
ಡಿ , 01 ರಂದು 2000 – 01 ನೇ ಸಾಲಿನ
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನೆಕರುನಾಡ ಬೆಳಗು ಸುದ್ದಿ
ಕೊಪ್ಪಳ, 29- ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ 2000- 2001ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಡಿ, 01 ರಂದು ರವಿವಾರ ಬೆಳಿಗ್ಗೆ 10ಕ್ಕೆ ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲಾ ಆವರಣದಲ್ಲಿ ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದು , ಶ್ರೀ ಗ ವಿ ಟ್ರಸ್ಟ್ ಅಧ್ಯಕ್ಷ ಡಾ, ಆರ್ ಮರೇಗೌಡ ಉದ್ಘಾಟಿಸಿಲಿದ್ದಾರೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಅಮರೇಶ ಕರಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸನ್ಮಾನ : ಈ ಸಂದರ್ಭದಲ್ಲಿ ಶಿಕ್ಷರಾದ ಬಿ, ವ್ಹಿ, ರಾಮರಡ್ಡಿ . ಪಿ,ಟಿ ಬಡಿಗೇರ. ವಿ, ಕೆ ಜಾಗಟಗೇರಿ. ಟಿ, ವ್ಹಿ ಮಾಗಳದ. ಜಿ ಎಸ್ ಚಲವಾದಿ ಸೇರಿದಂತೆ 33 ಶಿಕ್ಷಕರಿಗೆ ಸನ್ಮಾನ ಹಾಗೂ ಗುರುವಂದನೆ ಜರುಗಲಿದೆ ಸರ್ವರು ಆಗಮಿಸಿ ಯಶಸ್ವಿ ಗೋಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬಸವರಾಜ -9900187827
![]()