
1.78 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದ ಜಿಲ್ಲಾ ಪೊಲೀಸರು
ಕರುನಾಡ ಬೆಳಗು ಸುದ್ದಿ
ವಿಜಯನಗರ, 30- ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಶನಿವಾರ ಸಂಜೆ ಚಿನ್ನ ಬೆಳ್ಳಿ ಆಭರಣಗಳು ಹಣ ಮತ್ತು ವಸ್ತುಗಳನ್ನು ಕಳೆದುಕೊಂಡ ವಾರಸುದಾರರಿಗೆ ವರಿಷ್ಟಾಧಿಕಾರಿ ಶ್ರೀಹರಿಬಾಬು ಹಿಂದಿರುಗಿಸಿದರು.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಗಿರುವ ಶ್ರೀಹರಿಬಾಬು.ಬಿ.ಎಲ್ ರವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 01.06.2023 ರಿಂದ 01.06.2024 254 ಸ್ವತ್ತಿನ ಪ್ರಕರಣಗಳು ವರದಿಯಾಗಿರುತ್ತವೆ. ಇದರಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣಗಳು ವರದಿಯಾಗಿರುವುದಿಲ್ಲ.04 ದರೋಡೆ ಪ್ರಕರಣಗಳು, 03 ಸರಕಳ್ಳತನ. 07 ಹಗಲು ಕನ್ನಾ ಕಳುವು, 58 ರಾತ್ರಿ ಕನ್ನಾ ಕಳುವು. 182-ಸಾಮಾನ್ಯ ಕಳ್ಳತನ ಪ್ರಕರಣಗಳು ವರದಿಯಾಗಿರುತ್ತವೆ.ಇದರಲ್ಲಿ 87 ಪ್ರಕರಣ ಪತ್ತೆಯಾಗಿರುತ್ತವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲಿದ್ದು,162 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ.
ಸ್ವತ್ತಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ. 5.54.89,001/- ಮೌಲ್ಯದ ಮಾಲು ಕಳುವಾಗಿರುತ್ತದೆ. ಅದರ ಪೈಕಿ ಒಟ್ಟು ರೂ. 2.15.53.637/-ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ವಶಪಡಿಸಿಕೊಂಡ ಮಾಲಿನ ವಿವರ 96 ದ್ವಿಚಕ್ರ ವಾಹನಗಳು ಅಂದಾಜು ಮೌಲ್ಯ, 85.83,557/- 118 ತೊಲೆ ಬಂಗಾರದ ಆಭರಣಗಳು ಅಂದಾಜು ಮೌಲ್ಯ 42.31.200/- 30 ತೊಲೆ ಬೆಳ್ಳಿ ಆಭರಣಗಳು ಅಂದಾಜು ಮೌಲ್ಯ 95,300/- 25 ಮೊಬೈಲ್ ಪೋನ್ ಗಳು ಅಂದಾಜು ಮೌಲ್ಯ 2,05,000/- ನಗದು ಹಣ.11.71,580/-. 3,50,000/- ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳು.
37.45,000/- ಬೆಲೆ ಬಾಳುವ ಗಂಧದ ಕಟ್ಟಿಗೆ, ಮತ್ತು ಟಯೋಟ್ ಕಾರ್, 12.63,000/- Sony G Master Company ಅದಕ್ಕೆ ಸಂಬಂದಿಸಿದ ವಸ್ತುಗಳು ಹಾಗೂ 1 ಕಾರು 1 ಕೆ.ಎಸ್. ಆರ್. ಟಿ.ಸಿ ಬಸ್ 3 ಆಕಳು 5 ಕುರಿ, 3 ಪಂಪ್ ಸೆಟ್ಇತರೇ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡಿರುವ ರೂ 2.15.53.637/- ಹಣದ ಪೈಕಿ 1.78.08.703/ವಾರಸುದಾರರಿಗೆ ಹಿಂತಿರುಗಿಸಿದೆ. ಉಳಿದ 37.44.934/- ಮೌಲ್ಯದ ಮಾಲನ್ನು ಮಾನ್ಯ ನ್ಯಾಯಾಲಯದ ಆದೇಶ ಪಡೆದುಕೊಂಡು ಹಿಂದಿರುಗಿಸಲಾಗುತ್ತದೆ ಎಂದು ಹೇಳಿದರು.
ವಾರಸುದಾರರ ಮುಖದಲ್ಲಿ ಮಂದಹಾಸ ಮುಡಿತ್ತು ಹಿಂಪಡೆದವರಿಂದ ಪೊಲೀಸರಿಗೆ ಧನ್ಯವಾದ ತಿಳಿಸಿದರು.