
ಹೈನುಗಾರಿಕೆ ಯಿಂದ ನಿರಂತರ ಆದಾಯ
ಭೈಫ್ ಸಂಸ್ಥೆಯ ಮುಖ್ಯಸ್ಥ ಎಂ,ಎನ್,ಕುಲಕರ್ಣಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 7 ರೈತರು ಮತ್ತು ಇತರರು ಕೃಷಿ ಕೆಲಸದ ಜೊತೆಗೆ ಹೈನುಗಾರಿಕೆಯನ್ನು ಮಾಡುವದರಿಂದ ಲಾಭದಾಯಕವಾಗುತ್ತದೆ ಪ್ರತಿಯೊಬ್ಬರು ಒಳ್ಳೆಯ ತಳಿಯ 2-3 ಹಸು ಸಾಕಣೆ ಮಾಡಿದಲ್ಲಿ ಓರ್ವ ಸರ್ಕಾರಿ ನೌಕರರನ್ನು ಮೀರಿಸುವಂತಹ ಕುಟುಂಬ ನಿರ್ವಹಣೆಗೆ ತುಂಬಾ ಅನುಕೂಲ ಮತ್ತು ನಿರಂತರ ಆದಾಯ ಪಡೆಯಬಹುದಾಗಿದೆ ಎಂದು ಭೈಫ್ ಸಂಸ್ಥೆಯ ಮುಖ್ಯೆಸ್ಥ ಎಂ,ಎನ್,ಕುಲಕರ್ಣಿ ಹೇಳಿದರು.
. ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ಕರುಗಳ ಪ್ರದರ್ಶನ ಹಾಗೂ ಲಿಂಗ ನಿರ್ಧರಿತ ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಸು ಹಾಗೂ ಎಮ್ಮೆ ಕರುಗಳ ಸಾಕಾಣಿಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಹೈನುಗಾರಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಪಶುಪಾಲನಾ ಇಲಾಖೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ .ಹೆಚ್.ಡಿ.ಎಫ್.ಸಿ ಬ್ಯಾಂಕ್ ಹಾಗೂ ಸರ್ವೋನ್ನತ ಸಂಸ್ಥೆ ಮತ್ತು ಭೈಫ್ ಸಂಸ್ಥೆಯ ವತಿಯಿಂದ ಕರುಗಳ ಪ್ರದರ್ಶನ ಉದ್ದೇಶಿಸಿ ಮಾತನಾಡಿದ ಅವರು ಜವಾರಿ ಆಕಳಿಗಿಂತ ಮಿಶ್ರ ತಳಿ ಹಸುಗಳು ಜಂತುಭಾದೆಗೆ ತುತ್ತಾಗುತ್ತಿದ್ದು, ಕಾಲಕಾಲಕ್ಕೆ ಅಗತ್ಯ ಚುಚ್ಚುಮದ್ದು, ಲಸಿಕೆ ಕೊಡಿಸಿ ಜಾನವೋರುಗಳ ಆರೈಕೆ ಮಾಡಬೇಕು. ಕರುಗಳ ಪಾಲನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಪ್ರದರ್ಶನ ಆಯೋಜಿಸಲಾಗಿದ್ದು,ಸಾವ೯ಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭೈಪ್ ಸಂಸ್ಥೆಯ ಯೋಜನಾಧಿಕಾರಿ ಗಂಗಾ ಅಂದೇಲಿ.ಮಾತನಾಡಿ ಕೃಷಿಯೊಂದಿಗೆ ಹೈನುಗಾರಿಕೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ಸರಕಾರವು ಅಗತ್ಯ ಅನುದಾನ ನೀಡುತ್ತದೆ ಮತ್ತು ಸರ್ವೋದಯ ಸಂಸ್ಥೆಯು ತಮ್ಮ ಗ್ರಾಮದಲ್ಲಿ ರೈತ ಉತ್ಪಾದನಾ ಬೇಳೆಗಳಾದ ,ರಾಗಿ, ಜೋಳ ಸಜ್ಜಿ, ತೋಗರಿ.
.ಶೆಂಗಾ,ಸೂರ್ಯಕಾಂತಿ.ಇತರೆ ಬೆಳೆಗಳನ್ನು ಬೆಳೆದಂತ ರೈತರು ಸರ್ವೋದಯ ಸಂಸ್ಥೆಗೆ ಮಾರಾಟ ಮಾಡಿಕೊಳ್ಳಬೇಕು ನಿಮ್ಮಗೂ ಉತ್ತಮವಾದ ಬೆಲೆ ಸಿಗುತ್ತದೆ ಮತ್ತು ನಾವೂ ತಿನ್ನುವ ಆಹಾರದಲ್ಲಿ ಶುದ್ಧವಾದ ಅಡುಗೆ ಎಣ್ಣೆ ಬಳಕೆ ಮಾಡಿಕೊಳ್ಳುತ್ತಿಲ್ಲ ಇದರಿಂದ ಅನೇಕ ಕಾಯಿಲೆಗಳಿಗೆ
ತುತ್ತಾಗುತಿದ್ದೆವೆ ನೀವೆ ಶುದ್ಧವಾದ ಅಡುಗೆ ಏಣ್ಣೆ ತಯಾರಿಸಿಕೊಳ್ಳಲು ಮುಂದಾಗ ಬೇಕೆಂದರು.
ಪಶು ಇಲಾಖೆಯ ಅಧಿಕಾರಿ ಡಾ,ಪ್ರಕಾಶ ಚೂರಿ ಮಾತನಾಡಿ ನಮ್ಮ ತಾಲೂಕು ಮಳೆ ಯಾಶ್ರೀತ ಪ್ರದೇಶ ಮಳೆಯನ್ನೆ ನಂಬಿ ಜೀವನ ನಡೆಸ ಬೇಕಾಗಿದೆ ಪಂಪಸೇಟ್ ಇದ್ದವರು ಕೃಷಿಯ ಜೋತೆಗೆ ಅಲ್ಪ ಸ್ವಲ್ಪ ಮೇವು ಹಚ್ಚಿಕೊಂಡು ಹೈನುಗಾರಿಕೆ ಮಾಡಿ ಆರ್ಥೀಕವಾಗಿ ರೈತರು ಸಭಲರಾಗಬೇಕು ಇಲಾಖೆಯ ಆವಿಷ್ಕಾರಗಳಾದ ಲಿಂಗ ನಿರ್ಧರಿತ ವೀರ್ಯನಳಿಕೆಗಳನ್ನು ಹೆಚ್ಚಾಗಿ ಬಳಸುವ ಮೂಲಕ ಶೇ. 95% ರಷ್ಟು ಹೆಣ್ಣು ಕರುಗಳನ್ನು ಪಡೆಯಲು ತಿಳಿಸಿದರಲ್ಲದೆ, ಅಧಿಕ ಮೇವು ಇಳುವರಿ ನೀಡುವ ಸುಧಾರಿತ ಮೇವು ಬೆಳೆಯಾದ ಸುಬಾಬುಲ್ ನಾರಿ ನಿರ್ಬೀಜ ತಳಿಯನ್ನು ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ, ಹೆಚ್ಚಿನ ಲಾಭಂಶ ಪಡೆಯುವಂತೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿಮಾತನಾಡಿದ ಪ್ರಭುಗೌಡ ಪೋಲೀಸ್ ಪಾಟೀಲ್ ಹಾಲು ಉತ್ಪಾದಕರು ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಹಾಕ ಬೇಕು ಅನೇಕ ಖಾಸಗಿ ಸಂಸ್ಥೆಗಳು ರೈತರಿಗೆ ಆಮೀಷ್ಯ ತೋರಿಸಿ ಲಾಭ ಗಿಟ್ಟಿಸಿಕೊಳ್ಳುತ್ತಾರೆ ಅದರಿಂದ ಏಕೈಕ ವ್ಯಕ್ತಿ ಲಾಭ ಪಡೆದು ಕೊಳ್ಳುತ್ತಾರೆ, ನೀವೂ ಸಹಕಾರಿ ಸಂಘದ ಹಾಲಿನ ಕೇಂದ್ರಕ್ಕೆ ಹಾಲು ಹಾಕುವದರಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಹಾಗಾಗಿ ಸಹಕಾರಿ ಹಾಲು ಉತ್ಪಾದಕರ ಸಂಘ ಉಳಿಯ ಬೇಕಾದರೆ ನೀವೂಗಳು ಸಹಕಾರಿ ಸಂಘಕ್ಕೆ ಹಾಲು ಮಾರಾಟ ಮಾಡಿಕೊಳ್ಳಬೇಕೆಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಆರೋಗ್ಯಕರವಾಗಿದ್ದ ಅತ್ಯುತ್ತಮ ಕರುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲಾ ಕರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಜರ್ಸಿ, ಮಿಶ್ರತಳಿ, ಆಕಳುಗಳ ಹಾಗೂ ಎಮ್ಮೆಗಳು ಸೇರಿದಂತೆ ಅಧಿಕ ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವುಕಾರ್ಯಕ್ರಮದಲ್ಲಿ ಭೈಫ್ ಸಂಸ್ಥೈಯ ಉಪ ಯೋಜನಾಧಿಕಾರಿ ಸುನೀತಾ ಕುಸಗಲ್, ಸೂಪ್ರೀಯಾ ಜಾದವ್.ಸರ್ವೋದಯ ಸಂಸ್ಥೆಯ ನಿರ್ದೇಶಕ ಶರಣಪ್ಪ ಮೇಟಿ ಗ್ರಾಮ ಪಂಚಾಯತ ಸದಸ್ಯ ಬಸವರಾಜ ಕೋಳೂರು.
ಹನಮಂತಪ್ಪ ಗೊಂದಿ ,ಎಸ್,ಡಿ,ಎಂ,ಸಿ, ಅಧ್ಯಕ್ಷ ಹನಮಂತಪ್ಪ ಕನಕಗಿರಿ ಸಂಸ್ಥೆಯ ವ್ಯವಸ್ಥಾಪಕರುಗಳಾದ ಈರಣ್ಣ ಮುರಡಿ,ವಿರೇಶ,ಅಮರೇಶ ತಳ್ಳಿಹಾಳ.ಸಂಗನಗೌಡ ಪಾಟೀಲ್. ಶರಣಪ್ಪಗೌಡ ಪಾಟೀಲ್,ಕೇಶಪ್ಪ ಮನ್ನಾಪೂರ,ಯಮನೂರಪ್ಪ ಹುಗ್ಗೇಪ್ಪನವರ, ಪಶು ಇಲಾಖೆಯ ಸಂಜಯ್ ಚಿತ್ರಗಾರ ಡಾ,ಸಿದ್ದಪ್ಪ ಚವ್ಹಾಣ,ಹುಸೇನ್ ಬಾಷಾ,ಎಂ,ಡಿ,ಹಳ್ಳಿ ಡಾ,ದೇವರಾಜ ಹೊಸೂರು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.