
ಮಾಸಿಕ ಶಿವಾನಭವ ಗೋಷ್ಠಿ : ವಚನ ಸಾಹಿತ್ಯ ಚಿಂತನೆ ಅವಶ್ಯ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 25- 12ನೇ ಶತಮಾನದಲ್ಲಿ ಶರಣರು ನಾಡಿಗೆ ನೀಡಿದ ವಚನ ಸಾಹಿತ್ಯ ಕೊಡುಗೆ ಹಿರಿದು ಎಂದು ರಾಯಚೂರು ಬಸವ ಕೇಂದ್ರ ಜಿಲ್ಲಾಧ್ಯಕ್ಷ ವೀರಭದ್ರಪ್ಪಣ್ಣ ಕುರಕುಂದಿ ಹೇಳಿದರು.
ತಾಲೂಕಿನ ಮರಕಟ್ ಗ್ರಾಮದಲ್ಲಿ ಚಿದಾನಂದಪ್ಪ ಬಾಲಪ್ಪ ಬಳ್ಳಾರಿರವರ ೩೩ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸದ್ಗುರು ಶರಣರ ಸ್ಮರರ್ಣಾಥವಾಗಿ ೧೮೯ನೇ ಮಾಸಿಕ ಶಿವಾನಭವ ಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ರಾತ್ರಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಯುವಕರಿಗೆ, ಮಕ್ಕಳಿಗೆ ವಚನ ಸಾಹಿತ್ಯದ ಚಿಂತನೆ ನಿರ್ಮಾಣವಾಗುವ ಕೆಲಸ ವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯದ ಮನೊಭಾವ ಬೆಳೆಸಿಕೊಳ್ಳಬೇಕಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಶಿವಾನುಭವ ಮೂಲಕ ಅರಿವು ಮೂಡಿಸುತ್ತಿದ್ದು ಬದುಕು ಕಟ್ಟಿಕೊಳ್ಳಬೇಕು. ಸರಿಯಾದ ಶಿಕ್ಷಣದಿಂದ ಮಾತ್ರ ಜೀವನ ಸಾಗಿಸಬಹುದು. ಸುಮಾರು ೨೧ ಸಾವಿರ ವಚನ ಲಭ್ಯವಾಗಿದೆ. ಇನ್ನೂ ಕೋಟಿ ವಚನಗಳ ಸಿಗದೇ ಇರುವುದು ನೊವಾಗಿದೆ. ಜಗತ್ತಿನ ಚೈತನ್ಯ ಬೆಳೆಸಿಕೊಳ್ಳಲು ವಚನ ಸಾಹಿತ್ಯಕ್ಕೆ ತನ್ನದೇಯಾದ ಶಕ್ತಿ ಅಡಗಿದೆ ಎಂದರು.
ಬೇಲೂರು-ಬದಾಮಿ ಗುರುಬಸವೇಶ್ವರ ಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪೂರ್ವಜರನ್ನು ನೆನೆಸಿಕೊಳ್ಳುವ ಮೂಲಕ ಉತ್ತಮವಾದ ಸಂಸ್ಕಾರ ಹೊಂದಬೇಕು.ಗ್ರಾಮಗಳಲ್ಲಿ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ್ಳಿಯ ಶಿವಾನಂದಮಠದ ಶಿವಾನಂದ ಸ್ವಾಮೀಜಿ, ನಿಲೋಗಲ್‌ದ ಶಿವನಾಗಯ್ಯ ಹಿರೇಮಠ, ಶರಣರಾದ ವಿರುಪಾಕ್ಷಪ್ಪ ರಾಯರಡ್ಡಿ, ಬಸವರಾಜಪ್ಪ ಇಂಗದಾಳ, ಹರ್ಷಾನಂದ ಗೂರೂಜಿ, ಶ್ರೀಕಾಂತಗೌಡ ಪಾಟೀಲ್, ಅಮರೇಶಪ್ಪ ಬಳ್ಳಾರಿ, ಚನ್ನಬಸಪ್ಪ ಬಳ್ಳಾರಿ, ಹನುಮಗೌಡ ಬಳ್ಳಾರಿ, ಹನುಮಂತಪ್ಪ ಹುಣಿಸಿಹಾಳ ಹಾಗೂ ಇತರರು ಇದ್ದರು.