
ಹೊಸ ಕೆರೆಗಳ ನಿರ್ಮಾಣಕ್ಕಾಗಿ ಭೂಮಿ ನೀಡಿ : ಬಸವರಾಜ್ ರಾಯರೆಡ್ಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 30- ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯನ್ನೇ ನಂಬಿ ರೈತರು ಜೀವನ ನಡೆಸುತ್ತಿದ್ದಾರೆ ಹೀಗಾಗಿ ಕ್ಷೇತ್ರದ 38 ಹೂಸ ಕೆರಗಳ ನಿರ್ಮಾಣಕ್ಕಾಗಿ ಭೂಮಿ ಅವಶ್ಯಕತೆಯಿದೆ. ಯಲಬುರ್ಗಾ ಮತ್ತು ಕುಕನೂರು ರೈತರು ಹೂಸ ಕೆರಗಳ ನಿರ್ಮಾಣಕ್ಕಾಗಿ ಭೂಮಿ ನೀಡಿ. ಉತ್ತಮ ಅಭಿವೃದ್ಧಿಗೆ ಸಹಕರಿಸಿ ರೈತರ ಹಿತ ಕಾಪಾಡಲು ಈ ಕ್ಷೇತ್ರದಲ್ಲಿ ಹೆಚ್ಚು ಕೆರೆಗಳನ್ನು ನಿರ್ಮಿಸಿದರೆ ಅಂತರ್ಜಲ ಹೆಚ್ಚಳಗೊಂಡು ರೈತರ ಬದುಕು ಬಂಗಾರವಾಗುತ್ತದೆ ಹೀಗಾಗಿ ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಕಂದಾಯ ಭವನದಲ್ಲಿ ನಡೆದ. ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ಕುಡಿಯುವ ನೀರು ಅಂತರ್ಜಲ ಅಭಿವೃದ್ಧಿಗಾಗಿ 38 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿರುವುದು ಯೋಜನೆಯ ಕುರಿತು ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರ ಅವರು ಈ ಅವಳಿ ತಾಲೂಕಿನಲ್ಲಿ ಹೊಸದಾಗಿ 43 ಕೆರೆಗಳ ನಿರ್ಮಾಣಕ್ಕಾಗಿ ತಾಲೂಕಿನ ರೈತರು ಭೂಮಿ ನೀಡಿದರೆ ಪ್ರತಿ ಎಕರೆಗೆ 10 ರಿಂದ 12 ಲಕ್ಷ ನೀಡಲಾಗುವುದು ರೈತರು ಭೂಮಿ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ ಯಾವುದೇ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ.ಈ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಾವಿರ ಕೋಟಿ ಬಜೆಟ್ ನಲ್ಲಿ ಘೋಷಿಸಿದ್ದು ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ರೈತರು ಜಮೀನು ನೀಡಿದರೆ ಕ್ಷೇತ್ರದಲ್ಲಿ ಪಕ್ಷಾ ತೀತವಾಗಿ ಎಲ್ಲಾ ರಾಜಕೀಯ ಮುಖಂಡರ ಸಹಕಾರ ಅಗತ್ಯ ರೈತರು ಜಮೀನು ತ್ವರಿತವಾಗಿ ನೀಡಿದರೆ ಸಪ್ಟೆಂಬರ್ ತಿಂಗಳಲ್ಲಿ ಟೆಂಡರ್ ಮಾಡಲಾಗುತ್ತದೆ ಕೆರಗಳು ತುಂಬಿದರೆ ರೈತರ ಪಂಪ್ ಸಟ್ಟ್ ಗಳಿಗೆ ಅಂತರ್ಜಲ ನೀರಿನ ಮಟ್ಟ ಹೆಚ್ಚಾಗುತ್ತದೆ ರೈತರ
ಕೃಷಿ ಚಟುವಟಿಕೆ ಜಾನುವಾರುಗಳಗೆ ಕುಡಿಯುವ ನೀರಿಗೆ ಹೆಚ್ಚು ಅನುಕೂಲವಾಗುತ್ತದೆ ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ ಒಟ್ಟು 350 ಎಕರೆ ಭೂಮಿ ಲಭ್ಯವಿದೆ ಇನ್ನೂ 1 ಸಾವಿರ ಎಕರೆ ಭೂಮಿ ಖರೀದಿಸಬೇಕು. ಈಗ ಈ ರೈತರ ಕೆರೆ ತುಂಬಿಸುವ ಯೋಜನೆಗಾಗಿ ಭೂಮಿ ನೀಡಬೇಕು ಪ್ರತಿ ಎಕರೆ ಸರಕಾರಿ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಪರಿಹಾರ ನೀಡುತ್ತಿವೆ 2-3. ವರ್ಷದಲ್ಲಿ ಈಯೋಜನೆ ಪೂರ್ಣಗೊಳ್ಳಲಿದೆ ಎಂದರು ತಾಲೂಕಿನ 26 ಕೆರಗಳ ನೀರು ತುಂಬಿಸುವ ಕಾರ್ಯ ಪೂರ್ಣಗೊಳ್ಳಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಯಿಸಿ ಅದಕ್ಕೆ ಶೀಘ್ರದಲ್ಲಿ ಚಾಲನೆ ಕೊಡಿಸಲಾಗುವುದು. ಮತ್ತು ಕ್ಷೇತ್ರದಲ್ಲಿ ಸಾಕಷ್ಟು ವಿವಿಧ ಅಭಿವೃದ್ಧಿ ಪರ ಕೆಲಸಗಳು ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು .
ನಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆಪಿ ಮೋಹನ್ ರಾಜ್ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ಸರ್ಕಾರ ಕಾಮಗಾರಿಗೆ 970 ಕೋಟಿ ಮೀಸಲಿಟ್ಟಿದೆ ರೈತರ ಜಮೀನು ನೀಡಬೇಕು ಎರಡು ಮೂರು ವರ್ಷದಲ್ಲಿ ಈ ಯೋಜನೆ ಸಂಪೂರ್ಣಗೊಳ್ಳಲಿದೆ ಈಗಾಗಲೇ ಸರ್ಕಾರ 300ಕ್ಕೂ ಅಧಿಕ ಎಕ್ಕರೆ ಭೂಮಿ ಲಭ್ಯವಿದ್ದು ಸಾವಿರಕ್ಕೂ ಅಧಿಕ ಎಕರೆ ಭೂಮಿ ಅವಶ್ಯಕತೇ ಇದೆ ಉಚಿತವಾಗಿ ಭೂಮಿ ನೀಡಿದರೆ ಅಂತವರ ಹೆಸರನ್ನು ಕೆರೆಗೆ ಇಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ. ರಾಹುಲ್ ರತ್ನಂ ಪಾಂಡೆ. ಜಿಲ್ಲಾ ಉಪದಂಡಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ. ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ತಾ. ಪಂ. ಇ ಓ ಸಂತೋಷ ಪಾಟೀಲ ಬಿರದಾರ. ಮುಖಂಡರಾದ ಬಸವರಾಜ ಉಳ್ಳಾಗಡ್ಡಿ ಯಂಕಣ್ಣ ಯರಾಶಿ ಹನುಮಂತ ಗೌಡ ಪಾಟೀಲ್ ವೀಕನಗೌಡ ಪೋಲೀಸ್ ಪಾಟೀಲ. ರೇವಣಪ್ಪ ಸಂಗಟಿ ರಾಘವೇಂದ್ರ ಜೋಷಿ.ನವಲಿ ಹಿರೇಮಠ. ಮಹೇಶ ಹಳ್ಳಿ ವಕ್ತಾರ ಡಾಕ್ಟರ್ ಶಿವನಗೌಡ ದಾನರಡ್ಡಿ. ಶರಣಪ್ಪ ಗಾಂಜಿ. ಸುಧೀರ ಕೂಲ೯ಹಳ್ಳಿ. ಮಲ್ಲು ಜಕ್ಕಲಿ.ಮತ್ತು ಇತರರು ಭಾಗವಹಿಸಿದರು