
ಕುಷ್ಟಗಿ: ಅನುದಾನಿತ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ
ಕುಷ್ಟಗಿ ತಾಲೂಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷರಾಗಿ ಕೆ. ಪಂಪಾಪತಿ ಸಾಸ್ವಿಹಾಳ, ಜಿಲ್ಲಾ ಪ್ರತಿನಿಧಿಯಾಗಿ ಬಸವರಾಜ ತುಂಬದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಶ್ರೀಬುತ್ತಿಬಸವೇಶ್ವರ ಪ್ರೌಢ ಶಾಲೆಯಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಒಟ್ಟು ನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಅದರಲ್ಲಿ ಇಬ್ಬರು ನಾಮಪತ್ರವನು ವಾಪಸ್ ಪಡೆದಿದ್ದರು, ಕೆ. ಪಂಪಾಪತಿ ಸಾಸ್ವಿಹಾಳ ತಾಲೂಕಾ ಅಧ್ಯಕ್ಷರಾಗಿ, ಬಸವರಾಜ ಯಮನಪ್ಪ ತುಂಬದ ಹೂಲಗೇರಾ ಜಿಲ್ಲಾ ಪ್ರತಿನೀಧಿಯಾಗಿ ಅವಿರೋದವಾಗಿ ಆಯ್ಜೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿದ್ದ ವಿಎಸ್ ಕಾಡಗಿಮಠ ಘೋಷಿಸಿದರು.
ನಂತರ ಅಧ್ಯಕ್ಷ ಕೆ. ಪಂಪಾಪತಿ ಸಾಸ್ವಿಹಾಳ. ಬಸವರಾಜ ಯಮನಪ್ಪ ತುಂಬದ ಹೂಲಗೇರಾ ಜಿಲ್ಲಾ ಪ್ರತಿನೀಧಿಯಾಗಿ ಹಾಗೂ ಜಿಲ್ಲಾ ಪ್ರತಿನಿಧಿಯವರನ್ನು ತಾಲೂಕಾ ಅನುದಾನಿತ ಶಿಕ್ಷಕರು ಸನ್ಮಾನಿಸಿದರು.
ಅನುದಾನಿತ ಪ್ರಾಥಮಿಕ ಶಾಲೆ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು, ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಶಿಕ್ಷಕರು ಹಾಗೂ ಇತರರಿದ್ದರು.
ಶಿಕ್ಷಕರ ಪಿ ಎಸ್ ಮಳಗಿ ನಿರೂಪಿಸಿದರು. .ಗವಿಸಿದ್ದಪ್ಪ ನಾಗಲೀಕರ್ ವಂದಿಸಿದರು.