4

ಬಳ್ಳಾರಿ ಸೆನ್ ಪೊಲೀಸರ ಕಾರ್ಯಾಚರಣೆ ವ್ಯಕ್ತಿ ಬಂಧನ 1,21,04,500 ರೂ.ಗಳು ವಶ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 19- ಆರ್ಥಿಕ, ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿ ಆತನಿಂದ 1,21,04,500/- ರೂಪಾಯಿಗಳು ನಗದು ಹಣ
ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಧ್ಯಪ್ರದೇಶ ಮೂಲದ ಅಜಯ್ ಕುಮಾರ್ ಜಾಸ್ವಾಲ್ ಎಂಬ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸಿ ಆತನಿಂದ 1,21,04,500 ಹಣವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆರೋಪಿತನ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ ರೂ. 27,97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ. ಒಟ್ಟು ರೂ. 1,49,02,082/- ಹಣವನ್ನು ಮತ್ತು ಆರೋಪಿತನು ಅನ್‌ಲೈನ್ ವಂಚನೆಗೆ ಉಪಯೋಗಿಸಿದ ಒಂದು ವಿವೋ ಕಂಪನಿಯ ಮೊಬೈಲ್‌ ಜಪ್ತಿ ಮಾಡಿರುತ್ತಾರೆ.

ಇದೇ ಸೆಪ್ಟಂಬರ್ 3ರಂದು ರಂದು ವರದಿಯಾದ ಬಳ್ಳಾರಿ ಸಿಇಎನ್ ಪೊಲೀಸ್‌ ಠಾಣೆಯ ಗುನ್ನೆ ನಂ. 72/2024 ಕಲಂ, 66 (ಸಿ), 66 (ಡಿ), ಐಟಿ ಯಾಕ್ಸ್ ಮತ್ತು ಕಲಂ, 318 (3) ಬಿ.ಎನ್.ಎಸ್.ಎಕ್ಸ್ 2023 ಪ್ರಕರಣಧನ್ವಯ ಬಳ್ಳಾರಿ ನಗರದಲ್ಲಿರುವ ಹಿಂದುಸ್ತಾನ್ ಮೆಟಲ್ ಪ್ರವೇಟ್ ಲಿಮಿಟೆಡ್ ಕಂಪನಿಯವರು ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಕೋಲ್ ಖರೀದಿ ಮಾಡುತ್ತಿದ್ದು, ಅವರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಹಣವನ್ನು ಅನ್‌ಲೈನ್‌ ಮೂಲಕ ವರ್ಗಾವಣೆ ಮಾಡುತ್ತಿದ್ದರು.

ಈ ಮಾಹಿತಿಯನ್ನು ಸಂಗ್ರಹಿಸಿದ ಆರೋಪಿತನು ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆ ಆಗಿದೆ ಎಂದು ಫೇಕ್ ಇ- ಮೇಲ್ ಐಡಿ ಮೂಲಕ ತನ್ನ ಮದ್ಯಪ್ರದೇಶ ರಾಜ್ಯದ ಇಂಡಸ್ ಲ್ಯಾಂಡ್ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳುಹಿಸಿ ಅನ್‌ಲೈನ್ ವಂಚನೆ ಮೂಲಕ ತನ್ನ ಬ್ಯಾಂಕ್ ಖಾತೆಗೆ ಹಣ ರೂ. 2,11,50,224/- ಜಮಾ ಮಾಡಿಸಿಕೊಂಡು ಕಂಪನಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾನೆ.

ಪೊಲೀಸ್ ಅಧೀಕ್ಷಕರು, ಬಳ್ಳಾರಿ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಮತ್ತು 2 ಬಳ್ಳಾರಿ ಇವರುಗಳ ಮಾರ್ಗದರ್ಶನದಲ್ಲಿ ಬಳ್ಳಾರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿ.ಎಸ್.ಪಿ ಡಾ.ಸಂತೋಷ ಚವ್ಹಾಣ್ ರವರ ನೇತೃತ್ವದ ತಂಡ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್‌ ರಮಾಕಾಂತ್. ವೈ.ಹೆಚ್. ಮತ್ತು ಸಿಬ್ಬಂದಿಯವರಾದ ಎ.ಎಸ್.ಐ.ಎಂಜಿ ತಿಪ್ಪೇರುದ್ರಪ್ಪ, ಹನುಮಂತರೆಡ್ಡಿ,.ಯಲ್ಲೇಶಿ, ವೆಂಕಟಶ್ ರವರೊಂದಿಗೆ ಮಧ್ಯಪ್ರದೇಶ ರಾಜ್ಯಕ್ಕೆ ಹೋಗಿ ತನಿಖೆಕೈಗೊಂಡು, ತಾಂತ್ರಿಕ ಸಹಾಯದೊಂದಿಗೆ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಆರೋಪಿ ಅಜಯ್ ಕುಮಾರ್ ಜಸ್ವಾಲ್ ನನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ಆರೋಪಿತನಿಂದ ಹಿಂದುಸ್ತಾನ್ ಮೆಟಲ್ ಕಂಪನಿಗೆ ವಂಚಿಸಿದ ನಗದು ಹಣ ರೂ. 1,21,04,500/-ವಶಪಡಿಸಿಕೊಂಡಿದ್ದು ಮತ್ತು ಆರೋಪಿತನ ಬೇರೆ ಬೇರೆ ಖಾತೆಗಳಲ್ಲಿದ್ದ ರೂ. 27,97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ. ಒಟ್ಟು ರೂ. 1,49,02,082/- ಹಣವನ್ನು ಹಾಗೂ ಆರೋಪಿತನು
ಅನ್‌ಲೈನ್ ವಂಚನೆಗೆ ಉಪಯೋಗಿಸಿದ ಒಂದು ವಿವೋ ಕಂಪನಿಯ ಮೊಬೈಲ್ ಜಫ್ತು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿರುತ್ತಾರೆ.

ಬಳ್ಳಾರಿ ಜಿಲ್ಲಾ ಪೊಲೀಸ್ ಅಧಿಕ್ಷಕರು, ಪ್ರಕರಣವನ್ನು ಭೇದಿಸಿದ ಸೆನ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!