
ಧಾರ್ಮಿಕ ಪುರಾಣ ನಡೆಸಿಕೊಂಡು ಮುನ್ನಡೆಯಿರಿ : ಮಹಾಂತ ದೇವರು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 13- ಗ್ರಾಮೀಣ ಭಾಗದಲ್ಲಿ ಪುರ್ವಜರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ದೇವಿಯ ಪುರಾಣ ಪರಂಪರೆ ನಿರಂತರವಾಗಿ ನಡೆಯಬೇಕು ಎಂದು ತಾಳಿಕೋಟೆ ವಿಭೂತಿ ಮಠದ ಮಹಾಂತ ದೇವರು ಹೇಳಿದರು.
ತಾಲೂಕಿನ ಮ್ಯಾದನೇರಿ ಗ್ರಾಮದ ಆರಾಧ್ಯ ದೇವತೆ ಶ್ರೀ ದ್ಯಾಮಾಂಭಿಕಾ ದೇವಿ ದೇವಸ್ಥಾನದಲ್ಲಿ ಶರನ್ನವರರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ೧೩ನೇ ವರ್ಷದ ಶ್ರೀ ದ್ಯಾಮಾಂಭಿಕಾದೇವಿ ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು.
ಅನಾದಿ ಕಾಲದಿಂದಲೂ ಐತಿಹ್ಯ ಪುರಾಣ ಧಾರ್ಮಿಕ ಕಾರ್ಯಕ್ರಮಗಳ ನಡೆಯುತ್ತಾ ಬರಲಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ಕಳೆದ ೧೩ ವರ್ಷಗಳಿಂದ ಬಿಡುವಿಲ್ಲದೇ ದೇವಿಯ ಉತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿAದ ವೈಭವ ಪೂರ್ಣವಾಗಿ ಆಚರಿಸುತ್ತಾ ಬರಲಾಗಿದೆ. ಇಡೀ ಗ್ರಾಮವೇ ತಾಲೂಕಿನಲ್ಲಿಯೇ ಮಾದರಿಯಾಗಿ ಹೊರ ಹೊಮ್ಮಿದೆ. ಇದು ಭಕ್ತಿಯ ಸಂಕೇತಕ್ಕೆ ಬಹಳ ಹೆಸರುವಾಸಿ. ಹೀಗಾಗಿ ಅದ್ಬುತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಸಾಮೂಹಿಕ ವಿವಾಹ : ಶರನ್ನವರಾತ್ರಿ ದಸರಾ ಉತ್ಸವ ಹಿನ್ನೆಲೆ ಶುಕ್ರವಾರ ದಂದು ಗ್ರಾಮದ ದ್ಯಾಮಾಂಭಿಕಾ ದೇವಿಯ ಆವರಣದಲ್ಲಿ ೧೦ ನವ ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ನವ ವಧು ವರರು ಇಂದಿನ ದಿನಮಾನಗಳಲ್ಲಿ ಪರಸ್ಪರ ಹೊಂದಾಣಿಕೆ ಮನೋಭಾವದಿಂದ ಜೀವನ ನಡೆಸಬೇಕು.ಸದಾ ಹಸ್ಮಖೀಯಾಗಿ ಬದುಕು ನಡೆಸಬೇಕು ಎಂದು ಆಶೀರ್ವಚನದ ಮೂಲಕ ತಾಳಿಕೋಟಿ ಮಹಾಂತ ದೇವರು ಶುಭ ಹಾರೈಯಿಸಿದರು.
ಅದ್ಧೂರಿ ಮೆರವಣಿಗೆ : ಗ್ರಾಮದ ದೇವಿಯ ದೇವಸ್ಥಾನದಿಂದ ಆರಂಭಗೊAಡ ಮೆರವಣಿಗೆ ಬಹಳ ವಿಜೃಂಭಣೆಯಿ0ದ ಸಾಗಿ ಬಂದಿತು.ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾರ್ಗವಾಗಿ ದೇವಸ್ಥಾನದ ಕಟ್ಟೆವರಗೆ ವೈಭವದಿಂದ ಬರಲಾಗಿದೆ. ಯುವಕರು ಕುಣಿದು ಕುಪ್ಪಿಸಿ ಹಾಡಿದರು, ಶ್ರೀ ದ್ಯಾಮಾಂಭಿಕಾ ದೇವಿಯ ಭಾವಚಿತ್ರ ಮೆರವಣಿಗೆ ಜರುಗಿತು.
ಮಹಾ ಮಂಗಲೋತ್ಸವ : ದಸರಾ ಕೊನೆಯ ದಿನದಂದು ಗ್ರಾಮದಲ್ಲಿ ಸುಮಾರು ವಾರಗಟ್ಟೆಲೇ ನಡೆದ ದೇವಿಯ ಪುರಾಣ ಸಂಪನ್ನಗೊ0ಡಿತು. ೧೩ ವರ್ಷಗಳಿಂದ ಸತತವಾಗಿ ದೇವಿಯ ಕಾರ್ಯಕ್ರಮ ನಡೆಸಲಾಗಿದೆ. ಈ ಸಂದರ್ಭದಲ್ಲಿ ಲಿಂಗದಳ್ಳಿ ಎಚ್.ಚಂದ್ರಶೇಖರ್, ತಬಲಾ ವಾದಕ ಅಯ್ಯಪ್ಪ ಬಡಿಗೇರ್ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಗ್ರಾಮದ ಮುಖಂಡರು ಇನ್ನಿತರರು ಪಾಲ್ಗೊಂಡಿದ್ದರು.