ff10acfd-bd19-4dec-a48a-d712b42dd723

ಹಿಂದುಳಿದವರು ಸಂಘಟನಾತ್ಮಕ ಹೋರಾಟಗಳನ್ನು ಮಾಡಬೇಕು

:ಹೆಚ್ ಸಿ ಮಾದೇವಪ್ಪ

ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ) ೦೪-  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯ ಪ.ಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ಚಲವಾದಿ ಮಹಾಸಭಾ ಸಂಘದಿಂದ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ ಮಾದೇವಪ್ಪ ಸಂವಿಧಾನ ಪೀಠಿಕೆ ಓದುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಮ್ಮನ್ನು ಒಡೆದು ಆಳಲಿಕ್ಕೆ ಶ್ರೇಣಿಕೃತ ಸಮಾಜ ತುದಿಗಾಲಲ್ಲಿ ನಿಂತಿದ್ದಾರೆ ಅಂಥವರು ಎಲ್ಲಾ ಪಕ್ಷದಲ್ಲೂ ಇದ್ದಾರೆ . ವೋಟ್ ಕೊಡೋರು ನೀವು ಅಧಿಕಾರದಲ್ಲಿ ಇನ್ಯಾರೋ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಸಮಾಜಕ್ಕೆ ನಾಯಕತ್ವ ಇಲ್ಲವೋ ಆ ಸಮಾಜ ಅನಾಥವಾಗುತ್ತೆ.

ಬಹು ಮುಖ್ಯವಾಗಿ ದಲಿತರು ಅಲ್ಪಸಂಖ್ಯಾತರು ಹಿಂದುಳಿದವರು ಸಂಘಟನಾತ್ಮಕ ಹೋರಾಟಗಳನ್ನು ಮಾಡಬೇಕು. ಶ್ರೇಣಿಕೃತ ಸಮಾಜವು ಹೊಡೆದಾಳುವ ನೀತಿಯನ್ನು ನಿಗ್ರಹಿಸುವ ಶಕ್ತಿ ನವಾಗಬೇಕು. ಆಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲಿಕ್ಕೆ ಸಾಧ್ಯವಾಗುತ್ತದೆ. ಪರಸ್ಪರ ಅಸ್ಪೃಶ್ಯರು ಅನುಮಾನಗಳನ್ನು ಬಿಡಿ. ಅಂಬೇಡ್ಕರ್ ವಾದ ಬಲ ಗೊಳಿಸದೇ ಹೋದರೆ ಅಂಬೇಡ್ಕರ್ ವಾದವನ್ನು ಮೈಗೂಡಿಸಿಕೊಳ್ಳದೆ ಹೋದರೆ ಈ ದೇಶಕ್ಕೆ ಸೋಲಾಗುತ್ತೆ. ದೇಶದಲ್ಲಿ ಆಡಳಿತ ಮಾಡುತ್ತಿರುವ ಜನರ ಮನಸ್ಥಿತಿ ಏನಿದೆ, ಕೇಂದ್ರ ಮಂತ್ರಿಯಾದವರು ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡಲಿಕ್ಕೆ ಎಂದು ಹೇಳುತ್ತಾರೆ.

ಪ್ರಧಾನಮಂತ್ರಿಯವರು ಅದರ ಬಗ್ಗೆ ಒಂದು ಮಾತನ್ನು ಆಡುವುದಿಲ್ಲ. ರಾಜಕೀಯ ಉದ್ದೇಶದಿಂದ ಓಟಿನ ಲಾಭ ದಿಂದ ಹೇಳುವಂತ ಮೀಸಲಾತಿಯ ತೀರ್ಮಾನಗಳು ಸಂವಿಧಾನ ಆಶಯಕ್ಕೆ ಅನುಗುಣವಾಗಿ ಇರುವುದಿಲ್ಲ. ಅವೆಲ್ಲವೂ ಕಣ್ಣೊರೆಸುವ ತಂತ್ರಗಳು ನಮ್ಮ ಮುಗ್ಧ ಜನರು ಅದಕ್ಕೆ ಮಾರು ಹೋಗಬಾರದು.
ಪ್ರತಿಭೆ ಎನ್ನುವುದು ಯಾರ ಸ್ವತ್ತು ಅಲ್ಲ ಅವರ ಪ್ರತಿಭೆಗೆ ತಕ್ಕಂತೆ ಗೌರವ ಸಿಗುತ್ತದೆ ಇದಕ್ಕೆ ಸಾಕ್ಷಿ ಡಾಕ್ಟರ್ ಬಿ ಆರ್ ಅಂಬೇಡ್ಕರ್. ಅರ್ಥಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರ ಪಡೆದ ಅಲೆಕ್ಸಾಂಡರ್ ಅವರು ಹೇಳಿದ್ದಾರೆ ಅಂಬೇಡ್ಕರ್ ಅವರು ನನ್ನ ಅರ್ಥಶಾಸ್ತ್ರದ ಗುರುಗಳು ಎಂದುಹೇಳಿದ್ದಾರೆ.

ಬಾಬಾ ಸಾಹೇಬರು ಇಡೀ ಭಾರತವನ್ನು ಸಮೃದ್ಧವಾಗಿ ಕಟ್ಟಲಿಕ್ಕೆ ವೈಯಕ್ತಿಕ ಜೀವನವೇ ಇರಲಿಲ್ಲ ಕುಟುಂಬದ ಬದುಕೇ ಇರಲಿಲ್ಲ ಅವರಿಗೆ ನನ್ನ ಕೊನೆಯ ಉಸಿರಿರೋ ತನಕ ನನ್ನ ಜನರ ವಿಮೋಚನೆಗಾಗಿ ದುಡಿಯುತ್ತೇನೆ ಎಂದು ಹೇಳಿ ಆರೋಗ್ಯವನ್ನು ಲೆಕ್ಕಿಸದೆ ನಮಗೋಸ್ಕರ ದೇಶಕೋಸ್ಕರ ಅವರನ್ನು ಅವರೇ ಅರ್ಪಿಸಿಕೊಂಡಿದ್ದರು. ಅಂತಹ ಮಹಾನ್ ವ್ಯಕ್ತಿಯ ಚಿಂತನೆಗಳು ಹೋರಾಟಗಳು ಅವರ ವಾರಸುದಾರರ ನಮ್ಮಿಂದಲೇ ಸಾಧ್ಯ, ಸಾಮಾಜಿಕ ನ್ಯಾಯದ ರಥ ಹಿಂದಕ್ಕೆ ಹೋಗದಂತೆ ಅಸ್ಪೃಶ್ಯರೆಲ್ಲರೂ ಒಗ್ಗಟ್ಟಾಗಿ ಸೇರಿ ಮುಂದಕ್ಕೆಳೆಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ನೆಹರೂ ಓಲೆಕಾರ ಮಾತನಾಡಿ ಅಸ್ಪೃಶ್ಯ ಸಮಾಜಗಳು ಎಲ್ಲ ಒಗ್ಗಟ್ಟಾಗಿ ಮುನ್ನಡೆಯಬೇಕು , ಸರ್ಕಾರವು ರಾಜ್ಯದಲ್ಲಿ ಒನಕೆ ಓಬವ್ವ ಸ್ಮರಣಾರ್ಥ ಮಹಿಳಾ ಸೈನಿಕ ಶಾಲೆ ಆರಂಭಿಸಬೇಕು. ರಾಜ್ಯದಲ್ಲಿ ನೂರು ಎಕರೆ ಜಾಗ ಮೀಸಲಿಟ್ಟು ಅದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ160 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಬೇಕು. ಅಂಬೇಡ್ಕ‌ರ್ ಟ್ರಸ್ಟ್ ಗೆ ಒಂದು ಸಾವಿರ ಎಕರೆ ನೀಡಬೇಕು. ಈ ಮೂಲಕ ಬಾಬಾ ಸಾಹೇಬ ವಿಚಾರಧಾರೆ ಪ್ರಸಾರದಲ್ಲಿ ಕರ್ನಾಟಕ ಮಾದರಿರಾಜ್ಯವಾಗಬೇಕು ಎಂದು ಸಚಿವರ ಮುಂದೆ ಸರ್ಕಾರಕ್ಕೆ ಒತ್ತಾಯಿಸಿದರು.ಜಿಲ್ಲೆಯ ಪ್ರತಿ ತಾಲೂಕುಗಳಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯ 20 ವಿದ್ಯಾರ್ಥಿಗಳನ್ನು ಪ್ರತಿಭ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ, ಹಂಪಿ ಯುನಿವರ್ಸಿಟಿಯ ಚಿನ್ನಸ್ವಮಿ ಸೋಸಲೆ ಮಾತನಾಡಿದರು. ವೇದಿಕೆ ಮೇಲೆ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಬೌದ್ಧ ಬಿಕ್ಕು ಬಂತೇಜಿ, ಎ ಮಾನಯ್ಯ , ಮುಂಡ್ರಿಗಿ, ನಾಗರಾಜ್, ಕಾಂಗ್ರೆಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಶಿರಾಜ್‌ ಶೇಖ್‌, ರಾಜಶೇಖರ್ ಹಿಟ್ನಾಳ್, ಎಚ್‌.ಎನ್.ಎಫ್ ಇಮಾಮ್ ನಿಯಾಜ್, ಬಣ್ಣದ ಮನೆ ಸೋಮಶೇಖ‌ರ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!