
ಹಿರೇವಂಕಲಕುಂಟಾ : ಕರಡಿ ಪ್ರತ್ಯಕ್ಷ ರೈತರಲ್ಲಿ ಆತಂಕ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 2- ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಿಂದ ಉಚ್ಚಲಕುಂಟಾ ಕ್ಕೆ ತೆರಳುವ ಮಾರ್ಗದಲ್ಲಿ ಮಂಗಳವಾರ ಬೆಳಿಗಿನ ಜಾವ ಕರಡಿ ಪ್ರತ್ಯಕ್ಷವಾಗಿದ್ದು, ರೈತ ಸಮೂಹದಲ್ಲಿ ಭಯದ ವಾತವರಣ ಸೃಷ್ಠಿಸಿದೆ.
ತಾಲೂಕಿನ ಮಸಾರಿ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬೀeಜೋತ್ಪಾದನೆ ಕಲ್ಲಂಗಡಿ, ಮೆಣಸು, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳಗಿನ ಜಾವದಲ್ಲಿ ಕರಡಿ ಕಾಣಿಸಿಕೊಂಡ ಹಿನ್ನೆಲೆ ರೈತರು, ಶಾಲಾ ಮಕ್ಕಳು, ವಯೋವೃದ್ಧರೂ ಹೋಬಳಿ ಕೇಂದ್ರಕ್ಕೆ ತೆರಳಲು ಆತಂಕದಿAದ ಮುನ್ನಡೆದಿದ್ದಾರೆ.
ಮಸಾರಿ ಭಾಗದಲ್ಲಿನ ಬಯಲು ಸೀಮೆಯ ಹಗಲು ರಾತ್ರಿವೀಡಿ ಅನ್ನದಾತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದು,ಬೆಳಗಿನ ನಸುಕಿನ ಹಾಗೂ ರಾತ್ರಿ ವೇಳೆ ಕರಡಿ ಕಾಣಿಸುತ್ತಿದ್ದು ಓಡಾಡಲು ತೊಂದರೆ ಎದುರಿಸುವಂತಾಗಿದೆ.
ಜಿಲ್ಲೆಯ ಈಗಾಗಲೇ ಹಲವಡೆ ಕರಡಿ ಮರಿಗಳು ಹಗಲೂ ವೇಳೆಯಲ್ಲಿ ಸದ್ದುವಿಲ್ಲದೇ ಓಡಾಡುತ್ತಿದ್ದು, ಇತ್ತೀಚೆಗೆ ಮನುಷ್ಯರ ಮೇಲೆ ನಿರಂತರ ಕರಡಿ ದಾಳಿಯಿಂದ ಮೃತಪಟ್ಟಿದ ಘಟನೆ ನಡೆಯುತ್ತಿದೆ.
ತ್ವರಿತವಾಗಿ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಸಾರಿ ಭಾಗಕ್ಕೆ ದೌಡಾಯಿಸಿ ಕರಡಿ ಸೆರೆ ಹಿಡಿದ ರೈತರಲ್ಲಿ ಮನೆ ಮಾಡಿದ ಆತಂಕ ದೂರ ಮಾಡಬೇಕಿದೆ. ಅಲ್ಲದೇ ಜಿಲ್ಲೆಯಲ್ಲಿ ಕರಡಿ ಧಾಮವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಪ್ರತ್ಯಕ್ಷದರ್ಶಿ ಸಿದ್ದಯ್ಯ ನಂದಾಪೂರಮಠ ತಿಳಿಸಿದರು.