9a15e057-5932-413e-958e-252e0575ef6b

೨೬ ರಂದು ಸಂಜೆ 5 ಕ್ಕೆ 

 ಮಹಾದೇವತಾತ ನವರ  ರಥೋತ್ಸವ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, ೨೫-  ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮಹಾಮಹಿಮ ಮೆಟ್ರಿ ಮಹದೇವತಾತನವರು ಜನಿಸಿದ್ದು ಬಳ್ಳಾರಿ ತಾಲೂಕು ಹಂದ್ಯಾಳ ಗ್ರಾಮದಲ್ಲಿ ಇವರು ಮಹಾಮಹಿಮ ಪವಾಡಪುರುಷ ಎಮ್ಮಿಗನೂರು ಜಡೆಸಿದ್ದಶಿವಯೋಗಿಗಳ ವಂಶಜರು ಶ್ರೀ ಮಹದೇವ ತಾತನವರು ಬಳ್ಳಾರಿ ನಗರದ ಪಾರ್ವತಿ ನಗರದಲ್ಲಿ ಅನಾದಿಲಿಂಗೇಶ್ವರನ ಸ್ಥಾಪನೆ ಮಾಡಿದರು.

ಮೆಟ್ರಿ ಗ್ರಾಮದಲ್ಲಿ ಪ್ರಣವ ಜ್ಯೋತಿಯನ್ನು ಸ್ಥಾಪಿಸಿದರು. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಧರ್ಮದ ಜಾಗೃತಿಯನ್ನು ಬೆಳೆಸುತ್ತಾ ಪವಾಡಗಳನ್ನು ಮಾಡುತ್ತಾಬಂದ ರಾಜಯೋಗಿ ಶ್ರೀ ಮಹಾದೇವತಾತನವರು 22-121983 ರಲ್ಲಿ ಮೆಟ್ರಿ ಗ್ರಾಮದಲ್ಲಿ ಅಂಗೈಕ್ಯರಾದರು. ತದನಂತರ ಹಂದ್ಯಾಳು ಗ್ರಾಮದ ಭಕ್ತ ಸಮೂಹವು ತಾತನವರ ಮಠವನ್ನು ಕಟ್ಟಿಸಿ 1996ರಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು.

ಶ್ರೀ ಮಠದಲ್ಲಿ ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಪುಣ್ಯಸ್ಮರಣೆಯನ್ನು ಆಚರಿಸುತ್ತಾ ಪುರಾಣ ಪುಣ್ಯಕಥೆಗಳನ್ನು ಹೇಳಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ 28ನೇ ವರ್ಷದ ರಥೋತ್ಸವ 26-12-2023 ಮಂಗಳವಾರ ಜರುಗುವದು ನಿಮಿತ್ತ ಶ್ರೀ ಚೇಳ್ಳಗುರ್ಕಿ ಎರಿತಾತ ನವರ ಮಹಾಪುರಾಣವನ್ನು ಈ ತಿಂಗಳ 13-12-2023 ರಿಂದ ಪುರಾಣ ಪ್ರವಚನವನ್ನು ಪುಟ್ಟರಾಜ ಗವಾಯಿಗಳಾದ ಶಿಷ್ಯರಾದ ಶಿವಾನಂದ ಶಾಸ್ತ್ರಿಗಳು ಹುಬ್ಬಳ್ಳಿ ಇವರು ನಡೆಸಿಕೊಟ್ಟರೆ.

ಪುರಾಣ ಪಠಣಕಾರರಾಗಿ ಮಹದೇವಪ್ಪ ಅಣ್ಣಗೇರಿ, ತಬಲಾ ವಾದನವನ್ನು ಡಿ. ವೆಂಕಟೇಶ್ ಕೂಡ್ಲಿಗಿ ಸಾಥ್ ನೀಡಿದರು 26-12-23 ಮಂಗಳವಾರ ಸಂಜೆ 5 ಗಂಟೆಗೆ ಸಕಲ ವಾದ್ಯಗಳೊಂದಿಗೆ ರಥೋತ್ಸವ ಜರುಗುವುದು. ಕಾರಣ ಗ್ರಾಮದ ಹಾಗೂ ಸುತ್ತುಮುತ್ತಲಿನ ಗ್ರಾಮದ ಸಮಸ್ತ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ತಾತನವರ ಕೃಪೆಗೆ ಪಾತ್ರರಾಗಬೇಕೆಂದು ಮಹಾದೇವತಾತ ನವರ ಸದ್ಭಕ್ತ ಮಂಡಳಿ ಹಾಗು ಮಹಾದೇವತಾತ ಕಲಾ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಹಂದ್ಯಾಳು ಅವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!