಿ, ಹನುಮಂತಪ್ಪ ಡಗ್ಗಿ, ಮಹಾಲಕ್ಷ್ಮಿ ಕಂದಾರಿ, ಮೈಲಾರಪ್ಪ ವಕೀಲರು, ಧರ್ಮಣ್ಣ ಸುರಪುರ, ಯಲ್ಲಪ್ಪ ಕಟ್ಟಿಮನಿ, ಪರಶುರಾಮ ಕೀಡದಾಳ, ಶಿವಪ್ಪ ಮಾದಿಗ, ಮರಿಸ್ವಾಮಿ ಕುಷ್ಟಗಿ, ಗವಿಸಿದ್ದಪ್ಪ ಗಿಣಿಗೆರಿ, ಮರಿಸ್ವಾಮಿ ಬೇವೂರ್, ರಮೇಶ್ ಬೇಳೂರು ಅನೇಕ ಮುಖಂಡರು, ಹಿರಿಯರು ಪಾಲ್ಗೊಂಡು ಸಭೆ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!