
ಹಲಗೇರಿ ; ಏ 30 ರಿಂದ ಮೇ 8ರವರೆಗೆ
ದ್ಯಾಮವ್ವದೇವಿ ಜಾತ್ರಾ ಮಹೋತ್ಸ
ಚಪ್ಪಲಿ ಹಾಕಲ್ಲ ,ಊರು ಬಿಡಲ್ಲಾ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ನಾಡಿನ ಪ್ರಸಿದ್ಧ ದೇವತೆ ಹಲಗೇರಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆ ಏ 30 ರಿಂದ ಮೇ 8ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಗ್ರಾಮದ ಹಿರಿಯರು ಹಾಗೂ ಶಾಂಭವಿ ಸೇವಾ ಟ್ರಸ್ಟ್ ಪ್ರಮುಖರಾದ ಶಂಭುಲಿಂಗನಗೌಡ ಹಲಗೇರಿ, ದೇವೇಂದ್ರಪ್ಪ ಬಡಿಗೇರ, ಶರಣಪ್ಪ ಬಿನ್ನಾಳ, ಮಾರುತೇಶ ಅಂಗಡಿ ಹಾಗೂ ಮಂಜುನಾಥ ಕೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಮಂಗಳವಾರ ಬೆಳಿಗ್ಗೆ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಏ. 30ರಂದು ಬೆಳಿಗ್ಗೆ ದ್ಯಾಮವ್ವ ದೇವಿಯ ಬೆಳ್ಳಿಯ ಉತ್ಸವ ಮೂರ್ತಿಯನ್ನು ಪೂಜಾರರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರುವುದು, ನಂದಾದೀಪ ಮತ್ತು ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದರು.
ಜಾತ್ರೆಯ ಅಂಗವಾಗಿ ಗ್ರಾಮದ ಗ್ರಾಮಸ್ಥರು ಕಾಲಿಗೆ ಚಪ್ಪಲಿ ಹಾಕುವ ಹಾಗಿಲ್ಲಾ ಮತ್ತು ಊರು ಬಿಡುವಹಾಗಿಲ್ಲಾ ಇದು ಗ್ರಾಮದ ಹಿರಿಯ ನಡೆಸಿರುವ ಸಂಪ್ರದಾಯದ ಕಟ್ಟಳೆ ಎಂದರು .
ಜಾತ್ರೆಯ ಅಂಗವಾಗಿ ಮೇ 1ರಂದು ದೇವಿಗೆ ಗಂಗಾಭಿಷೇಕ, ಆಭರಣಗಳ ಅಲಂಕಾರ, 2ರಂದು ಮಾಲಿ ಮೆರವಣಿಗೆ, ಬನ್ನಿಮಹಾಂಕಾಳಿಗೆ ಪೂಜೆ, 3ರಂದು ದಶಮಿ ಡಿಂಡಿಯಲ್ಲಿ ಮೂರ್ತಿ ಮೆರವಣಿಗೆ, 4ರಂದು ರಥದ ಕಳಸ, ಹಗ್ಗ ಹಾಗೂ ನಂದಿಕೋಲುಗಳನ್ನು ಮೆರವಣಿಗೆ ಮೂಲಕ ತರುವುದು, 5ರಂದು ದೇವಿಗೆ ಗಂಗಾಭಿಷೇಕ, ಉಡಿತುಂಬುವುದು, 6ರಂದು ಗಂಡಾರತಿ, ಗೌರಿ ಕಳಶ ದೇವಸ್ಥಾನಕ್ಕೆ ತರುವುದು, 7ರಂದು ಗಂಗಾಪೂಜೆ, ಲಘು ರಥೋತ್ಸವ ಜರುಗಲಿದೆ’ ಎಂದು ಹೇಳಿದರು.
ರಥೋತ್ಸವ ; ಐತಿಹಾಸಿಕ ದೇವಿಯ ಮಹಾರಥೋತ್ಸವ ಮೇ 8ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿ ಎಂದರು
ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗ್ರಾಮಸ್ಥರಿಗೆ ಹಾಗೂ ನಾಡಿನ ಭಕ್ತಾಧಿಗಳಿಗೆ ಪ್ರತಿನಿತ್ಯ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಇದ್ದು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಿದರು.