
ಹೈದರಾಬಾದ್ ಚಲೋ ಸಮಾವೇಶದ ಕರಪತ್ರ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ) ೦೯- ಎಜೆ ಸದಾಶಿವ ವರದಿ ಜಾರಿಯಾಗಲು ಮಾದಿಗರು ಬೀದಿಗಿಳಿಯಬೇಕು ಎಂದು ಸಚಿವ ಮುನಿಯಪ್ಪ ಕರೆ ಕೊಟ್ಟ ಬೆನ್ನಲ್ಲೇ ಮಾದಿಗ ಮೀಸಲಾತಿ ಹೋರಾಟ ರಾಜ್ಯ ಸಮಿತಿ ಕರ್ನಾಟಕ ಇವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ
ಎದ್ದೇಳು ಮಾದಿಗ ಚಲೋ ಹೈದರಾಬಾದ್ ಎನ್ನುವ ಶೀರ್ಷಿಕೆಯೊಂದಿಗೆ, ಹೊಸಪೇಟೆ ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾಜದ ಮುಖಂಡರು ಸಮಾವೇಶದ ಕರಪತ್ರಗಳನ್ನು ಬಿಡುಗಡೆಮಾಡಿದರು.
ಮಾದಿಗರ ವಿಶ್ವರೂಪ ಮಹಾ ಸಮಾವೇಶ ನವೆಂಬರ್ ೧೧ರಂದು ಹೈದರಾಬಾದ್ ನ ಪೋಲಿಸ್ ಪರೇಡ್ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದು, ದೇಶದ ಮೂಲೆ ಮೂಲೆಗಳಿಂದ ಒಳ ಮೀಸಲಾತಿ ಜಾರಿ ಹೋರಾಟಕ್ಕಾಗಿ ೩೦ ಲಕ್ಷ ಜನ ಸೇರಲಿದ್ದು,ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಒಳ ಮೀಸಲಾತಿ ಹೋರಾಟದ ಮನವಿಯನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಕರಪತ್ರ ಬಿಡುಗಡೆಯ ನಂತರ ಮಾತನಾಡಿದ ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಚಿತ್ರದುರ್ಗ ನಗರದಲ್ಲಿ ಚುನಾವಣೆ ಸಮಯದಲ್ಲಿ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ , ಮಾಜಿ ಸಚಿವ ಹೆಚ್.ಆಂಜನೇಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ , ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ನಂತರ ಮೊದಲ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಡಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೆ ಮಾಡಲು ಕೇಂದ್ರಕ್ಕೆ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದರು, ಕಾಂಗ್ರೆಸ್ ನೇತೃತ್ವದ ಸರ್ಕಾರ ನಮ್ಮ ಬೇಡಿಕೆ ಈವರೆಗೆ ಈಡೇರಿಸಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ೩೦ವರ್ಷಗಳ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನ್ಯಾಯಯುತ ಹೋರಾಟದ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಲೋಕಸಭೆ, ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಎನ್ ವೀರಸ್ವಾಮಿ ಮಾತನಾಡಿ ವಿಜಯನಗರ ಜಿಲ್ಲೆಯಿಂದ ಮಾದಿಗ ಸಮುದಾಯದ ಯುವಕರು, ಮುಖಂಡರು, ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಎದ್ದೇಳು ಮಾದಿಗ ಚಲೋ ಹೈದರಾಬಾದ್ ಸಮಾವೇಶದಲ್ಲಿ ಭಾಗವಹಿಸಿ ಯಶಸ್ಸು ಮಾಡಲು ಸಹಕರಿಸಬೇಕೆಂದು ಕರೆ ನೀಡುವ ಮೂಲಕ ರಾಜ್ಯ ಸರ್ಕಾರ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತೀರಿ ಎಜೆ ಸದಾಶಿವ ವರದಿ ಜಾರಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರ ಹಿನ್ನೆಲೆಯಲ್ಲಿ ೬ನೇ ಗ್ಯಾರಂಟಿಯಾದ ಈ ಸಮುದಾಯಗಳ ಮೀಸಲಾತಿಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು ಮತ್ತು ಒಕ್ಕಲಿಗ,ಲಿಂಗಾಯಿತ ಮತ್ತು ಮಾದಿಗ ಸಮುದಾಯದ ಮೀಸಲಾತಿ ಒತ್ತಾಯ ಕೊಟ್ಟೆ ತೀರಬೇಕೆಂಬ ಸಮುದಾಯದ ಅಗ್ರಹದಿಂದಾಗಿ ರಾಜ್ಯ ಸರ್ಕಾರಕ್ಕೆ ಅನಿವಾರ್ಯತೆ ಸೃಷ್ಟಿಯಾಗಿದೆ.ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೀಸಲಾತಿಯ ಹೋರಾಟಗಳು ಹೆಚ್ಚರಿಕೆ ಘಂಟೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಸಂಕಮ್ಮ, ದಲಿತ ಸಂಘರ್ಷ ಸಮಿತಿಯ ಕಾರಿಗನೂರ ಲಕ್ಷಣ, ಕೊಟಗಿನಹಾಳ್ ಮಲ್ಲಿಕಾರ್ಜುನ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಸೆಲ್ವಂ, ಎಸ್.ಬಿ.ಮಂಜುನಾಥ, ಜಗನ್ನಾಥ, ಬಿ.ಎಡ್.ಹನುಮಂತ, ಹೆಚ್.ಬಿ.ಶ್ರೀನಿವಾಸ, ಕರಿಯಪ್ಪ, ನಿವೃತ್ತ ಶಿಕ್ಷಕ ಧನರಾಜ, ಹೆಚ್.ಪಂಪಾಪತಿ, ಮೇಟ್ರಿ ಮಾರೇಶ, ಟಿ.ಬಿ.ಡ್ಯಾಂ ಶ್ರೀನಿವಾಸ, ಗೌರಹಳ್ಳಿ ಮಂಜುನಾಥ, ಕೆ.ಡಿ.ಮರಿಯಪ್ಪ ವಕೀಲರು, ಮೂರ್ತಿ, ಕಬ್ಬಳ್ಳಿ ಪರಸಪ್ಪ ಮತ್ತು ಸಿ.ಆರ್. ಭರತ್ ಕುಮಾರ್ ಸೇರಿದಂತೆ ಇತರರು ಇದ್ದರು.