
ಪದವಿ ವಿದ್ಯಾರ್ಥಿಗಳ ದ್ವಿತೀಯ ಹಾಗೂ ತೃತೀಯ
ಸೆಮಿಸ್ಟರ್ ನ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, ೦೮- ಪದವಿ ವಿದ್ಯಾರ್ಥಿಗಳ ದ್ವಿತೀಯ ಮತ್ತು ತೃತೀಯ ಸೆಮಿಸ್ಟರ್ ನ ಪ್ರವೇಶ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಈ ವೇಳೆ ಭಾರತ ವಿದ್ಯಾರ್ಥಿ ಫೆಡರೇಷನ್ ( SFI ) ಹೊಸಪೇಟೆ ಸಂಚಲನ ಸಮಿತಿಯ ಮುಖಂಡ ಲೋಕೇಶ್ ಮಾತನಾಡಿ,
ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ,ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಕಾರಣ ಈ ಭಾಗದ ಜನರು ಆರ್ಥಿಕವಾಗಿ ತುಂಬಾ ಬಡವರಿದ್ದಾರೆ. ಬಡತನದಿಂದ ಅನೇಕ ವಿದ್ಯಾರ್ಥಿಗಳು ಪದವಿ ಕೋರ್ಸ್ ನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರು ಅಂತಹ ನಗರಕ್ಕೆ ದುಡಿಯಲು ಹೋದ ಉದಾಹರಣೆ ಸಾಕಷ್ಟು ಇವೆ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಬರಗಾಲದ ಸಮಯದಲ್ಲಿ ಮನೆಯಲ್ಲಿ ಹಣ ಕೊಡದಿದ್ದರೂ ಓದುಬೇಕೆಂಬ ಹಂಬಲದಿಂದಾಗಿ ವಿದ್ಯಾರ್ಥಿಗಳಾದ ನಾವುಗಳು
ಪದವಿ ದಾಖಲಾತಿ ಮಾಡಿಸಿದ್ದೇವೆ.
ಆದರೆ ಕಳೆದ ವರ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 940 ರೂಪಾಯಿ ಮತ್ತು 2000 ಸಾವಿರ ರೂಪಾಯಿ ಮಾತ್ರ ಇದ್ದ ದಾಖಲಾತಿ ಶುಲ್ಕ ಒಂದೇ ವರ್ಷದಲ್ಲಿ ದಿಡೀರನೆ 3720 ಹಾಗೂ 4660 ರೂಪಾಯಿ ಆಗಲು ಹೇಗೆ ಸಾಧ್ಯ? ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಅದೇ ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ನ OBC ವಿದ್ಯಾರ್ಥಿಗಳಿಗೆ 2660 ರೂಪಾಯಿ ಹೆಚ್ಚಳ ಮಾಡಿದ್ದಿರಿ SC/ST ವಿದ್ಯಾರ್ಥಿಗಳಿಗೆ 940 ರೂಪಾಯಿ ಇದ್ದಿದ್ದು ಈ ವರ್ಷ 3720 ರೂಪಾಯಿ ಮಾಡಿದ್ದಿರಿ ಅಂದರೆ 2720 ರೂಪಾಯಿ ಹಣ ಹೆಚ್ಚಳ ಮಾಡಿರವುದನ್ನು ನಾವು ವಿರೋಧ ಮಾಡುತ್ತೇವೆ ಮತ್ತು ಕಳೆದ ವರ್ಷ ಎಷ್ಟು ಶುಲ್ಕ ಇತ್ತು ಅಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪರವಾಗಿ ನಮ್ಮ ಸಂಘಟನೆಯಿಂದ ಒತ್ತಾಯಿಸಲಾಯಿತು.
ಈ ಕೂಡಲೇ ತಾವುಗಳು ಶುಲ್ಕ ಕಡಿಮೆ ಮಾಡಬೇಕು. ಇಲ್ಲದಿದ್ದರೆ ನೂರಾರು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಈ ಮೂಲಕ ಮನವಿ ಪತ್ರವನ್ನು ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ. ಶಿವಪ್ಪ, ಅವರ ಮುಖಾಂತರ ವಿಜಯನಗರ ಕುಲಸಚಿವರು ( ಆಡಳಿತ ವಿಭಾಗ ) ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐನ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ, ಪವನ್ ಕುಮಾರ್,I ಜಿಲ್ಲಾ ಮುಖಂಡರು, ಲಕ್ಷ್ಮಿ. ತಾಲೂಕು ಮುಖಂಡರು ಮತ್ತು ವಿದ್ಯಾರ್ಥಿಗಳಾದ, ಮಂಜು, ನಿಂಗೇಶ್, ರಾಜೇಶ್, ಪ್ರವೀಣ್, ಆಕಾಶ್, ಕೃಷ್ಣ, ಸೇರಿದಂತೆ ಇತರರು ಇದ್ದರು.