WhatsApp Image 2024-06-04 at 5.07.04 PM

ಹಮಾರಾ ಬಾರಾ ಚಲನಚಿತ್ರ‌ ಬಿಡುಗಡೆ ಮಾಡಬಾರದು ಎಂದು ಮುಸ್ಲಿಂ ಮುಖಂಡರಿಂದ ಮುಖ್ಯ ಮಂತ್ರಿಗಳಿಗರ ಮನವಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 4- ಇಸ್ಲಾಂ ಧರ್ಮದ ಮುಸ್ಲಿಂಮರ ವಿರುದ್ಧ ಮಾಡಲಾದ ಚಲನಚಿತ್ರ ಬಿಡುಗಡೆ ಮಾಡುವುದನ್ನು ನಿಲ್ಲಿಸಿ ತಕ್ಷಣವೆ ಚನಚಿತ್ರವನ್ನು ಬ್ಯಾನ್ ಮಾಡುವಂತೆ ಮುಸ್ಲಿಂ ಮುಖಂಡರು ಸೋಮವಾರ ಸಂಜೆ ನಗರದ ತಹಶೀಲ್ದಾರ ಮತ್ತು ಪೊಲೀಸ್ ‌ಉಪಾಧೀಕ್ಷಕರಿಗೆ ಮನವಿ ಸಲ್ಲಿಸಿದರು.

ಇದೇ ತಿಂಗಳ ಜೂನ್ 7 ರಂದು ಹಮಾರ ಬಾರಾ ಎಂಬ ಚಲನಚಿತ್ರ ದೇಶದಾದ್ಯಂತ ಬಿಡುಗಡೆ ಆಗಲಿದೆ. ಈ ಚಲನಚಿತ್ರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಮತ್ತು ಮುಸ್ಲಿಮರ ವಿರುದ್ಧ ಹಾಗೂ ಮಹಿಳೆಯರ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಮತ್ತು ಅವಹೇಳನಕಾರಿ ಮಾತುಗಳನ್ನು ಹೇಳಲಾಗಿದೆ, ಕೋಮಿನವರಿಗೆ ಕೀಳಾಗಿ ನೋಡಲಾಗಿದೆ, ಹಿಂದು ಮುಸ್ಲಿಂರ ಮಧ್ಯೆ ವಿಷಬೀಜ ಹಾಕಲಾಗಿದೆ. ಮುಸ್ಲಿಂರನ್ನು ಹಿಂದು ವಿರೋಧಿ ತರಹ ಬಿಂಬಿಲಿಸಲಾಗಿದೆ. ಇಂತಹ ಅನೇಕ ರೀತಿಯ ದೃಶ್ಯಗಳು ಹಮಾರೆ ಬಾರ ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಆದರೆ ಚಲನಚಿತ್ರದಲ್ಲಿ ಇಷ್ಟೊಂದು ಲೋಪ ದೋಷಗಳು ಇದ್ದರೂ ಸೆನ್ಸರ್ ಬೊರ್ಡ್ ಚಲನಚಿತ್ರ ಬಿಡುಗಡೆ ಮಾಡಲು ಅನುಮತಿ ಕೊಟ್ಟಿದೆ.. ಇಂತಹ ಚಿತ್ರಗಳಿಗೆ ಅನುಮತಿ ಕೊಟ್ಟರೆ ದೇಶದಲ್ಲಿ ಜಾತಿ ಜಾತಿಗಳ ಮಧ್ಯೆ ದ್ವೇಶ ಹುಟ್ಟಿಸುತ್ತದೆ. ದೇಶದಲ್ಲಿ ಇರುವಂತಹ ಒಂದು ಧರ್ಮಕ್ಕೆ ಉದ್ದೇಶ ಪೂರ್ವಕವಾಗಿ ಟಾರೈಟ್ ಮಾಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿ, ದೇಶದಲ್ಲಿ ಆಶಾಂತಿ ಹುಟ್ಟಿಸುವುದು ಮುಸ್ಲಿಂ ಧರ್ಮದವರ ಬಾವನೆಗಳಿಗೆ ಧಕ್ಕೆ ಉಂಟು ಮಾಡುವ ಷಡ್ಯಂತ್ರವಾಗಿದೆ.

ಆದ್ದರಿಂದ ಚಲನಚಿತ್ರ ಬಿಡುಗಡೆ ಮಾಡಬಾರದು ಎಂದು ಮನವಿಯನ್ನು ನೀಡಿದ್ದೇವೆಂದು ಸಾಮಾಜಿಕ ಹೋರಾಟಗಾರ ಖಾಜಾ ಮೋಹಿನುದ್ದಿನ್ ಮತ್ತು ಮುಸ್ಲಿಂ ಮುಖಂಡರಾದ ಅತಾವುಲ್ಲ ಜೀಲಾನ್ ಭಾಷಾ ಸನ್ವತ್ ಭಾಯ್ ಎಸ್ ರಾಜ ಸಾಬ್ ಸಲೀಮ್ ಸೇರಿದಂತೆ ಅನೇಕರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!