
ಹಿರಿಯ ನಾಟಕ ನಿರ್ದೇಶಕ
ಬಿ.ಎ. ರಂಗಪ್ಪ ಮೇಷ್ಟ್ರು ನಿಧನ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ), ೨೫- ಹಿರಿಯ ನಾಟಕ ನಿರ್ದೇಶಕರಾದ ಶ್ರೀ ಬಿ.ಎ. ರಂಗಪ್ಪ ಮೇಷ್ಟ್ರು ಹೊಸಪೇಟೆ ಹತ್ತಿರ ಗಾಳೆಮ್ಮಗುಡಿಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಇವರಿಗೆ 75 ವರ್ಷ ವಯಸ್ಸಾಗಿದ್ದು, ಅಖಂಡ ಬಳ್ಳಾರಿ ಜಿಲ್ಲೆಯ ಹಳ್ಳಿಗಳಲ್ಲಿ ಅರ್ಧ ಶತಮಾನ ಕಾಲ ನಾಟಕ ರಂಗದಲ್ಲಿ ತೊಡಗಿಕೊಂಡು. ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿ, ನೂರಾರು ಕಲಾವಿದರನ್ನು ರೂಪಿಸಿದ ಹಿರಿಮೆ ಇವರಿಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಇಡೀ ಕಲಾ ಬಳಗ ಸಂತಾಪ ಸೂಚಿಸಿದೆ.