
ರೈಲು ಹಾಯ್ದು 1೦೦ಕ್ಕೂ ಹೆಚ್ಚು ಕುರಿಗಳ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ತಾಲ್ಲೂಕಿನ ಹಿಟ್ನಾಳ ಗ್ರಾಮದ ಬಳಿ ರೈಲು ಹಾಯ್ದು ಸುಮಾರು 1೦೦ಕ್ಕೂ ಹೆಚ್ಚು ಕುರಿಗಳ ಸಾವಿಗಿಡಾದ ದಾರುಣ ಘಟನೆ ಜರುಗಿದೆ.
ಗುರುವಾರ ಮದ್ಯಾಹ್ನ ಅಮರಾವತಿ ಎಕ್ಸಪ್ರೇಸ್ ರೈಲು ವಾಸ್ಕೋ ದಿಂದ ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ಘಟನೆ ಜರುಗಿದೆ ಎನ್ನಲಾಗಿದೆ.
ಹಿಟ್ನಾಳ ಬಳಿಯಲ್ಲಿ ರೈಲು ಹಳಿಯ ಪಕ್ಕದಲ್ಲಿ ಕುರಿ ಹಿಂಡು ಬಂದಿರುವ ವೇಳೆಯಲ್ಲಿ ಘಟನೆ.ಲಕ್ಷಾಂತರ ರೂಪಾಯಿ ಮೌಲ್ಯ ಕುರಿಗಳ ಸವನ್ನಪ್ಪಿವೆ. ಘಟನಾ ಸ್ಥಳಕ್ಕೆ ಮುನಿರಾಭಾದ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕುರಿಗಳನ್ನು ಕಳೆದು ಕೊಂಡ ಕುರಿಗಾಯಿ ದುಕ್ಕದಿಂದ ತತ್ತರಿಸುವಂತಾಗಿದೆ.