
ಹಿರಿಯ ನಾಗರಿಕರನ್ನು ಕಡೆಗಣಿಸಬೇಡಿ : ರಾಘವ ರಮೇಶ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 1- ನಗರದ ಗಾಂಧಿನಗರ ಎರಡನೇ ಕ್ರಾಸ್ ನಲ್ಲಿರುವ ಶ್ರೀ ಶಿವಶಕ್ತಿ ಸೇವಾಟ್ರಸ್ಟ್ ನಡೆಸುತ್ತಿರುವ ಸೂರ್ಯ ನಿವಾಸ ವೃದ್ಧಾಶ್ರಮದಲ್ಲಿ ತೆಲುಗು ನಟ ಸೂಪರ್ ಸ್ಟಾರ್ ಕೃಷ್ಣ ಇವರ 82ನೇ ಜನ್ಮ ದಿನಾಚರಣೆ ಪ್ರಯುಕ್ತ ಕೃಷ್ಣ ಅಭಿಮಾನಿಗಳ ಸಂಘದವತಿಯಿಂದ ಹಿರಿಯ ನಾಗರೀಕ ಮಹಿಳೆಯರಿಗೆ ಸೀರೆ ಸೇರಿದಂತೆ ವಿವಿಧ ವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವ ರಮೇಶ್, ಹಿರಿಯ ನಾಗರೀಕರು ನಮ್ಮ ಮನೆಯ ಮತ್ತು ದೇಶದ ಆಸ್ತಿಯಿದ್ದಂತೆ ಅವರನ್ನು ಯಾವುದೇ ಸಂದರ್ಭದಲ್ಲಿ ಕಡೆಗಣಿಸಬಾರದು ಅವರ ಅನುಭವಗಳಿಂದ ನಾವುಗಳು ಮಾರ್ಗದರ್ಶನವನ್ನು ಪಡೆದುಕೊಂಡು ಮುನ್ನಡೆದಲ್ಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಈಗಿನ ಶೋಕಿ ಯುವ ಜನಾಂಗ ಹೆಂಡತಿಯರ ಸೆರಗು ಹಿಡಿದುಕೊಂಡೋ ಅಥವಾ ಕೆಲಸದ ಒತ್ತಡದಲ್ಲೋ ಮನೆಯ ಹಿರಿಯರನ್ನು ವೃದ್ಧಾಶ್ರಮ ಮತ್ತು ಅನಥಾಶ್ರಮಗಳಿಗೆ ಬಿಟ್ಟು ಬರುತ್ತಾರೆ.
ಇದರಿಂದ ನಮ್ಮ ಮಕ್ಕಳು ಅಜ್ಜ ಅಜ್ಜಿಯರು ಹೇಳುವ ಕತೆಗಳಿಂದ ಅವರ ಅಕ್ಕರೆಯಿಂದ ವಂಚಿತರಾಗುತ್ತಿದ್ದಾರೆ, ಇತ್ತೀಚೆಗೆ ಕನ್ನಡ ನಟ ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಚಿತ್ರ ಇಂತ ಕತೆವುಳ್ಳ ಸಿನಿಮಾವಾಗಿದ್ದು ಆ ಚಿತ್ರದಲ್ಲಿ ಹೇಳಿದಂತೆ ಹಿರಿಯರನ್ನು ಗೌರವಿಸಿ ನಮ್ಮ ಜೊತೆ ಇಟ್ಟುಕೊಳ್ಳಬೇಕು ಎಂದರು ಯುವ ಜನತೆಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕೆಟರಿಂಗ್ ಸಾಯಿ, ಸುಬ್ಬರಾಯುಡು, ದೇವಕುಮಾರ್, ರವಿಶಂಕರ್ ಮಲ್ಲಿ, ರಾಮು, ಸೀನಾ, ಬಾಬು ಅಜ್ಜಯ್ಯ ಸೂರಿ ಸೇರಿದಂತೆ ಇತರರಿದ್ದರು.