WhatsApp Image 2024-01-30 at 3.37.40 PM

ಹಾಯ್ ಕೊಪ್ಪಳ ಕನ್ನಡ ಪಾಕ್ಷಿಕ ಪತ್ರಿಕೆಯ 12 ನೇಯ ವರ್ಷದ ವಾಷಿ೯ಕೋತ್ಸವದ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 30- ಸಮಾಜದಲ್ಲಿರುವ ಅಂಕು ಡೂಂಕಗಳನ್ನು ತಿದ್ದುವಂತ ಕೆಲಸ ಕರ್ತವ್ಯೆ ನಿರ್ವಹಿಸುತ್ತಾರೆ ಅವರ ಪರಿಶ್ರಮ ಬಹಳವಿದೆ ಮತ್ತು ನೈಜ ವರದಿಗಳನ್ನು ನೀಡಬೇಕು ಎಂದು ಯುವ ಮುಖಂಡ ಅಂದಾನಗೌಡ ಪೋಲೀಸ್ ಪಾಟೀಲ ಅವರು ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ವೀರರಾಣಿ ಕಿತ್ತೋರ ಚೆನ್ನಮ್ಮ ವಸತಿ ಶಾಲೆಯಲ್ಲಿ ಸ.ಶರಣಪ್ಪ ಪಾಟೀಲ ಕರಮುಢಿ ಅವರ ಸಂಪಾದಕತ್ವದಲ್ಲಿ ಹಾಯ್ ಕೊಪ್ಪಳ ಕನ್ನಡ ಪಾಕ್ಷಿಕ ಪತ್ರಿಕೆಯ 12 ನೇಯ ವರ್ಷದ ವಾಷಿ೯ಕೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕೆ ಎನ್ನುವುದು ಒಬ್ಬರಿಂದಾಗುವ ಕೆಲಸವಲ್ಲ. ಅದರಲ್ಲಿ ಕೆಲಸ ಮಾಡುವವರು, ವಿತರಕರು ಈ ಇಬ್ಬರೂ ತುಂಬಾ ಮುಖ್ಯ ಓದುಗರ ನಾಡಿಮಿಡಿತ ಸಂಪಾದಕನಿಗೆ ತಿಳಿದಿರುತ್ತದೆ. ಹಾಗಾಗಿ ಅವರೊಂದಿಗೆ ನಾವು ಸದಾ ಸಂಪರ್ಕದಲ್ಲಿದ್ದು, ಜನರಿಗೆ ಅಗತ್ಯವಾದ ವರದಿಗಳನ್ನು ಹಾಗೂ ತನಿಖಾ ವರದಿಗಳನ್ನು ನೀಡಬೇಕು. ಮುದ್ರಣ ಮಾಧ್ಯಮದ ಪರಿಸ್ಥಿತಿ ಕಠಿಣವಾಗಿರುವ ಇಂತಹ ಸಂದರ್ಭದಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿದೆ ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ವಾಸವಿರುವ ಕನ್ನಡಿಗರು ಓದುವಂತೆ ಹಾಯ್ ಕೊಪ್ಪಳ ಪಾಕ್ಷೀಕ ಪತ್ರಿಕೆ ಪರಿಶ್ರಮ ವಹಿಸಿದೆ.ಎಂದರು ಈ ಪರಿಶ್ರಮ ಹೀಗೇ ಸಾಗಲಿ ಹಾಯ್ ಬೆಂಗಳೂರು.ಲಂಕೇಶ ಪತ್ರಿಕೆಯಂತೆ ಹಾಯ್ ಕೊಪ್ಪಳ ಪಾಕ್ಷೀಕ್ ಪತ್ರಿಕೆ ರಾಜ್ಯಾದ್ಯಂತ ಬೆಳೆಯಲೆಂದು ಹೇಳಿದರು.

ಪ್ರಾಸ್ತಾವೀಕವಾಗಿ ಸಂಪಾದಕ ಸಣ್ಣ ಶರಣಪ್ಪ ಪಾಟೀಲ್ ಮಾತನಾಡಿ ನನಗೆ ಪತ್ರಿಕೆ ಬರೆಯುವ ಹವ್ಯಾಸ ಬಾಲ್ಯದಲ್ಲಿಂದಲೆ ಅಭ್ಯಾಸವಾಗಿದೆ ಗೌರಿ ಲಂಕೇಶ ಪತ್ರಿಕೆಯಲ್ಲಿ ಅನೇಕ ವರದಿ ಗಳನ್ನು ಬರೆಯುತ್ತಾ, ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಾ ಸ್ವಲ್ಪ ವಷ೯ಗಳ ಮುಂದುವರಿದು ನಂತರ ನೆರಳು ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ನಿವ೯ಹಿಸಿ ತದನಂತರ ಒಂದು ಸಲ ನನ್ನಗೆ ಯೋಚನೆ ಬಂತು ಸ್ವತ ನಾನು ಒಂದು ಪಾಕ್ಷೀಕ ಪತ್ರಿಕೆ ಆರಂಭಿಸಿರುವೆ ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಮುದ್ರಣ ಪತ್ರಿಕೆ ಕಷ್ಟದಲ್ಲಿಯೇ 12 ವರ್ಷಗಳಕಾಲ ಸಾಗಿ ಬಂದಿದೆ ಇದನ್ನು ಮುಂದುವರಿಸುಕೊಂಡು ಹೋಗುವದಾಗಿ ಹೇಳಿದರು.

ಪತ್ರಿಕೆ ವಾಷಿ೯ಕೋತ್ಸವ ಕಾರ್ಯಕ್ರಮ ಕುರಿತು ಮಾತನಾಡಿದ ರಾಜ್ಯದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ನಾಲ್ಕನೇ ಅಂಗವೇ ಪತ್ರಿಕಾ ರಂಗ ಇಂದಿನ ದಿನಮಾನಗಳಲ್ಲಿ ಪತ್ರಿಕೆಯ ಸಂಪಾದಕರು ಪತ್ರಿಕೆಯನ್ನು ನಡೆಸುವುದು ತುಂಬಾ ಕಷ್ಟದ ಕೆಲಸವಾಗಿದೆ ಅವರು ಅಷ್ಟು ಇದ್ದರು ಜನರಿಗೆ ನೈಜ ವರದಿಗಳನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ವಿರುವ ಸಮಸ್ಯೆ ಅಂಕು ಡೊಂಕು ತಿದ್ದುವಂತ ಕೆಲಸ ಮಾಡುತ್ತಾರೆ ಶಿವರಾಜಗೌಡ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಶಿವಮೂರ್ತಿ ಇಟಗಿ ,ಗಿರೀಶ ಅಧಿಕಾರಿ ವೀರಣ್ಣ ಉಳ್ಳಾಗಡ್ಡಿ ,ವಕೀಲರಾದ ಎಸ್,ಎನ್ ಶ್ಯಾಗೋಟಿ ಪಟ್ಟಣ ಪಂಚಾಯತ ಸದಸ್ಯ ವಸಂತ ಕುಮಾರ ಭಾವಿಮನಿ ಈ ಎಲ್ಲಾ ಗಣ್ಯರು ಪತ್ರಿಕೆ ವಾಷಿ೯ಕೋತ್ಸವದ ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ಎನ್ ನಧಾಪ್, ರಾಜಶೇಖರ ಶ್ಯಾಗೋಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ್ ಮತ್ತು ಕಿತ್ತೋರ ರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಂಬ್ಬದಿಗಳು ಮಲ್ಲಿಕಾರ್ಜುವ ಎಚ್ ಮುತ್ತಣ್ಣ ಆದಿ ಮತ್ತು ರೈತ ಮುಖಂಡರು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!