IMG-20240510-WA0027

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಸವ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 10- ಸರಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಇಂದು ವಿಶ್ವಗುರು, ಜಗಜ್ಯೋತಿ ಬಸವೇಶ್ವರರ 891 ನೇ ಜಯಂತಿ ಮತ್ತು ಶ್ರೀ ಹೇಮರಡ್ಡಿ ಮಲ್ಲಮ್ಮರವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ರಾದ ಶ್ರೀ ತಿಮ್ಮಾರೆಡ್ಡಿ ಮೇಟಿಯವರು ಆರಂಭದಲ್ಲಿ ಬಸವಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯವರ ಶುಭಾಶಯಗಳನ್ನು ತಿಳಿಸುತ್ತಾ ಬಸವಣ್ಣನವರು 12 ನೇ ಶತಮಾನದಲ್ಲಿ ವಚನಚಳುವಳಿಯ ಮೂಲಕ ಸಮಾಜ ಸುಧಾರಣೆ ಬಯಸಿ ಸಾಮಾಜಿಕ ಸುಧಾರಣೆಯ ಹರಿಕಾರರಾಗಿದ್ದರು. ಅಲ್ಲದೇ ಸಮಾನತೆಯ ಸಮಾಜ ಕಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಮತ್ತು ಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರು ಮಹಾ ಸಾದ್ವಿಯಾಗಿ ಸಾಂಸಾರಿಕ ತೊಂದರೆಯನ್ನು ಮೆಟ್ಟಿನಿಂತು ಭಕ್ತಿಯ ಮಾರ್ಗ ದಿಂದ ಶ್ರೀಶೈಲದ ಮಲ್ಲಿಕಾರ್ಜುನ (ಶಿವ ) ನ್ನು ಕಂಡು ವರವನ್ನು ಪಡೆದವರು. ಇವರ ಜೀವನವು ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದರು.

ಕನ್ನಡ ಉಪನ್ಯಾಸಕ ಮಹಾಂತೇಶ ನೆಲಾಗಣಿ ಬಸವಣ್ಣನವರು ಜಗತ್ತಿಗೆ ಕಾಯಕದ ಮಹತ್ವ ತಿಳಿಸಿದರು . ಹೇಮರೆಡ್ಡಿ ಮಲ್ಲಮ್ಮ ಇವರು ಕುಟುಂಬದ ಜವಾಬ್ದಾರಿಯ ಜೊತೆಗೆ ಅವಳು ತನ್ನ ಮೈದುನ ಶ್ರೀ ವೇಮನ ಮನ ಪರಿವರ್ತನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಭೋದಕೇತರ ಸಿಬ್ಬಂದಿ ಶ್ರೀ ನಿಂಗಪ್ಪ ಕೆ. ಹಾಗೂ ಕಚೇರಿ ಸಿಬ್ಬಂದಿ ಹಸನ್ ಸಾಬ್ ಹಾಗೂ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!