27c5107c-4f1e-42fb-87fe-e9d5a28b44e4

ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ

ರಾಷ್ಟ್ರೀಯ ರೈತ ದಿನಾಚರಣೆ

ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೨೭- ರೈತರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸಮಗ್ರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರ‍್ಥಿಕವಾಗಿ ಸಧೃಡರಾಗಬೇಕು ಎಂದು ಕೃಷಿ ಜಂಟಿ ನರ‍್ದೇಶಕ ಡಾ.ಮಲ್ಲಿಕರ‍್ಜುನ ಅವರು ರೈತರಿಗೆ ಕರೆ ನೀಡಿದರು.
ಅವರು   ತಾಲ್ಲೂಕಿನ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ವಿಜ್ಞಾನ ಕೇಂದ್ರ ಅವರ ಸಹಯೋಗದೊಂದಿಗೆ ರಾಷ್ಟ್ರೀಯ ರೈತ ದಿನಾಚರಣೆ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆತ್ಮ ಯೋಜನೆಯಡಿ ೨೦೨೩-೨೪ ನೇ ಸಾಲಿನ ಮೂವರು ಕೃಷಿಕರಿಗೆ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ: ಗಾಳೆಪ್ಪ (ವೈ ಬೂದಿಹಾಳ್), ಹೆಚ್.ಮಲ್ಲಿಕರ‍್ಜುನ (ಹರಗಿನಡೋಣಿ), ದೊಡ್ಡ ಬಸವರಾಜ್ (ಹರಗಿನಡೋಣಿ).
ಅದೇ ರೀತಿಯಾಗಿ ಐದು ಜನ ಕೃಷಿಕರಿಗೆ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ: ಲಕ್ಷ್ಮೀ (ಸಿಂಧಿಗೇರಿ), ಎಲ್.ವಿ.ಲಿಂಗಾರೆಡ್ಡಿ (ಮೋಕ), ಬಿ.ಮಲ್ಲಿಕರ‍್ಜುನ (ತೆಗ್ಗಿನ ಬೂದಿಹಾಳ್), ಕಟ್ಟೇಗೌಡ (ಶಂಕರಬಂಡೆ), ಜಿ.ಕುಮಾರಸ್ವಾಮಿ (ಮಿಂಚೇರಿ).
ಕಾರ್ಯಕ್ರಮದಲ್ಲಿ ಕೃಷಿ ಉಪನರ‍್ದೇಶಕ ಎನ್.ಕೆಂಗೇಗೌಡ, ಸಹಾಯಕ ಕೃಷಿ ನರ‍್ದೇಶಕ ದಯಾನಂದ.ಎಂ., ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ.ಗೋವಿಂದಪ್ಪ.ಎಂ.ಆರ್., ವಿಜ್ಞಾನಿ ಮಣ್ಣು ವಿಜ್ಞಾನ ಡಾ.ರವಿ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಐನಾಥ ರೆಡ್ಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಲಕ್ಷ್ಮೀ ಕಾಂತ ರೆಡ್ಡಿ ಸೇರಿದಂತೆ ರೈತರು ಹಾಗೂ ಸಿಬ್ಬಂದಿ ರ‍್ಗದವರು, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!