ಹಗ್ಗ-ಜಗ್ಗಾಟ ಸ್ಪರ್ಧೆ ಕನಕಗಿರಿಯ ಪವರ್ ಸ್ಟಾರ್ ಪುನೀತ್ ತಂಡಕ್ಕೆ ಜಯ (4)

ಕನಕಗಿರಿ ಉತ್ಸವ- 2024

ಹಗ್ಗ-ಜಗ್ಗಾಟ ಸ್ಪರ್ಧೆ : ಕನಕಗಿರಿಯ ಪವರ್ ಸ್ಟಾರ್ ಪುನೀತ್ ತಂಡಕ್ಕೆ ಜಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,1- ಕನಕಗಿರಿ ಉತ್ಸವ-2024ರ ಅಂಗವಾಗಿ ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ  ಹಮ್ಮಿಕೊಂಡಿದ್ದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಕನಕಗಿರಿಯ ಪವರ್ ಸ್ಟಾರ್ ಪುನೀತ್ ತಂಡಕ್ಕೆ ಜಯ ಲಭಿಸಿದೆ.

ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಐತಿಹಾಸಿಕ ಪುಣ್ಯ ಕ್ಷೇತ್ರವಾದ ಕನಕಗಿರಿ ಉತ್ಸವ ನಿಮಿತ್ತ ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜರುಗಿದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಕನಕಗಿರಿಯ ಮಂಜುನಾಥ್ ಚುಡಾಮಣಿ ನೇತೃತ್ವದ ಪವರ್ ಸ್ಟಾರ್ ಪುನೀತ್ ತಂಡವು ಪ್ರಥಮ ಸ್ಥಾನ, ಹೊಸಕೇರಾದ ದುರ್ಗಾ ಮಹೇಶ್ವರಿ ತಂಡ ದ್ವಿತೀಯ ಹಾಗೂ ಕನಕಗಿರಿಯ ಕನಕಾಚಲ ತಂಡವು ತೃತೀಯ ಸ್ಥಾನ ಪಡೆದಿದ್ದು, ಈ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!