WhatsApp Image 2024-04-28 at 8.02.41 PM

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕ ವಿಕಸಿತವಾಗುತ್ತದೆ : ನರೇಂದ್ರ ಮೋದಿ

ಕರುನಾಡ ಬೆಳಗು ಸುದ್ದಿ

ವಿಜಯನಗರ, 28- ಸಾರ್ವತ್ರಿಕ ಲೋಕಸಭಾ ಚುನಾವಣೆಯ 2024ರ ನಿಮಿತ್ತ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕ ವಿಕಸಿತವಾಗುತ್ತದೆ. 2014ರ ಮುಂಚೆ ದಿಲ್ಲಿ ರಾಜಕೀಯ ದಲಾಲರಿಂದ ನಡೆಯುತ್ತಿತ್ತು. ಮೋದಿ ಸರ್ಕಾರ ಬಂದ ಮೇಲೆ ಎಲ್ಲಾ ದಲಾಲರು ದಿಲ್ಲಿ ಬಿಟ್ಟು ಬೇರೆ ರಾಜ್ಯಗಳಿಗೆ ಹೊಕ್ಕಿದ್ದಾರೆ ಎಂದು ಮೋದಿ ಹೇಳಿದರು.

ನಗರ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಕಲ್ಯಾಣ ಕರ್ನಾಟಕವನ್ನು ವಿಕಸಿತಗೊಳಿಸುವ ಜವಾಬ್ದಾರಿ ಹೊತ್ತಿದೆ. ಕೇಂದ್ರ ಸರ್ಕಾರ ರೈಲ್ವೆ ಯೋಜನೆಗಳನ್ನು ರೂಪಿಸಿಕೊಂಡು ಗದಗ್, ರಾಯಚೂರು, ಗದ್ವಾಲ್ , ಗುಲ್ಬರ್ಗ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದರಿಂದ ಕಲ್ಯಾಣ ಕರ್ನಾಟಕದ ಬಲಶಾಲಿಯಾಗಲಿದೆ ಎಂದು ತಿಳಿಸಿದರು.

ಅವರು ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶವನ್ನು ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀರಾಮುಲು ಪರ ಮತಯಾಚಿಸಿ ಮಾತನಾಡಿದರು.

ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದರಿಂದ ಬಳ್ಳಾರಿಯ ಜೀನ್ಸ್ ಹುದ್ದೆಗೆ ಮೇಡ್ ಇನ್ ಇಂಡಿಯಾದ ಗುರುತು ಸಿಗಲಿದೆ. ಇಲ್ಲಿಯವರೆಗೂ ಭಾರತ ಮಕ್ಕಳ ಆಟಕ್ಕೆ ಸಾಮಗ್ರಿಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು ಈಗ ಅವೆಲ್ಲವುಗಳನ್ನು ನಿಯಂತ್ರಿಸಿ ಭಾರತದ ಆಟಿಕೆಗಳ ಸಾಮಗ್ರಿಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಗುರುತಿಸಿ ಆಮದನ್ನು ಕಡಿಮೆ. ಕಾಂಗ್ರೆಸ್ ಗೆ ಇಂತಹುಗಳ ಬಗ್ಗೆ ಕಳಕಳಿರುವುದಿಲ್ಲ.

ರೈತರು ನೀರಿಗಾಗಿ ಪರದಾಡುತ್ತಿರುವುದನ್ನು ಕಂಡು ಅವರ ಪರಿಶ್ರಮವನ್ನು ಗುರುತಿಸಿ ರೈತರ ಬೇಸಾಯ ಕ್ರಮಕ್ಕೆ ನಿರೋಧಗಿಸವ ಪ್ರಯತ್ನ ಮಾಡುತ್ತಿದೆ.
ದೇಶಕ್ಕೆ ಕಾಂಗ್ರೆಸ್ ಪಕ್ಷ ಆಘಾತಕಾರಿ ಎಂದ ಮೋದಿ ಪಿ ಎಫ್ ಐ ಸಂಘಟನೆಯನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದ್ದು ಇದು ಸಮಾಜಕ್ಕೆ ಅಘಾತಕಾರಿ ಎಂದು ಭಾವಿಸಿ ಮೋದಿ ಸರ್ಕಾರ ಇದರ ಮೇಲೆ ಪ್ರತಿಬಂಧ ಹಾಕಿದೆ ಆದರೆ ಕಾಂಗ್ರೆಸ್ ಗೆ ” ಪಿ ಎಫ್.ಐ ಲೈಫ್ ಲೈನ್ ಸಂಘಟನೆಯಾಗಿದೆ.

ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಗ್ಯಾಸ್ ಸ್ಪೋಟದ ಹಿಂದೆ ಆತಂಕವಾದಿಗಳ ಕೈವಾಡ ಇರುವುದನ್ನು ಗಮನಿಸಿದ ನಂತರ ಕಾಂಗ್ರೆಸ್ ಮೌನಕ್ಕೆ ಜಾರಿದೆ. ಇತ್ತೀಚಿನ ವಿದ್ಯಾರ್ಥಿನಿ ನೇಹಳ ಹತ್ಯೆ ಬಗ್ಗೆ ವಿವಿಧ ವಿವರಗಳನ್ನು ನೀಡಿದ ರಾಜ್ಯ ಸರ್ಕಾರ ಹತ್ಯೆ ಮಾಡಿದವರನ್ನು ರಕ್ಷಿಸಲು ಹೊರಟಿದೆ ಇಂತಹ ಸರ್ಕಾರದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ 2014ರ ನಂತರ ದೇಶದಲ್ಲಿ ಬಾಂಬ್ ಸ್ಫೋಟಗಳು ಕಡಿಮೆಯಾದವು. ಒಂದು ಕಾಲದಲ್ಲಿ ಆತಂಕವಾದಿಗಳು ನಮ್ಮ ಮನೆಯೊಳಗೆ ಸಿಪಾಯಿಗಳ ರು೦ಡ ಕಡಿದುಕೊಂಡು ಹೋಗುತ್ತಿದ್ದರು. ಶತ್ರುಗಳು ದೇಶದಲ್ಲಿ ನುಗ್ಗಿ ಸೈನಿಕರ ತಲೆ ಕಡಿಯುವುದು ಸಂಪೂರ್ಣ ನಿಂತಿದೆ. ಅವರಿಗೆ ಮೋದಿ ಈಗ ಸರಿಯಾದ ಉತ್ತರವನ್ನು ಕೊಡುತ್ತಿದ್ದಾರೆ ಎಂದು ರೋಷದಿಂದ ಹಲ್ಲು ಬಿಗಿಹಿಡಿದು ಮಾತನಾಡಿದರು. ಆದ್ದರಿಂದ ನಿಮ್ಮ ಮತಗಳನ್ನು ಬಿಜೆಪಿಗೆ ಹಾಕಿದಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ರಚನೆ ಮಾಡಬಹುದು ಎನ್ನುತ್ತಾ ನನ್ನ ಜೀವನದ ಕೊನೆ ಕ್ಷಣದವರೆಗೂ ನಾನು ನಿಮಗಾಗಿ ಜೀವಿಸುತ್ತೇನೆ. ಏಕೆಂದರೆ ಭಾರತದ 144 ಕೋಟಿ ಜನರು ನನ್ನ ಪರಿವಾರ ಎನ್ನುತ್ತಾ ದೇಶ ಸ್ವತಂತ್ರ ಪೂರ್ವದಲ್ಲಿ ರಾಮಮಂದಿರ ನಿರ್ಮಾಣವಾಗಬೇಕಾಗಿತ್ತು ಅದು ನಮ್ಮ ಪೂರ್ವಜರ ಕನಸು ಆಗಿತ್ತು. ಆದರೆ ಅದು ಈಗ ಬಿಜೆಪಿ ಸರ್ಕಾರದಲ್ಲಿ ನೆರವೇರಿದೆ. ಇಂತಹ ಪವಿತ್ರ ಕಾರ್ಯಗಳಿಗೆ ಕಾಂಗ್ರೆಸ್ ಗೆ ಆಮಂತ್ರಣ ನೀಡಿದರು ಅವರು ಇದನ್ನು ನಿರಕರಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 370ನೇ ಕಾಲಂ ತೆಗೆದು ಹಾಕಿದರೆ ರಕ್ತದ ಕೋಡಿ ಹರಿಯುತ್ತದೆ ಎಂದು ಹೇಳಿದ್ದರು. ಅದು ಏನಾಯಿತು? ಎಂದು ಪ್ರಶ್ನಿಸಿ,ಅದಕ್ಕೆ ವಿರೋಧ ಪಕ್ಷಗಳಲ್ಲಿ ಉತ್ತರವಿಲ್ಲ. ಬಿಜೆಪಿ ಸರ್ಕಾರ ಪ. ಜಾ, ಪ. ಪo. ದವರನ್ನು ಮೇಲೆ ತ್ತುವ ಉದ್ದೇಶವಿದ್ದು ಅದಕ್ಕಾಗಿ ರಾಷ್ಟ್ರಪತಿ ಹುದ್ದೆಯನ್ನು ಆದಿವಾಸಿ ಮಹಿಳೆಗೆ ನೀಡಿದೆ. ಪರಿಶಿಷ್ಟ ಜಾತಿಯ ರಾಮನಾಥ್ ಕೋವಿಂದಿಗೂ ರಾಷ್ಟ್ರಪತಿಯ ಅಧಿಕಾರವನ್ನು ನೀಡಿತ್ತು. ಕಾಂಗ್ರೆಸ್ ಗೆ ದೇಶದಲ್ಲಿನ ಸಂವಿಧಾನದ ಬಗ್ಗೆ ಗೌರವವಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೀವು ನಿಮ್ಮ ಮಕ್ಕಳಿಗಾಗಿ ಕಾಯ್ತರಿಸಿದ ಆಸ್ತಿ ಪಾಸ್ತಿ ಗಳನ್ನು ಇತರ ಜನಾಂಗಕ್ಕೆ ಹಂಚುವ ಉನ್ನಾರ ನಡೆಸಿದೆ. ನಿಮ್ಮ ಮಹತ್ವವಾದ ವೋಟನ್ನು ಇಲ್ಲಿನ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಹಾಕಿದಲ್ಲಿ ಅದು ನೇರವಾಗಿ ಮೋದಿಗೆ ಸೇರಲಿದೆ ಎಂದು ಹೇಳುತ್ತಾ ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಮೊಬೈಲ್ಗಳ ಟಾರ್ಚ್ ಮೂಲಕ ತೋರಿಸಿ ಎಂದಾಗ ಇಡೀ ಜನ ಸಮೂಹ ತಮ್ಮ ಮೊಬೈಲ್ ಟಾರ್ಚ್ಗಳನ್ನು ಹಚ್ಚಿ ಸಹಮತವನ್ನು ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಬಿಜೆಪಿ ರಾಜ್ಯದ್ಯಕ್ಷರಾದ ಬಿವೈ ವಿಜಯೇಂದ್ರ, ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀರಾಮುಲು, ದೇವೇಂದ್ರಪ್ಪ, ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ, ಕುರ್ಚಿ ಮಾಜಿ ಶಾಸಕ ಪಿ ರಾಜೀವ, ಬಂಗಾರ ಹನುಮಂತು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!