
ವಾತ್ಸಲ್ಯ ಯೋಜನೆಯಡಿಯಲ್ಲಿ ಮನೆ ಮಂಜೂರು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೧೬- ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಕಳಕಮ್ಮ ರಾಮಶೆಟ್ಟಿರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮನೆ ಮಂಜೂರಾಗಿದ್ದು ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ ಭೂಮಿ ಪೂಜೆ ನೇರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು ಮಾತೃಶ್ರೀ ಡಾ ಹೇಮಾವತಿ ಅಮ್ಮನವರ ಅದ್ಭುತವಾದ ಕಾರ್ಯಕ್ರಮ ಇದಾಗಿದ್ದು ಯಲಬುರ್ಗಾ ತಾಲೂಕಿಗೆ 2 ಮನೆ ಮತ್ತು 1 ಶೌಚಾಲಯ ಮಂಜೂರಾಗಿದೆ .
ಮುರುಡಿಯ ಮಹಾದೇವಮ್ಮ ನವರಿಗೂ ಮನೆ ನಿರ್ಮಿಸಿಕೊಳ್ಳಲು 1 ಲಕ್ಷರೂಗಳನ್ನು ಹಾಗೂ ಶೌಚಾಲಯ ನಿರ್ಮಿಸಿಕೊಳ್ಳಲು ಹಿರೇ ಮ್ಯಾಗೇರಿಯ ಶಾಲಿನಿಬಾಯಿ ಜೋಶಿರವರಿಗೆ 20 ಸಾವಿರ ರೂಗಳನ್ನು ಮಂಜೂರಿಮಾಡಲಾಗಿದೆ ಎಂದು ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳಾದ ಸತೀಶ್ , ಸಮನ್ವಯಾಧಿಕಾರಿ ಗೀತಾ ಊರಿನ ಗಣ್ಯರು ಯೋಜನೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಫಲಾನುಭವಿ ಕಳಕಮ್ಮ ಪ್ರತಿಕ್ರಿಯಿಸಿ ಆಶ್ರಯವಿಲ್ಲದ ನನಗೆ ಧರ್ಮಸ್ಥಳ ಸಂಸ್ಥೆಯವರು ಸೂರು ಕಲ್ಪಿಸಲು ಸುಮಾರು 1 ಲಕ್ಷ ರೂ ಉಚಿತವಾಗಿ ನೀಡಿ ಆಶ್ರಯ ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.