
RIDF-29ರ ಯೋಜನೆ ಅಡಿಯಲ್ಲಿ 191.38 ಲಕ್ಷ ರೂ. ಕಾಮಗಾರಿ : ಶಾಸಕರಿಂದ ಭೂಮಿ ಪೂಜೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 8- ನಗರದ ಎ.ಪಿ.ಎಂ.ಸಿ ಮುಖ್ಯ ಮಾರುಕಟ್ಟೆಯ ಪ್ರಾಂಗಣದಲ್ಲಿ ಶಾಸಕ ಹೆಚ್ ಆರ್ ಗವಿಯಪ್ಪ ರವರು 2023-24ನೇ ಸಾಲಿನ RIDF-29ರ ಯೋಜನೆ ಅಡಿಯಲ್ಲಿ 191.38 ಲಕ್ಷ ರೂ. ಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಇಂದು ಭೂಮಿ ಪೂಜಿ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನಿರ್ಮಿತಿ ಕೇಂದ್ರದಿಂದ ಇಲ್ಲಿ ಈಗಾಗಲೇ 4 ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಕೋಲ್ಡ್ ಸ್ಟೋರೇಜ್ ಗಾಗಿ ಕ್ರಿಯೆ ಯೋಜನೆ ನಡೆದಿದೆ ಆದಷ್ಟು ಬೇಗ ಪ್ರೊಪೋಸಲ್ ಕಳುಹಿಸಿ ಕೊಡಲಾಗುವುದು. ಮುಂದಿನ ವರ್ಷದಲ್ಲಿ ಎಲ್ಲಾ ಕಾಮಗಾರಿಗಳು ಸಂಪೂರ್ಣ ಮುಕ್ತಾಯಗೊಳಿಸಲಾಗುವುದು.
ಎಪಿಎಂಸಿ ತರಕಾರಿ ಮಾರ್ಕೆಟ್ ಎಂಬಂತಾಗಿದೆ, ಹಾಗಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಮೇಲೆ ಮಾರುತ್ತಿರುವ ತರಕಾರಿ ವ್ಯಾಪಾರಿಗಳಿಗೆ ಒಳಗಡೆ ಮಾರಲು, ಸುವಸ್ಥಿತವಾಗಿ ಒಂದು ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನೂ 2-3 ರಸ್ತೆಗಳು ಮಾಡುವುದು ಬಾಕಿ ಇದೆ ಒಟ್ಟಿನಲ್ಲಿ ಎರಡು ಮೂರು ವರ್ಷಗಳಲ್ಲಿ ಎ.ಪಿ.ಎಂ.ಸಿ ಯನ್ನು ಸ್ವಚ್ಛವಾಗಿ ಕಾಣುವಂತೆ ಹಾಗೂ ಉತ್ತಮ ರೀತಿಯಲ್ಲಿ ವ್ಯಾಪಾರ ಆಗುವಂತೆ ಮಾಡಲು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಅವೆಲ್ಲವೂ ಮಾಡಲಾಗುವುದು ಎಂದರು.
ಎ.ಪಿ.ಎಂ.ಸಿ ಕಾರ್ಯದರ್ಶಿ ಸಿದ್ದರಾಮಯ್ಯ ಸ್ವಾಮಿಗೆ ಇಲ್ಲಿ ಸಂಗ್ರಹವಾಗುತ್ತಿರುವ ಆದಾಯದ ಮತ್ತು ಅಭಿವೃದ್ಧಿಯ ಬಗ್ಗೆ ಪ್ರತಿ ವಾರಕ್ಕೊಮ್ಮೆ ಬಂದು ವರದಿ ನೀಡಬೇಕು ಎಂದು ಖಡಕ್ಕಾಗಿ ಸೂಚನೆ ಕೊಟ್ಟರು.
ಈ ಸಂಧರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ನಿಂಗಪ್ಪ ಗುಜ್ಜಲ್, ಬಸವಜ್ ದೇವರಮನಿ, ಕಣ್ಣೀಶ್ ಕಮಲಾಪುರ ನಾಮ ನಿರ್ದೇಶತ ಸದಸ್ಯರು, ಎ.ಪಿ.ಎಂ.ಸಿ ಕಾರ್ಯದರ್ಶಿ ಸಿದ್ದರಾಮಯ್ಯ ಸ್ವಾಮಿ, ಕೃಷಿ ಮಾರುಕಟ್ಟೆಯ ಎಇಇ ಸುದರ್ಶನ್, ಸೋಮಶೇಖರ್ ಬಣ್ಣದಮನೆ , ತೋಟಪ್ಪ, ವರ್ತಕರು ಇದ್ದರು.