
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
ಒಂದೇ ಕುಟುಂಬದ ಮೂವರು ಸಾವು ಪ್ರಕರಣ
ಕೊಲೆ ಆರೋಪಿ ಆಸೀಪ್ ಬಂಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ತಾಲೂಕಿನ ಹೊಸಲಿಂಗಾಪುರ ಗ್ರಾಮದ ಯಾದವ್ ಕುಟುಂಬದಲ್ಲಿ ಮೂರು ಜನರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಭವಿಸಿದ ಪ್ರಕರಣ ಕ್ಕೆ 24 ತಾಸಿನಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಮಂಗಳವಾರ ಮೃತರು ರಾಜೇಶ್ವರಿ( 50), ವಸಂತಾ (32) ಸಾಯಿಧರ್ಮ ತೇಜ(5) ನಿಗೂಢವಾಗಿ ಮೃತಪಟ್ಟಿದ್ದರು.
ಕೊಪ್ಪಳ ಜಿಲ್ಲೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹೊಸಲಿಂಗಾಪುರ ಗ್ರಾಮದಲ್ಲಿ, ಫಿಲ್ಯಾದಿದಾರರ ತಂಗಿಯಾದ ವಸಂತಕುಮಾರಿ ಇವಳು ಈಗ್ಗೆ ಸುಮಾರು 04 ವರ್ಷಗಳಿಂದ ತನ್ನ ಗಂಡನೊಂದಿಗೆ ಮನಸ್ತಾಪಗೊಂಡು ತನ್ನ ಮಗು ಧರ್ಮತೇಜ ಹಾಗೂ ನನ್ನ ತಾಯಿಯಾದ ರಾಜೇಶ್ವರಿ ಇಬ್ಬರನ್ನು ಕರೆದುಕೊಂಡು ಹೊಸಲಿಂಗಾಪೂರ ಗ್ರಾಮದ ಹೆಚ್.ಜಿ. ರಾಮಲು ನಗರದಲ್ಲಿ ಒಂದು ಮನೆ ಮಾಡಿಕೊಂಡು ವಾಸವಿದ್ದು, ಈಗ್ಗೆ 01 ವರ್ಷದ ಹಿಂದೆ ಹೊಸಪೇಟೆಯ ಆರೀಪ್ ತಂದೆ ಅಲ್ಲಾಭಕ್ಷಿ ಎಂಬುವರೊಂದಿಗೆ ಪ್ರೀತಿಸಿ ಕಳೆದ 04 ತಿಂಗಳ ಹಿಂದೆ ಮದುವೆಯಾಗಿದ್ದು ಇರುತ್ತದೆ.
ಸೋಮವಾರ ಸಂಜೆ 05:00 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 07:30 ಗಂಟೆ ಮದ್ಯದ ಅವಧಿಯಲ್ಲಿ ರಾಜೇಶ್ವರಿ 50 ವರ್ಷ, ವಸಂತ ಕುಮಾರಿ 32 ವರ್ಷ ಮತ್ತು ಸಾಯಿ ಧರ್ಮತೇಜ 05 ವರ್ಷ ಇವರು ಹೊಸಲಿಂಗಾಪೂರ ಗ್ರಾಮದ ಮನೆಯಲ್ಲಿ ಶವವಾಗಿ ಬಿದ್ದಿದ್ದು, ರಾಜೇಶ್ವರಿ ಇವರ ಮುಂದಿನ ಹಲ್ಲು ಮುರಿದಿದ್ದು, ವಸಂತಕುಮಾರಿ ಈಕೆಯ ಮೂಗು ವಾಯಲ್ಲಿ ರಕ್ತ ಬಂದಿದ್ದು ಮತ್ತು ಮನೆಯಲ್ಲಿ ಇಬ್ಬರ ಕೈ ಬಳೆಗಳು ಒಡೆದು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಅವರ ಮರಣದಲ್ಲಿ ಸಂಶಯ ಕಂಡು ಬರುತ್ತಿರುವ ಕುರಿತು ಶ್ರೀಮತಿ ಜಯಶ್ರೀ ಗಂಡ ಮಹೇಶ ರೆಡ್ಡಿ, ಸಾ.ಅನಂತಪುರ,ಆಂಧ್ರಪ್ರದೇಶ ರಾಜ್ಯ ಇವರು ನೀಡಿದ ದೂರಿನ ಮೇಲಿಂದ ಮಂಗಳವಾರ ಸಂಜೆ ಮುನಿರಾಬಾದ ಠಾಣಾ ಯುಡಿಆರ್ ನಂ.33/2024 ಕಲಂ:174(ಸಿ) ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಇಂದು 29ರಂದು ಪಿದ್ಯಾದಿದಾರರು ಮನಃ ಠಾಣೆಗೆ ಹಾಜರಾಗಿ ನಿನ್ನೆ ಮೃತರ ಶವಸಂಸ್ಕಾರ ಮುಗಿಸಿ ವಾಪಸ್ ಮನೆಗೆ ಬಂದಾಗ ದಿನಾಂಕ 27.05.2024 ರಂದು ಸಂಜೆ ವಸಂತಕುಮಾರಿ ಮದುವೆಯಾದ ಆರೀಫನ ಅಣ್ಣ ಆಸೀಫ್ ಮನೆಗೆ ಬಂದಿದ್ದ ಅಂತಾ ಓಣಿಯ ಜನರಿಂದ ತಿಳಿದಿದ್ದು, ಆಸೀಪ್‌ನು ಆಗಾಗ ಮನೆಗೆ ಬಂದು ವಸಂತಾಕುಮಾರಿ ಇಕೆ ನಮ್ಮ ತಮ್ಮ ಆರೀಪ್‌ನಿಗೆ 2ನೇ ಮದುವೆ ಆಗಿರುವುದರಿಂದ ಮನೆಯಲ್ಲಿ ಅವನ ಹೆಂಡತಿ, ಮಕ್ಕಳು ಮನೆಯವರಿಗೆ ಬಹಳ ತೊಂದರೆ ಆಗೈತಿ. ನಿನ್ನಿಂದನಾ ನಮ್ಮ ಮನೆ ಹಾಳಾಗಿದ್ದು ಅಂತಾ ಫಿಯಾಧವಿದಾರರ ತಾಯಿ ರಾಜೇಶ್ವರಿ ಇವರೊಂದಿಗೆ ಆಗಾಗ ಜಗಳ ಮಾಡಿ ಹೋಗುತ್ತಿದ್ದ ಅದೇ ಸಿಟ್ಟು ಇಟ್ಟುಕೊಂಡು ಆಸೀಪ್‌ನು ಮೂರು ಜನರಿಗೆ ಕೊಲೆ ಮಾಡಿ, ಯಾವುದೇ ಸಾಕ್ಷಿ ಸಿಗದಂತೆ ಮಾಡಿ ಹೋದಂತೆ ಕಾಣುತ್ತದೆ ಎನ್ನಲಾಗಿತ್ತು.
ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತನ ಪತ್ತೆ ಮಾಡಿ, ಪ್ರಕರಣವನ್ನು ಭೇದಿಸಲು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ, ಹೇಮಂತ್‌ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಸುರೇಶ ಡಿ. ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಸುನೀಲ್ ಹೆಚ್ ಪಿ.ಎಸ್.ಐ (ಕಾ&ಸು) ಮುನಿರಾಬಾದ ಠಾಣೆ, ಶ್ರೀಮತಿ ಮೀನಾಕ್ಷಮ್ಮ ಪಿ.ಎಸ್.ಐ ಮುನಿರಾಬಾದ ಠಾಣೆ, ಮತ್ತು ಸಿಬ್ಬಂದಿಯವರಾದ ಕೃಷ್ಣ ಎ.ಎಸ್.ಐ, ಶಿವಕುಮಾರ ಹೆಚ್ಸಿ, ಮಹೇಶ ಸಜ್ಜನ್ ಹೆಚ್.ಸಿ, ರಂಗನಾಥ ಹೆಚ್.ಸಿ, ಶಿವಪುತ್ರಪ್ಪ ಹೆಚ್.ಸಿ, ಕೋಟೇಶ ಹೆಚ್ಸಿ, ಸಿಪಿಸಿ ಚಂದಾಲಿಂಗ, ಮಹ್ಮದರಫಿ, ಈರೇಶ, ಲೋಕೇಶ, ಶರಣಪ್ಪ, ಮಂಜುನಾಥ, ಪ್ರಸಾದ್ ಮತ್ತು ಸುಕೋ, ಬೆರಳಚ್ಚು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.
ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷೀಪ್ರ ಕಾರ್ಯಾಚರಣೆ ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ ಆಪಾದಿತ ಆಸೀಪ್ ತಂದೆ ಅಲ್ಲಾಭಕ್ಷಿ ವಯ: 28 ವರ್ಷ, ಉ: ಗೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಸಾ: ಜೆ.ಪಿ ನಗರ, ಹೊಸಪೇಟೆ, ಜಿಲ್ಲೆ ವಿಜಯನಗರ ಈತನನ್ನು ಇಂದು 29ರಂದು ಮುಂಜಾನೆ ಹೊಸಪೇಟೆಯ ಜೆ.ಪಿ. ನಗರದಲ್ಲಿ ಮನೆಯ ಹತ್ತಿರದಿಂದ ವಶಕ್ಕೆ ತಗೆದುಕೊಂಡು ವಿಚಾರಿಸಿದಾಗ, ಮೃತರಿಂದಲೇ ನಮ್ಮ ಕುಟುಂಭ ಹಾಳಾಗಿದ್ದರಿಂದ ಮತ್ತು ನಾನು ಇಷ್ಟಪಡುತ್ತಿದ್ದ ವಸಂತಕುಮಾರಿಯನ್ನು ರಾಜೇಶ್ವರಿಯು ತನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿಸಿದ ಸಿಟ್ಟಿನಿಂದ ರಾಜೇಶ್ವರಿ, ವಸಂತಕುಮಾರಿ ಮತ್ತು ಸಾಯಿ ಧರ್ಮತೇಜ ಇವರಿಗೆ ಗೋಡೆಗೆ ನೂಕಿ ಕುತ್ತಿಗೆ ಹಿಸುಕಿ ಮೂರು ಜನರನ್ನು ಕೊಲೆ ಮಾಡಿರುವದಾಗಿ ತಪ್ರೊಪ್ಪಿಕೊಂಡಿದ್ದು ಇರುತ್ತದೆ. ಆಪಾದಿತನಿಂದ ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.